AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭಾರತೀಯ ನೌಕಾಪಡೆ ಐಎನ್​ಎಸ್ ವಿಶಾಖಪಟ್ಟಣಂನಿಂದ ನಡೆಸಿದ ವಾಯು ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತೀಯ ನೌಕಾಪಡೆಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ನೌಕಾಪಡೆಯು ಐಎನ್‌ಎಸ್ ವಿಶಾಖಪಟ್ಟಣದಿಂದ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (ಎಂಆರ್‌ಎಸ್‌ಎಎಂ) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

Video: ಭಾರತೀಯ ನೌಕಾಪಡೆ ಐಎನ್​ಎಸ್ ವಿಶಾಖಪಟ್ಟಣಂನಿಂದ ನಡೆಸಿದ ವಾಯು ಕ್ಷಿಪಣಿ ಪರೀಕ್ಷೆ ಯಶಸ್ವಿ
ವಾಯು ಕ್ಷಿಪಣಿ
ನಯನಾ ರಾಜೀವ್
|

Updated on: Mar 07, 2023 | 11:25 AM

Share

ಭಾರತೀಯ ನೌಕಾಪಡೆ(Indian Navy) ಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ನೌಕಾಪಡೆಯು ಐಎನ್‌ಎಸ್ ವಿಶಾಖಪಟ್ಟಣದಿಂದ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (ಎಂಆರ್‌ಎಸ್‌ಎಎಂ) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಪರೀಕ್ಷೆಯ ಸಮಯದಲ್ಲಿ, MRSAM ಅತ್ಯಂತ ನಿಖರತೆಯಿಂದ ಗುರಿಯನ್ನು ಮುಟ್ಟಿತು.

MRSAM ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗುತ್ತದೆ. ಸ್ವಾವಲಂಬಿ ಭಾರತಕ್ಕೆ ಇದೊಂದು ದೊಡ್ಡ ಹೆಜ್ಜೆ. ಇದನ್ನು BDL ಹೈದರಾಬಾದ್‌ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ (IAI) ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಮತ್ತಷ್ಟು ಓದಿ: Indian Navy: ಮಹಿಳೆಯರಿಗೆ ಕಮಾಂಡೋಗಳಾಗಲು ಅವಕಾಶ; ನೌಕಾಪಡೆಯಲ್ಲಿ ಐತಿಹಾಸಿಕ ನಿರ್ಧಾರ

MRSAM ಅನ್ನು ಸೆಪ್ಟೆಂಬರ್ 2021 ರಲ್ಲಿ IAF ಫ್ಲೀಟ್‌ಗೆ ಸೇರಿಸಲಾಯಿತು. ಈ ಕ್ಷಿಪಣಿಯ ವಿಶೇಷತೆ ಏನೆಂದರೆ, 360 ಡಿಗ್ರಿ ಸುತ್ತುವ ಮೂಲಕ ಗಾಳಿಯಲ್ಲಿ ಬರುವ ಬಹು ಗುರಿ ಅಥವಾ ಶತ್ರುಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಬಲ್ಲದು. ಈ ಕ್ಷಿಪಣಿಯು 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಕ್ಷಿಪಣಿ, ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಕಣ್ಗಾವಲು ವಿಮಾನ ಮತ್ತು ವೈಮಾನಿಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಶತ್ರುಗಳ ಸರಿಯಾದ ಮಾಹಿತಿ ಪಡೆಯಲು ಯುದ್ಧ ನಿರ್ವಹಣಾ ವ್ಯವಸ್ಥೆ, ರಾಡಾರ್ ಸಿಸ್ಟಮ್, ಮೊಬೈಲ್ ಲಾಂಚರ್ ಸಿಸ್ಟಮ್, ಅಡ್ವಾನ್ಸ್ಡ್ ಲಾಂಗ್ ರೇಂಜ್ ರಾಡಾರ್, ರಿಲೋಡರ್ ವೆಹಿಕಲ್ ಮತ್ತು ಫೀಲ್ಡ್ ಸರ್ವಿಸ್ ವೆಹಿಕಲ್ ಇತ್ಯಾದಿಗಳನ್ನು ಇದರಲ್ಲಿ ಸೇರಿಸಲಾಗಿದೆ.

ಈ ಪರೀಕ್ಷೆಯನ್ನು ಐಎನ್‌ಎಸ್ ವಿಶಾಖಪಟ್ಟಣಂನಿಂದ ನಡೆಸಲಾಯಿತು ಮತ್ತು ಇದು ಹಡಗು ವಿರೋಧಿ ಕ್ಷಿಪಣಿಯಾಗಿದ್ದು ಅದು ಶತ್ರು ಹಡಗುಗಳನ್ನು ನಿಮಿಷಗಳಲ್ಲಿ ಹೊಡೆದುರುಳಿಸುವ ಶಕ್ತಿ ಹೊಂದಿದೆ.

ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಈ ವಿಡಿಯೋದಲ್ಲಿ ನೋಡಬಹುದು. ಇದನ್ನು ರಾತ್ರಿ ಸಮಯದಲ್ಲಿ ಮಾಡಲಾಯಿತು. DRDO, IAI ಸಹಯೋಗದೊಂದಿಗೆ MRSAM ಅನ್ನು ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ