Vijay Diwas: ವಿಜಯ್ ದಿವಸ್, ಸೈನಿಕರ ನಿಸ್ವಾರ್ಥ ಸೇವೆ, ಸಮರ್ಪಣಾ ಮನೋಭಾವಕ್ಕೆ ಗೌರವ ಸಲ್ಲಿಸಿದ ಮೋದಿ

|

Updated on: Dec 16, 2024 | 11:27 AM

ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸಾಧಿಸಿದ ನೆನಪಿಗಾಗಿ ವಿಜಯ್ ದಿವ್ ಆಚರಿಸಲಾಗುತ್ತದೆ. ಸೈನಿಕರ ನಿಸ್ವಾರ್ಥ ಸೇವೆ, ಸಮರ್ಪಣಾ ಮನೋಭಾವಕ್ಕೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ. ಪ್ರತಿ ವರ್ಷ ಡಿಸೆಂಬರ್ 16 ರಂದು ದೇಶವು ಸೈನಿಕರ ತ್ಯಾಗವನ್ನು ಗೌರವಿಸುವ ದಿನವನ್ನು ಆಚರಿಸಲಾಗುತ್ತದೆ. ಇಂದು, ವಿಜಯ್ ದಿವಸ್‌ನಲ್ಲಿ, 1971 ರಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ವೀರ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ, ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲ ಸಂಕಲ್ಪ ನಮ್ಮ ದೇಶವನ್ನು ರಕ್ಷಿಸಿದೆ. ಮತ್ತು ನಮಗೆ ಕೀರ್ತಿ ತಂದಿದ್ದಾರೆ ಎಂದು ಬರೆದಿದ್ದಾರೆ.

Vijay Diwas: ವಿಜಯ್ ದಿವಸ್, ಸೈನಿಕರ ನಿಸ್ವಾರ್ಥ ಸೇವೆ, ಸಮರ್ಪಣಾ ಮನೋಭಾವಕ್ಕೆ ಗೌರವ ಸಲ್ಲಿಸಿದ ಮೋದಿ
ನರೇಂದ್ರ ಮೋದಿ
Image Credit source: Business Standard
Follow us on

ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸಾಧಿಸಿದ ನೆನಪಿಗಾಗಿ ವಿಜಯ್ ದಿವ್ ಆಚರಿಸಲಾಗುತ್ತದೆ. ಸೈನಿಕರ ನಿಸ್ವಾರ್ಥ ಸೇವೆ, ಸಮರ್ಪಣಾ ಮನೋಭಾವಕ್ಕೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ. ಪ್ರತಿ ವರ್ಷ ಡಿಸೆಂಬರ್ 16 ರಂದು ದೇಶವು ಸೈನಿಕರ ತ್ಯಾಗವನ್ನು ಗೌರವಿಸುವ ದಿನವನ್ನು ಆಚರಿಸಲಾಗುತ್ತದೆ.

ಇಂದು, ವಿಜಯ್ ದಿವಸ್‌ನಲ್ಲಿ, 1971 ರಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ವೀರ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ, ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲ ಸಂಕಲ್ಪ ನಮ್ಮ ದೇಶವನ್ನು ರಕ್ಷಿಸಿದೆ. ಮತ್ತು ನಮಗೆ ಕೀರ್ತಿ ತಂದಿದ್ದಾರೆ ಎಂದು ಬರೆದಿದ್ದಾರೆ.

ಈ ದಿನ ಅವರ ಅಸಾಧಾರಣ ಶೌರ್ಯ ಮತ್ತು ಅವರ ಅಚಲ ಮನೋಭಾವಕ್ಕೆ ಗೌರವವಾಗಿದೆ. ಅವರ ತ್ಯಾಗ ಯುವ ಪೀಳಿಗೆಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತವೆ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಆಳವಾಗಿ ಹುದುಗಿದೆ ಎಂದು ಮೋದಿ ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ವೀರ ಹೃದಯಿಗಳಿಗೆ ನಮನ ಸಲ್ಲಿಸಿದರು.

1971 ರ ಯುದ್ಧದ ಸಮಯದಲ್ಲಿ ಅದಮ್ಯ ಧೈರ್ಯವನ್ನು ಪ್ರದರ್ಶಿಸಿ, ಭಾರತಕ್ಕೆ ವಿಜಯವನ್ನು ತಂದುಕೊಟ್ಟ ನಮ್ಮ ವೀರ ಸೈನಿಕರಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ಮುರ್ಮು ಹೇಳಿದ್ದಾರೆ. ಇಂದು, ವಿಜಯ್ ದಿವಸ್‌ನ ವಿಶೇಷ ಸಂದರ್ಭದಲ್ಲಿ, ರಾಷ್ಟ್ರವು ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗವನ್ನು ವಂದಿಸುತ್ತದೆ. ಅವರ ಅಚಲ ಧೈರ್ಯ ಮತ್ತು ದೇಶಪ್ರೇಮವು ನಮ್ಮ ದೇಶವನ್ನು ಸುರಕ್ಷಿತವಾಗಿರಿಸಿದೆ. ಅವರ ತ್ಯಾಗ ಮತ್ತು ಸೇವೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

ಮತ್ತಷ್ಟು ಓದಿ: Vijay Diwas 2024: ಡಿಸೆಂಬರ್ 16 ರಂದು ವಿಜಯ್ ದಿವಸ್ ಎಂದು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

1971ರ ಈ ದಿನದಂದು ಸೇನೆಯ ವೀರ ಸೈನಿಕರು ಶತ್ರುಗಳ ಸ್ಥೈರ್ಯವನ್ನು ಸೋಲಿಸಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ್ದಲ್ಲದೆ, ಮಾನವೀಯ ಮೌಲ್ಯಗಳನ್ನು ರಕ್ಷಿಸುವ ಮೂಲಕ ವಿಶ್ವ ಭೂಪಟದಲ್ಲಿ ಐತಿಹಾಸಿಕ ಬದಲಾವಣೆಯನ್ನು ತಂದರು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:27 am, Mon, 16 December 24