Video Viral: ಹೈಸ್ಪೀಡ್ ರೈಲಿನಿಂದ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ವ್ಯಕ್ತಿ, ಜಸ್ಟ್​ ಮಿಸ್​​ ಎಂದ ಜನ

|

Updated on: Jun 21, 2023 | 10:44 AM

ಹೈಸ್ಪೀಡ್ ರೈಲಿನಿಂದ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ವ್ಯಕ್ತಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Video Viral: ಹೈಸ್ಪೀಡ್ ರೈಲಿನಿಂದ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ವ್ಯಕ್ತಿ, ಜಸ್ಟ್​ ಮಿಸ್​​ ಎಂದ ಜನ
ವೈರಲ್ ವೀಡಿಯೊ
Follow us on

ಶಹಜಹಾನ್‌ಪುರ: ನಮ್ಮ ಅಜಾಗರೂಕತೆಯಿಂದ ಒಂದೊಂದು ಬಾರಿ ನಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತೇವೆ, ಆದರೆ ಕೆಲವೊಂದು ಪವಾಡ ಎಂಬಂತೆ ಅಪಾಯದಿಂದ ಪಾರಾಗುತ್ತೇವೆ. ಇಂತಹದೇ ಒಂದು ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ. ಹೈಸ್ಪೀಡ್ ರೈಲಿನಿಂದ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ವ್ಯಕ್ತಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

110 ಕಿಮೀ/ಗಂಟೆ ವೇಗದಲ್ಲಿ ಬರುತ್ತಿದ್ದ ಪಾಟ್ಲಿಪುತ್ರ ಎಕ್ಸ್‌ಪ್ರೆಸ್‌ನಿಂದ ವ್ಯಕ್ತಿಯೊಬ್ಬರು ಪ್ಲಾಟ್‌ಫಾರ್ಮ್ ಮೇಲೆ ಬಿದ್ದಾಗ ರೈಲು ಅವರನ್ನು ಸ್ವಲ್ಪ ದೂರ ವರೆಗೆ ಎಳೆದುಕೊಂಡು ಹೋಗಿದೆ. ಶಾಜಹಾನ್‌ಪುರ ರೈಲು ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಅಲ್ಲಿದ್ದ ಅನೇಕರು ಇದನ್ನು ನೋಡುತ್ತ ನಿಂತಿದ್ದರು. ನಂತರ ರಕ್ಷಣಾ ಪಡೆ ಅವರನ್ನು ಕಾಪಾಡಿದೆ.

ರೈಲಿನಿಂದ ಇಳಿಯಲು ಹೋಗಿ ಆ ವ್ಯಕ್ತಿ ಪ್ಲಾಟ್‌ಫಾರ್ಮ್‌ ಮೇಲೆ ಬಿದ್ದಿದ್ದಾರೆ. ನಂತರ ಪ್ಲಾಟ್‌ಫಾರ್ಮ್‌ನಲ್ಲಿದ್ದ ಅಂಗಡಿಯ ಬಳಿ ಉರುಳಿಕೊಂಡು ಹೋಗಿದ್ದು. ರಕ್ಷಣಾ ಪಡೆಗಳು ತಕ್ಷಣ ಅವರನ್ನು ಪ್ಲಾಟ್‌ಫಾರ್ಮ್‌ ಪಕ್ಕಕ್ಕೆ ಕೆರದುಕೊಂಡು ಬಂದು ಸುಧಾರಿಸಿಕೊಳ್ಳುವಂತೆ ಹೇಳಿದ್ದಾರೆ, ಇಲಾಖೆಯ ವರದಿ ಪ್ರಕಾರ ವ್ಯಕ್ತಿ ಯಾವುದೇ ಗಾಯಗಳು ಆಗಿಲ್ಲ ಎಂದು ಹೇಳಲಾಗಿದೆ. ಆದರೆ ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್‌ಫಾರ್ಮ್‌ಗೆ ಹೇಗೆ ಬಿದ್ದಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:Viral Video: ಕ್ಷಣಾರ್ಧದಲ್ಲಿ ಚಿರತೆಯ ವಶದಿಂದ ಪಾರಾಗಿ ಬುದ್ಧಿವಂತಿಕೆ ಮೆರೆದ ಮರಿ ಹಕ್ಕಿ

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ರೈಲ್ವೇ ನಿಲ್ದಾಣದಲ್ಲಿ ರೈಲಿಗೆ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ರಕ್ಷಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತೊಂದು ಘಟನೆ ಮುಂಬೈನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲನ್ನು ಹತ್ತುವಾಗ ಜಾರಿ ಬಿದ್ದ ವೃದ್ಧೆಯನ್ನು ಮುಂಬೈನಲ್ಲಿ ಅಲರ್ಟ್ ಪೋಲೀಸ್ ರಕ್ಷಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ