ನವದೆಹಲಿ: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ (Jagdeep Dhankhar) ರಾಷ್ಟ್ರಪತಿ ಭವನದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದ್ದಾರೆ. ದ್ರೌಪದಿ ಮುರ್ಮು (Droupadi Murmu) ಕೂಡ ಕಳೆದ ತಿಂಗಳಷ್ಟೇ ಭಾರತದ 15ನೇ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು (Vennkaiah Naidu) ಅವರ ಅಧಿಕಾರಾವಧಿ ಆಗಸ್ಟ್ 10ರಂದು ಮುಕ್ತಾಯವಾಗಿತ್ತು. ಹೀಗಾಗಿ, ಇಂದು ಜಗದೀಪ್ ಧನಕರ್ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಭಾರತ ದೇಶದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ವಿರೋಧ ಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿದ್ದ ಮಾರ್ಗರೇಟ್ ಆಳ್ವ ಅವರನ್ನು ಜಗದೀಪ್ ಭಾರೀ ಅಂತರದಿಂದ ಸೋಲಿಸಿದರು. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ರಾಜ್ಯಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
Delhi | President Droupadi Murmu administers the oath of office to Vice President-elect Jagdeep Dhankhar
Jagdeep Dhankhar becomes the 14th Vice President of India. pic.twitter.com/26m0SdZPXm
— ANI (@ANI) August 11, 2022
71 ವರ್ಷದ ಜಗದೀಪ್ ಧನಕರ್ ಕಳೆದ 6 ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಶೇ.74ಕ್ಕೂ ಅಧಿಕ ಮತಗಳನ್ನು ಗಳಿಸಿ ವಿಜಯಿಯಾದ ಅಭ್ಯರ್ಥಿಯಾಗಿದ್ದಾರೆ. ದಾಖಲೆಯ ಅಂತರದ ಮತಗಳಿಂದ ಜಯ ಗಳಿಸಿದ ಜಗದೀಪ್ ಧನಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದರು. “ಕಿಸಾನ್ ಪುತ್ರ” (ರೈತರ ಮಗ) ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಹೇಳಿದ್ದರು.
LIVE: Swearing-in-Ceremony of the Vice President-elect Shri Jagdeep Dhankhar https://t.co/GRqc2YZE0A
— President of India (@rashtrapatibhvn) August 11, 2022
ಇದನ್ನೂ ಓದಿ: Jagdeep Dhankhar: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಇಂದು ಜಗದೀಪ್ ಧನಕರ್ ಪ್ರಮಾಣವಚನ ಸ್ವೀಕಾರ
ಜಗದೀಪ್ ಧನಕರ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
2002 ಮತ್ತು 2007ರ ನಡುವೆ ಉಪರಾಷ್ಟ್ರಪತಿಯಾಗಿ ಅಧಿಕಾರದಲ್ಲಿದ್ದ ಭೈರೋನ್ ಸಿಂಗ್ ಶೇಖಾವತ್ ನಂತರ ರಾಜಸ್ಥಾನದಿಂದ ಆಯ್ಕೆಯಾದ ಎರಡನೇ ಉಪರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಜಗದೀಪ್ ಧನಕರ್ ಪಾತ್ರರಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರು ರಾಜಸ್ಥಾನದವರೇ ಆಗಿದ್ದಾರೆ. ಪ್ರಸ್ತುತ, ರಾಜಸ್ಥಾನದ ಕೋಟಾದಿಂದ ಲೋಕಸಭೆಗೆ ಆಯ್ಕೆಯಾಗಿರುವ ಓಂ ಬಿರ್ಲಾ ಲೋಕಸಭೆಯ ಸ್ಪೀಕರ್ ಆಗಿದ್ದಾರೆ. ಜಗದೀಪ್ ಧನಕರ್ ರಾಜ್ಯಸಭೆಯ ಅಧ್ಯಕ್ಷರಾಗಲಿದ್ದಾರೆ.
Published On - 12:54 pm, Thu, 11 August 22