Vinesh Phogat: ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ವಿನೇಶ್ ಫೋಗಟ್, ಬಜರಂಗ್ ಪುನಿಯಾ

|

Updated on: Sep 04, 2024 | 1:00 PM

ಶಂಭು ಗಡಿಯಲ್ಲಿ ವಿನೇಶ್ ಫೋಗಟ್ ರೈತರನ್ನು ಭೇಟಿಯಾದಾಗ ಮಾಧ್ಯಮದವರು, ಹರ್ಯಾಣದಿಂದ ಕಾಂಗ್ರೆಸ್  ನಿಮ್ಮನ್ನು ನಾಮನಿರ್ದೇಶನ ಮಾಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಕೇಳಿದಾಗ, “ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಾನು ನನ್ನ ಕುಟುಂಬ ಸದಸ್ಯರನ್ನು (ರೈತರನ್ನು) ಭೇಟಿ ಮಾಡಲು ಬಂದಿದ್ದೇನೆ. ನೀವು ಈ ವಿಷಯವನ್ನು ಬದಲಿಸಿದರೆ, ಅವರ ಹೋರಾಟ ಮತ್ತು ಪ್ರತಿಭಟನೆ ವ್ಯರ್ಥವಾಗುತ್ತದೆ ಎಂದಿದ್ದರು.

Vinesh Phogat: ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ವಿನೇಶ್ ಫೋಗಟ್, ಬಜರಂಗ್ ಪುನಿಯಾ
ರಾಹುಲ್ ಗಾಂಧಿ ಜತೆ ವಿನೇಶ್, ಬಜರಂಗ್ ಪುನಿಯಾ
Follow us on

ದೆಹಲಿ ಸೆಪ್ಟೆಂಬರ್ 04: ಅಕ್ಟೋಬರ್ 5 ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat) ಮತ್ತು ಬಜರಂಗ್ ಪುನಿಯಾ (Bajrang Punia) ಅವರು ಬುಧವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿದ್ದಾರೆ. ಅವರು ತಮ್ಮ ಪ್ರಸ್ತುತ ಸ್ಥಾನಗಳಿಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ಹಿಂದೆ, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದಿರುಗಿದ ನಂತರ, ವಿನೇಶ್ ಫೋಗಟ್ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಭೇಟಿಯಾಗಿದ್ದರು. ಅಂದಹಾಗೆ ಪಕ್ಷಕ್ಕೆ ಸೇರಲು ಬಯಸುವ ಯಾರನ್ನಾದರೂ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದಿದ್ದರು ಹೂಡಾ.

ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದಾರೆ. ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಚಿನ್ನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಫೈನಲ್ ಸ್ಪರ್ಧೆಗೆ ಮುನ್ನ ಭಾರ ತೂಗಿದಾಗ ಅವರು ನಿಗದಿತ ದೇಹಭಾರಕ್ಕಿಂತ ಹೆಚ್ಚು ತೂಕವಿದ್ದ ಕಾರಣ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಅವರು ಕುಸ್ತಿಗೆ ವಿದಾಯ ಹೇಳಿದ್ದಾರೆ.

ಕಾಂಗ್ರೆಸ್  ಟ್ವೀಟ್


ಹರ್ಯಾಣ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೇರುವ ಗುರಿ ಹೊಂದಿದೆ, ಆದರೆ ಕಾಂಗ್ರೆಸ್ ಆಡಳಿತ ಪಕ್ಷದಿಂದ ಅಧಿಕಾರವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಶನಿವಾರದಂದು, ಭಾರತದ ಚುನಾವಣಾ ಆಯೋಗವು ಹರ್ಯಾಣ ವಿಧಾನಸಭಾ ಚುನಾವಣೆಯನ್ನು ಮರುನಿಗದಿಪಡಿಸಿತು. ಈ ಹಿಂದೆ ಅಕ್ಟೋಬರ್ 1 ರಂದು ನಿಗದಿಯಾಗಿದ್ದ ಚುನಾವಣೆಯನ್ನು ಚುನಾವಣಾ ಆಯೋಗ ಅಕ್ಟೋಬರ್ 5 ಕ್ಕೆ ಮುಂದೂಡಿತ್ತು.

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದ ವಿನೇಶ್

ವಿನೇಶ್ ಫೋಗಟ್ ಇತ್ತೀಚೆಗೆ ಶಂಭು ಗಡಿಯಲ್ಲಿ ಕನಿಷ್ಠ ಬೆಂಬಲ ಬೆಲೆಯ (MSP) ಕಾನೂನು ಖಾತರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆಂಬಲ ನೀಡಿದ್ದಾರೆ. ಆಗಸ್ಟ್ 31 ರಂದು ಪ್ರತಿಟನೆ 200 ನೇ ದಿನಕ್ಕೆ ಕಾಲಿಟ್ಟಾಗ ವಿನೇಶ್ ರೈತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯ ವೇದಿಕೆ ಏರಿದ್ದರು.

ಹರ್ಯಾಣದಿಂದ ಕಾಂಗ್ರೆಸ್  ನಿಮ್ಮನ್ನು ನಾಮನಿರ್ದೇಶನ ಮಾಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಕೇಳಿದಾಗ, “ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಾನು ನನ್ನ ಕುಟುಂಬ ಸದಸ್ಯರನ್ನು (ರೈತರನ್ನು) ಭೇಟಿ ಮಾಡಲು ಬಂದಿದ್ದೇನೆ. ನೀವು ಈ ವಿಷಯವನ್ನು ಬದಲಿಸಿದರೆ, ಅವರ ಹೋರಾಟ ಮತ್ತು ಪ್ರತಿಭಟನೆ ವ್ಯರ್ಥವಾಗುತ್ತದೆ. ಗಮನ ನನ್ನ ಮೇಲಿರಬಾರದು, ಆದರೆ ರೈತ ಸಮುದಾಯದತ್ತವಿರಬೇಕು, ನಾನು ಒಬ್ಬ ಕ್ರೀಡಾಪಟು ಮತ್ತು ಭಾರತದ ಪ್ರಜೆ. ಚುನಾವಣೆ ನನ್ನ ಕಾಳಜಿಯಲ್ಲ. ನನ್ನ ಗಮನ ರೈತರ ಕಲ್ಯಾಣಕ್ಕೆ ಮಾತ್ರ” ಎಂದು ವಿನೇಶ್ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಭಾರತ ಗ್ರೀನ್ ಹೈಡ್ರೋಜನ್​ ಹಬ್ ಆಗಬೇಕಿದೆ: ಪ್ರಲ್ಹಾದ್ ಜೋಶಿ

ಇದಕ್ಕೂ ಮೊದಲು, ಹರ್ಯಾಣದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು ವಿನೇಶ್ ಫೋಗಟ್ ಕಾಂಗ್ರೆಸ್ ಸೇರುವ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Wed, 4 September 24