ಅಂತ್ಯ ಸಂಸ್ಕಾರಕ್ಕೆ ಹಣ ಪಡೆಯಲು ಶವವನ್ನೇ ಬ್ಯಾಂಕ್​ಗೆ ಹೊತ್ತೊಯ್ದ ಗ್ರಾಮಸ್ಥರು!

ಗ್ರಾಮಸ್ಥರು ಮಹೇಶ್​ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ, ಯಾರೊಬ್ಬರೂ ಹಣ ನೀಡಲು ಸಿದ್ಧರಿರಲಿಲ್ಲ. ಹೀಗಾಗಿ ಮನೆಯಲ್ಲಿ ಏನಾದರೂ ಬೆಲೆ ಬಾಳುವ ವಸ್ತು ಇದೆಯೇ ಎನ್ನುವುದನ್ನು ಹುಡುಕಿದ್ದಾರೆ. ಈ ವೇಳೆ ಕಂಡಿದ್ದು ಪಾಸ್​ಬುಕ್​.

ಅಂತ್ಯ ಸಂಸ್ಕಾರಕ್ಕೆ ಹಣ ಪಡೆಯಲು ಶವವನ್ನೇ ಬ್ಯಾಂಕ್​ಗೆ ಹೊತ್ತೊಯ್ದ ಗ್ರಾಮಸ್ಥರು!
ಪ್ರಾತಿನಿಧಿಕ ಚಿತ್ರ

Updated on: Jan 07, 2021 | 6:41 PM

ಪಾಟ್ನಾ: ಅಂತ್ಯಸಂಸ್ಕಾರಕ್ಕೆ ಹಣ ನೀಡಲು ಆಗ್ರಹಿಸಿ ಊರಿನವರು ರೈತನ ಹೆಣವನ್ನು ಬ್ಯಾಂಕ್​ಗೆ ತೆಗೆದುಕೊಂಡು ಹೋದ ಘಟನೆ ಪಾಟ್ನಾದಲ್ಲಿ ನಡೆದಿದೆ.

ಮೃತ ರೈತನ ಹೆಸರು ಮಹೇಶ್​ ಯಾದವ್​. ವಯಸ್ಸು 55. ಮಹೇಶ್​ಗೆ ಕುಟುಂಬದವರು ಎಂದು ಯಾರೊಬ್ಬರೂ ಇರಲಿಲ್ಲ. ಅನೇಕ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇವರು ಮಂಗಳವಾರ ಮೃತಪಟ್ಟಿದ್ದು, ಊರಿನವರಿಗೆ ತಡವಾಗಿ ವಿಚಾರ ಗೊತ್ತಾಗಿದೆ.

ಗ್ರಾಮಸ್ಥರು ಮಹೇಶ್​ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ, ಯಾರೊಬ್ಬರೂ ಹಣ ನೀಡಲು ಸಿದ್ಧರಿರಲಿಲ್ಲ. ಹೀಗಾಗಿ ಈ ರೈತನ ಮನೆಯಲ್ಲಿ ಏನಾದರೂ ಬೆಲೆ ಬಾಳುವ ವಸ್ತು ಇದೆಯೇ ಎನ್ನುವುದನ್ನು ಹುಡುಕಿದ್ದರು. ಆದರೆ, ಏನು ಸಿಕ್ಕಿಲ್ಲ. ಈ ವೇಳೆ ಬ್ಯಾಂಕ್​ ಪಾಸ್​ಬುಕ್​ ನೋಡಿದಾಗ ಮಹೇಶ್​ ಖಾತೆಯಲ್ಲಿ 1.17 ಲಕ್ಷ ರೂಪಾಯಿ ಇತ್ತು.

ಬ್ಯಾಂಕ್​ಗೆ ತೆರಳಿದಾಗ ಹಣ ನೀಡೋಕೆ ಬ್ಯಾಂಕ್​ ಮ್ಯಾನೆಜರ್​ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾದ ಗ್ರಾಮಸ್ಥರು ಶವವವನ್ನೇ ತೆಗೆದುಕೊಂಡೇ ಬ್ಯಾಂಕ್​ಗೆ ತೆರಳಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಹಣ ನೀಡುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ನಂತರ ಸ್ಥಳೀಯ ಪೊಲೀಸರ ಸೂಚನೆ ಮೇರೆಗೆ ಬ್ಯಾಂಕ್​ ಮ್ಯಾನೆಜರ್​ ಹಣ ನೀಡಿದ್ದಾರೆ ಎನ್ನಲಾಗಿದೆ.

ತಾಯಿಯ ಅಂತ್ಯ ಸಂಸ್ಕಾರಕ್ಕೆ ಕಾದುಕುಳಿತ ಪುತ್ರ.. ತಂದೆ ಕೊಡ್ತಿಲ್ಲ ಜಾಗ!

Published On - 6:36 pm, Thu, 7 January 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us