‘ನಾವಿನ್ನೂ ಹೆಸರು ಅಂತಿಮಗೊಳಿಸದೆ..ನೀವು ಹೇಗೆ ಉಲ್ಲೇಖಿಸುತ್ತೀರಿ?’ -ಮಾಧ್ಯಮಗಳ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ಸಿಜೆಐ ರಮಣ

| Updated By: Lakshmi Hegde

Updated on: Aug 18, 2021 | 4:10 PM

N.V.Ramana: ನ್ಯಾಯಮೂರ್ತಿಗಳ ನೇಮಕಾತಿ ತುಂಬ ಮಹತ್ವವಾದ ಕೆಲಸ. ಈ ಪ್ರಕ್ರಿಯೆಯ ಸೂಕ್ಷ್ಮತೆಯನ್ನು ನನ್ನ ಮಾಧ್ಯಮ ಸ್ನೇಹಿತರು ಅರ್ಥ ಮಾಡಿಕೊಳ್ಳಬೇಕು. ನೇಮಕಾತಿಗೂ ಮುನ್ನವೇ ಮಾಧ್ಯಮಗಳು ಇವತ್ತು ಸುದ್ದಿ ಪ್ರಕಟಿಸಿದ್ದು ಸರಿಯಲ್ಲ ಎಂದು ಎನ್​.ವಿ.ರಮಣ ಹೇಳಿದ್ದಾರೆ.

ನಾವಿನ್ನೂ ಹೆಸರು ಅಂತಿಮಗೊಳಿಸದೆ..ನೀವು ಹೇಗೆ ಉಲ್ಲೇಖಿಸುತ್ತೀರಿ? -ಮಾಧ್ಯಮಗಳ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ಸಿಜೆಐ ರಮಣ
ಎನ್.ವಿ.ರಮಣ
Follow us on

ಸುಪ್ರೀಂಕೋರ್ಟ್​ ನ್ಯಾಯಮೂರ್ತಿ (Supreme Court Judges)ಗಳ ನೇಮಕ ಸಂಬಂಧ ಕೊಲಿಜಿಯಂ ಸಭೆ-ಶಿಫಾರಸ್ಸಿನ ಕುರಿತು ಮಾಧ್ಯಮಗಳು ಊಹಾತ್ಮಕ ವರದಿ ಪ್ರಕಟಿಸಿದ್ದು ತುಂಬ ಬೇಸರ ತಂದಿದೆ. ಕೆಲವು ಹೆಸರುಗಳನ್ನೂ ಉಲ್ಲೇಖಿಸಿ ವರದಿ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ (CJI) ಎನ್​. ವಿ.ರಮಣ (N V Ramana) ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಕ್ರಿಯೆಗಳು ಇನ್ನೂ ನಡೆಯುತ್ತಿವೆ. ಇದುವರೆಗೂ ಯಾರ ಹೆಸರನ್ನೂ ಅಂತಿಮಗೊಳಿಸಲಾಗಿಲ್ಲ. ಅಂಥದ್ದರಲ್ಲಿ ಮಾಧ್ಯಮಗಳೂ ತಮ್ಮ ಊಹೆಗೆ ತಕ್ಕಂತೆ, ಹೆಸರುಗಳನ್ನು ಉಲ್ಲೇಖಿಸಿ ವರದಿ ಮಾಡುವುದು ತುಂಬ ಹಾನಿಕಾರವಾಗಿದೆ. ಇದರಿಂದ ಹೆಸರಿಸಲಾದ ನ್ಯಾಯಮೂರ್ತಿಗಳ ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿಗಳ ನೇಮಕಾತಿ ತುಂಬ ಮಹತ್ವವಾದ ಕೆಲಸ. ಈ ಪ್ರಕ್ರಿಯೆಯ ಸೂಕ್ಷ್ಮತೆಯನ್ನು ನನ್ನ ಮಾಧ್ಯಮ ಸ್ನೇಹಿತರು ಅರ್ಥ ಮಾಡಿಕೊಳ್ಳಬೇಕು. ನೇಮಕಾತಿಗೂ ಮುನ್ನವೇ ಮಾಧ್ಯಮಗಳು ಇವತ್ತು ಸುದ್ದಿ ಪ್ರಕಟಿಸಿದ್ದು ಸರಿಯಲ್ಲ. ಮಾಧ್ಯಮದವರ ಬೇಜವಾಬ್ದಾರಿ ವರದಿಗಳಿಂದ ಹೀಗೆ ಉಲ್ಲೇಖವಾದ ಹೆಸರುಗಳ ನ್ಯಾಯಾಧೀಶರ ವೃತ್ತಿ ಬದುಕು ಹಾಳಾಗಬಹುದು. ನನಗಂತೂ ತುಂಬ ನೋವಾಗಿದೆ ಎಂದು ಎನ್​.ವಿ.ರಮಣ ಹೇಳಿದ್ದಾರೆ.

ಹಿರಿಯ ಪತ್ರಕರ್ತರಿಗೆ ಧನ್ಯವಾದ
ಇನ್ನು ಕೆಲವು ಹಿರಿಯ ಪತ್ರಕರ್ತರು ಹೀಗೆ ಊಹಾತ್ಮಕ ವರದಿಯನ್ನು ಪ್ರಕಟಿಸಲಿಲ್ಲ. ಅಂಥವರಿಗೆ ಖಂಡಿತವಾಗಿಯೂ ಕೃತಜ್ಞತೆ ಸಲ್ಲಿಸುತ್ತೇನೆ. ನಿಜ ಹೇಳಬೇಕೆಂದರೆ ಅಂಥ ಪತ್ರಕರ್ತರು ನಮ್ಮ ಪ್ರಜಾಪ್ರಭುತ್ವದ ಶಕ್ತಿಗಳು. ನಾನಂತೂ ನಿಜಕ್ಕೂ ತುಂಬ ಬೇಜಾರಾಗಿದ್ದೇನೆ ಎಂದು ಎನ್​.ವಿ.ರಮಣ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಬಂಧ 9 ನ್ಯಾಯಾಧೀಶರ ಹೆಸರುಗಳನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದೆ ಎಂದು ಇಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕೆಲವು ಮಾಧ್ಯಮಗಳು ಫೋಟೋ-ಹೆಸರು ಕೂಡ ಪ್ರಕಟಿಸಿದ್ದವು. ಆದರೆ ಈಗ ಎನ್​.ವಿ.ರಮಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ನಿವೃತ್ತಿ ಹೊಂದಿದ ನ್ಯಾಯಮೂರ್ತಿ ನವೀನ್​ ಸಿನ್ಹಾ ಅವರನ್ನೊಳಗೊಂಡ ಔಪಚಾರಿಕ ಪೀಠದಲ್ಲಿ ಕುಳಿತಿದ್ದಾಗ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳುತ್ತಲೇ, ಬುರ್ಕಾ ಧರಿಸದ ಮಹಿಳೆಯ ಹತ್ಯೆ ಮಾಡಿದ ತಾಲಿಬಾನಿಗಳು

ವಿಶೇಷ ಚೇತನ ಮಕ್ಕಳ ಕೈಯಲ್ಲಿ ಅರಳುತ್ತಿದೆ ಸಸ್ಯ ಬೀಜದಿಂದ ತಯಾರಿಸಿದ ರಾಖಿ; ಪರಿಸರ ಕಾಳಜಿಗೆ ಮಹತ್ವದ ಹೆಜ್ಜೆ

Published On - 3:56 pm, Wed, 18 August 21