ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊವಿಡ್ ಸೋಂಕು ದೃಢ

ಹೈದರಾಬಾದ್‌ನಲ್ಲಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇಂದು ಕೊವಿಡ್ ಪಾಸಿಟಿವ್ ಆಗಿದ್ದಾರೆ. ಅವರು ಒಂದು ವಾರ ಸ್ವಯಂ-ಪ್ರತ್ಯೇಕತೆಯಲ್ಲಿರಲು ನಿರ್ಧರಿಸಿದ್ದಾರೆ. ತನ್ನ ಸಂಪರ್ಕಕ್ಕೆ ಬಂದವರಿಗೆಲ್ಲ ಪ್ರತ್ಯೇಕವಾಗಿರುವಂತೆ ಮತ್ತು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊವಿಡ್ ಸೋಂಕು ದೃಢ
ವೆಂಕಯ್ಯ ನಾಯ್ಡು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 23, 2022 | 5:20 PM

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾನುವಾರ ಕೊವಿಡ್-19 (Covid 19) ಪಾಸಿಟಿವ್ ಆಗಿದ್ದು, ಒಂದು ವಾರದವರೆಗೆ ಅವರು ಸ್ವಯಂ-ಪ್ರತ್ಯೇಕತೆಯಲ್ಲಿ ಇರಲಿದ್ದಾರೆ. ಹೈದರಾಬಾದ್‌ನಲ್ಲಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು (Venkaiah Naidu)ಅವರು ಇಂದು ಕೊವಿಡ್ ಪಾಸಿಟಿವ್ ಆಗಿದ್ದಾರೆ. ಅವರು ಒಂದು ವಾರ ಸ್ವಯಂ-ಪ್ರತ್ಯೇಕತೆಯಲ್ಲಿರಲು ನಿರ್ಧರಿಸಿದ್ದಾರೆ. ತನ್ನ ಸಂಪರ್ಕಕ್ಕೆ ಬಂದವರಿಗೆಲ್ಲ ಪ್ರತ್ಯೇಕವಾಗಿರುವಂತೆ ಮತ್ತು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದಾರೆ ಎಂದು ಉಪರಾಷ್ಟ್ರಪತಿಯವರ  ಟ್ವಿಟರ್ ಹ್ಯಾಂಡಲ್​​​ನಲ್ಲಿ​​  ಟ್ವೀಟ್ ಮಾಡಲಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,33,533 ಹೊಸ ಕೊವಿಡ್-19  ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 21,87,205 ಕ್ಕೆ ತಲುಪಿದೆ. ದೈನಂದಿನ ಧನಾತ್ಮಕತೆಯ ದರ ಮತ್ತು ಸಾಪ್ತಾಹಿಕ ಧನಾತ್ಮಕತೆಯ ದರವು ಕ್ರಮವಾಗಿ ಶೇ 17.78 ಮತ್ತು ಶೇ 16.87 ಆಗಿದ್ದು ಚೇತರಿಕೆ ದರವು ಶೇ 93.18ರಷ್ಟಿದೆ. ದೈನಂದಿನ ಪ್ರಕರಣಗಳ ಸಂಖ್ಯೆ ಶನಿವಾರದ 3.37 ಲಕ್ಷ ಪ್ರಕರಣಗಳಿಗಿಂತ ಕಡಿಮೆಯಾಗಿದೆ. ಆದಾಗ್ಯೂ, ದೈನಂದಿನ ಮತ್ತು ಸಾಪ್ತಾಹಿಕ ಧನಾತ್ಮಕ ದರಗಳು ಏರಿದೆ. ದೈನಂದಿನ ಸಕ್ರಿಯ ಪ್ರಕರಣಗಳು 73,840 ರಷ್ಟು ಏರಿಕೆಯಾಗಿದ್ದು, ಒಟ್ಟು ಸೋಂಕುಗಳ ಶೇಕಡಾ 5.57 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,59,168 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

ಅಮೆರಿಕ ನಂತರ ಭಾರತವು ಕೊರೊನಾವೈರಸ್ (Coronavirus) ಸಾಂಕ್ರಾಮಿಕ ರೋಗದಿಂದ ವಿಶ್ವದ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 1.6 ಶತಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇದು 5,42,321 ಬೂಸ್ಟರ್ ಅಥವಾ ‘ಮುಂಜಾಗ್ರತಾ’ ಡೋಸ್‌ಗಳನ್ನು ಒಳಗೊಂಡಂತೆ ಕಳೆದ 24 ಗಂಟೆಗಳಲ್ಲಿ ನಿರ್ವಹಿಸಲಾದ 71,10,445 ಲಸಿಕೆ ಡೋಸ್‌ಗಳನ್ನು ಸೇರಿರುವ ಲೆಕ್ಕವಾಗಿದೆ.

ಏತನ್ಮಧ್ಯೆ, ವರದಿಗಳ ಪ್ರಕಾರ ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯ ಪ್ರಸರಣ ಹಂತದಲ್ಲಿದೆ ಮತ್ತು ಇದು ಬಹು ಮೆಟ್ರೋಗಳಲ್ಲಿ ಪ್ರಬಲವಾಗಿದೆ, ಅಲ್ಲಿ ಹೊಸ ಪ್ರಕರಣಗಳು ವೇಗವಾಗಿ ಏರುತ್ತಿವೆ. “ಒಮಿಕ್ರಾನ್ ಈಗ ಭಾರತದಲ್ಲಿ ಸಮುದಾಯ ಪ್ರಸರಣ ಹಂತದಲ್ಲಿದೆ ಮತ್ತು ಬಹು ಮೆಟ್ರೋಗಳಲ್ಲಿ ಪ್ರಬಲವಾಗಿದೆ, ಅಲ್ಲಿ ಹೊಸ ಪ್ರಕರಣಗಳು ವಿಪರೀತವಾಗಿ ಏರುತ್ತಿವೆ. BA.2 ವಂಶಾವಳಿಯು ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿದೆ ಮತ್ತು ಎಸ್ ಜೀನ್ ಡ್ರಾಪ್ಔಟ್ ಆಧಾರಿತ ಸ್ಕ್ರೀನಿಂಗ್ ಹೆಚ್ಚಿನ ತಪ್ಪು ನೆಗೆಟಿವ್ಸ್ ನೀಡುವ ಸಾಧ್ಯತೆಯಿದೆ ” ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಇಂದು ತನ್ನ ಸಾಪ್ತಾಹಿಕ ಬುಲೆಟಿನ್‌ನಲ್ಲಿ ಹೇಳಿದೆ. ಎಲ್ಲಾ ಒಮಿಕ್ರಾನ್ ವಂಶಾವಳಿಗಳಿಗೆ ಅನ್ವಯವಾಗುವ RT-PCR ಸ್ಕ್ರೀನಿಂಗ್ ವರದಿಯ ಪ್ರಕಾರ, “ಎಲ್ಲಾ ಒಮಿಕ್ರಾನ್ ವಂಶಾವಳಿಗಳಿಗೆ ಅನ್ವಯವಾಗುವ PCR ಆಧಾರಿತ ಸ್ಕ್ರೀನಿಂಗ್‌ಗೆ ಸೂಕ್ತವಾದ ಪರೀಕ್ಷೆಗಳನ್ನು ಬಳಸಲು ಅನುಮೋದಿಸಲಾಗಿದೆ.”

ಇದನ್ನೂ ಓದಿ: Coronavirus cases in India: ದೇಶದಲ್ಲಿ ಒಂದೇ ದಿನ 3.33 ಲಕ್ಷ ಹೊಸ ಕೊವಿಡ್ ಪ್ರಕರಣ, ಚೇತರಿಕೆ ಪ್ರಮಾಣ ಶೇ 93.18

Published On - 4:53 pm, Sun, 23 January 22