Veerendra Heggade: ಹುದ್ದೆಗಾಗಿ ಹಂಬಲಿಸಿದವನು ನಾನಲ್ಲ, ಕೇಳಿದವನೂ ಅಲ್ಲ: ವಿರೇಂದ್ರ ಹೆಗ್ಗಡೆ

ಈ ಕುರಿತಾಗಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದು, ಡಾ. ವೀರೇಂದ್ರ ಹೆಗಡೆ ಅವರಿಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಇದು ಕನ್ನಡ ನಾಡಿನ ಸಮಗ್ರ ಜನತೆಗೆ ಸಂತಸದ, ಗೌರವದ ವಿಚಾರ ಎಂದು ಹೇಳಿದರು.

Veerendra Heggade: ಹುದ್ದೆಗಾಗಿ ಹಂಬಲಿಸಿದವನು ನಾನಲ್ಲ, ಕೇಳಿದವನೂ ಅಲ್ಲ: ವಿರೇಂದ್ರ ಹೆಗ್ಗಡೆ
Veerendra Heggade in Dharmasthala Reacts to Offer of Rajya Sabha Membership
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 07, 2022 | 11:41 AM

ರಾಮನಗರ: ರಾಜ್ಯಸಭೆಗೆ ನಾಮನಿರ್ದೇಶನ (Rajya Sabha Membership) ಆಗುತ್ತೇನೆ ಎಂಬ ಕಲ್ಪನೆ ಕೂಡ ಇಲ್ಲ. ನಾನು ಅದರ ಹಿಂದೆ ಹೋಗುವವನು ಅಲ್ಲ. ನನಗಾಗಿ ನಾನು ಇದನ್ನ ಬೇಡುವವನು ಅಲ್ಲ, ಕೇಳುವವನು ಅಲ್ಲ. ಅವರು ಕೊಟ್ಟಾಗ ನನಗೆ ಏನು ಅನಿಸಿತ್ತು ಅಂದರೆ, ದೇಶವ್ಯಾಪಿ ತಮ್ಮ ಸೇವೆಯನ್ನ ವಿಸ್ತರಿಸಲು ಒಳ್ಳೆಯ ರಂಗಸ್ಥಳವಾಗಿದೆ ಎಂದು ರಾಜ್ಯಸಭೆಗೆ ನಾಮನಿರ್ದೇಶನ ಹಿನ್ನೆಲೆ, ಟಿವಿ 9ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ (Veerendra Heggade) ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಹೇಳಿಕೆ ನೀಡಿದರು. ನೆನ್ನೆ ರಾತ್ರಿವರೆಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಆದಾದ ಮೇಲೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ನಮ್ಮ ಜನತೆ ಬಹಳ ಸಂತೋಷ ಪಟ್ಟಿದ್ದಾರೆ ಎಂದು ಹೇಳಿದರು. ನನಗೆ ಯಾವುದೇ ರಾಜಕೀಯ ಆಸಕ್ತಿ ಇಲ್ಲ. ನನಗೆ ಮಂಜುನಾಥ ಸ್ವಾಮಿಯ, ಹೆಗ್ಗೆಡೆಯ ಪೀಠಕ್ಕಿಂತ ದೊಡ್ಡದ್ದು ಯಾವುದು ಇಲ್ಲ ಎಂದು ಹೇಳಿದರು.

ನಮ್ಮ ಸೇವಾ ಕ್ಷೇತ್ರಕ್ಕೆ ಅನುಕೂಲವಾಗುವ ಕಾರ್ಯಕ್ಷೇತ್ರ ಮೋದಿ ಅವರಿಗೆ ಗಮನ ಸೆಳೆದಿದೆ ಎಂಬುದು ತುಂಬ ಸಂತೋಷ. ನಮ್ಮ ಒಳ್ಳೆಯ ಕೆಲಸ ದೇಶದಾದ್ಯಂತ ವಿಸ್ತರಿಸಬೇಕು. ಮೋದಿಯವರು ತಲೆ ಒಳಗೆ ಗಂಟು ಹಾಕಿಕೊಂಡಿದ್ದರೋ ಗೊತ್ತಿಲ್ಲ. ನಾವು ಮೋದಿ ಅವರನ್ನ ಅತಿಥಿಯಾಗಿ ಸ್ವೀಕಾರ ಮಾಡಿದ್ದೆವೂ. ಈಗ ಅವರು ತಲೆಯಲ್ಲಿ ಯೋಚನೆ ಮಾಡಿಕೊಂಡಿರಬೇಕು ಅದು ನಮಗೆ ಗೊತ್ತಾಗುವುದಿಲ್ಲ ಎಂದರು.

ಇದನ್ನೂ ಓದಿ: Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೇಗಿದೆ?

ನಮಗೆ ಸಂಸದರು ಎಂದು ಕರೆಸಿಕೊಳ್ಳಲು ಅಭಿಮಾನ ಇದೆ. ರಾಜಕೀಯ ಎಂದು ಕರೆಸಿಕೊಳ್ಳಲು ಇಷ್ಟ ಪಡುವುದಿಲ್ಲ. ನನಗೆ ಇಡಿಸುವುದಿಲ್ಲ ನಮ್ಮ ಯೋಗ್ಯತೆ ವಿಷಯವೂ ಅಲ್ಲ. ನಮ್ಮ ಕಾರ್ಯಕ್ರಮ ವಿಸ್ತರಣೆ ಮಾಡಲು, ಪ್ರಸ್ತಾಪ ಮಾಡಲು ನಾನು ಪ್ರಯತ್ನ ಪಡುತ್ತೇನೆ. ಇಷ್ಟು ಜನ ಪ್ರೀತಿ ಮಾಡುತ್ತಾರೆ ಅದೇ ನನಗೆ ಸಂತೋಷ. ನಮ್ಮ ಕಾರ್ಯಕ್ರಮ ಮುಂದುವರೆಯುತ್ತದೆ. ರಾಜ್ಯಸಭಾ ಸದಸ್ಯತ್ವ ಇನ್ನು ತಲೆಗೆ ಹೋಗಿಲ್ಲ ಎಂದು ಹೇಳಿದರು.

ಇದು ಕನ್ನಡ ನಾಡಿನ ಸಮಗ್ರ ಜನತೆಗೆ ಸಂತಸದ ವಿಚಾರ: ಸಿಎಂ ಬೊಮ್ಮಾಯಿ

ಈ ಕುರಿತಾಗಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದು, ಡಾ. ವೀರೇಂದ್ರ ಹೆಗಡೆ ಅವರಿಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಇದು ಕನ್ನಡ ನಾಡಿನ ಸಮಗ್ರ ಜನತೆಗೆ ಸಂತಸದ, ಗೌರವದ ವಿಚಾರ. ಅವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿಯಷ್ಟೇ ಅಲ್ಲ, ಅವರ ಸೇವಾ ಕಾರ್ಯಗಳು ನಾಡಿನಾದ್ಯಂತ ಬಹಳ ಪ್ರಸಿದ್ಧಿ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: Cooking Oil Price: ಅಗ್ಗವಾಗಲಿದೆ ಅಡುಗೆ ಎಣ್ಣೆ; 1 ವಾರದೊಳಗೆ ಬೆಲೆ ಇಳಿಸಲು ಸರ್ಕಾರ ಸೂಚನೆ

Published On - 11:40 am, Thu, 7 July 22