ಕೊವಿಡ್ ನಿಯಮ ಉಲ್ಲಂಘನೆ: ಮುಂದಿನ ಸೋಮವಾರದವರೆಗೆ ಪೂರ್ವ ದೆಹಲಿಯ ಮಾರುಕಟ್ಟೆ ಬಂದ್

East Delhi: ಸಮ- ಬೆಸ ಸಂಖ್ಯೆ ಆಧಾರದ ಮೇಲೆ ನಗರದಲ್ಲಿ ಮಾರುಕಟ್ಟೆಗಳನ್ನು ಮತ್ತೆ ತೆರೆಯಲು ಅವಕಾಶವಿತ್ತು. ಅಲ್ಲಿ ಅರ್ಧದಷ್ಟು ಅಂಗಡಿಗಳು ಒಂದು ದಿನ ಮತ್ತು ಇನ್ನೊಂದು ಅರ್ಧ ಮತ್ತೊಂದು ದಿನದಲ್ಲಿ ತೆರೆಯಲ್ಪಡುತ್ತವೆ.

ಕೊವಿಡ್ ನಿಯಮ ಉಲ್ಲಂಘನೆ: ಮುಂದಿನ ಸೋಮವಾರದವರೆಗೆ ಪೂರ್ವ ದೆಹಲಿಯ ಮಾರುಕಟ್ಟೆ ಬಂದ್
ದೆಹಲಿ ಮಾರುಕಟ್ಟೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 30, 2021 | 1:53 PM

ದೆಹಲಿ: ಪೂರ್ವ ದೆಹಲಿಯಲ್ಲಿ ದೊಡ್ಡ ಮತ್ತು ಸಣ್ಣ ಹಲವಾರು ಮಾರುಕಟ್ಟೆಗಳಲ್ಲಿ ಜನಸಂದಣಿ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಲು ಸಾಧ್ಯವಾಗದ ಕಾರಣ ಜುಲೈ 5 ರವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ. ಇದರಲ್ಲಿ ವಿಕಾಸ್ ಮಾರ್ಗದಿಂದ ಲವ್ಲಿ ಪಬ್ಲಿಕ್ ಸ್ಕೂಲ್, ಕಿಶನ್ ಕುಂಜ್ ಮತ್ತು ಅದರ ಸುತ್ತಮುತ್ತಲಿನ ಮಾರುಕಟ್ಟೆಗಳಾದ ಮಂಗಲ್ ಬಜಾರ್, ವಿಜಯ್ ಚೌಕ್, ಸುಭಾಷ್ ಚೌಕ್, ಜಗತ್ರಮ್ ಪಾರ್ಕ್ ಮತ್ತು ಗುರು ರಾಮದಾಸ್ ನಗರಗಳವರೆಗೆ ಮುಖ್ಯ ಬಜಾರ್ ಲಕ್ಷ್ಮಿ ನಗರ ಸೇರಿದೆ. ಸಮ- ಬೆಸ ಸಂಖ್ಯೆ ಆಧಾರದ ಮೇಲೆ ನಗರದಲ್ಲಿ ಮಾರುಕಟ್ಟೆಗಳನ್ನು ಮತ್ತೆ ತೆರೆಯಲು ಅವಕಾಶವಿತ್ತು. ಅಲ್ಲಿ ಅರ್ಧದಷ್ಟು ಅಂಗಡಿಗಳು ಒಂದು ದಿನ ಮತ್ತು ಇನ್ನೊಂದು ಅರ್ಧ ಮತ್ತೊಂದು ದಿನದಲ್ಲಿ ತೆರೆಯಲ್ಪಡುತ್ತವೆ. ಜನರು ಮಾಸ್ಕ್ ಧರಿಸುತ್ತಾರೆ ಮತ್ತು ಸಾಮಾಜಿಕ ಅಂತರ ಪಾಲಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳನ್ನು ಕೇಳಲಾಯಿತು. ಅದು ವಿಫಲವಾದರೆ, ಮಾರುಕಟ್ಟೆ ಮುಚ್ಚುವುದಾಗಿ ಹೇಳಲಾಗಿತ್ತು.

ಎಸ್‌ಡಿಎಂ ಪ್ರೀತ್ ವಿಹಾರ್ ಅವರ ವರದಿಯ ಪ್ರಕಾರ, ಮಾರುಕಟ್ಟೆ ಅಂಗಡಿಯವರು, ಥೇಲಾ ವಲ್ಲಾಗಳು / ಮಾರಾಟಗಾರರು ಮತ್ತು ಮುಖ್ಯ ಬಜಾರ್, ಲಕ್ಷ್ಮಿ ನಗರದಲ್ಲಿರುವ ಸಾರ್ವಜನಿಕರು ಕೊವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಿಲ್ಲ.ಕೊವಿಡ್ ಪ್ರಕರಣಗಳು ಕುಸಿತ ಕಂಡಿರುವುದರಿಂದ ಮಾರುಕಟ್ಟೆ ಸಂಘ ಮತ್ತು ಅಂಗಡಿಯವರಿಗೆ ಕಳೆದ ಭಾನುವಾರ ಮೇಲಿನ ಮಾರುಕಟ್ಟೆಯಲ್ಲಿ ಕೊವಿಡ್ ಪ್ರೋಟೋಕಾಲ್‌ಗಳನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೋವಿಡ್ ಪ್ರೋಟೋಕಾಲ್ ಮಾರ್ಗಸೂಚಿಗಳು / ನಿರ್ದೇಶನಗಳು ಪಾಲನೆ ಆಗುತ್ತಿಲ್ಲ. ಇದು ಕೊರೊನಾವೈರಸ್ ನ ಸೂಪರ್-ಹರಡುವಿಕೆಗೆ ಕಾರಣವಾಗಬಹುದು. ವೈರಸ್ ಹರಡುವುದನ್ನು ಕಡಿಮೆ ಮಾಡಲು ತಕ್ಷಣದ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಸೂಪರ್ ಸ್ಪ್ರೆಡರ್ ನಂಥಾ ಯಾವುದೇ ಸ್ಥಳವನ್ನು ಬಿಡಬಾರದು ಎಂದು ಪೂರ್ವ ದೆಹಲಿಯ ಜಿಲ್ಲಾ ಮೆಜಿಸ್ಟ್ರೇಟ್ ಸೋನಿಕಾ ಸಿಂಗ್ ಹೊರಡಿಸಿದ ಆದೇಶದಲ್ಲಿ ಹೇಳಿದ್ದಾರೆ.

ಅಗತ್ಯ ಸರಕು ಮತ್ತು ಸೇವೆಗಳೊಂದಿಗೆ ವ್ಯವಹರಿಸುವ ಅಂಗಡಿಗಳನ್ನು ಮಾತ್ರ ಈ ಮಾರುಕಟ್ಟೆಗಳಲ್ಲಿ ತೆರೆಯಲು ಅನುಮತಿಸಲಾಗುತ್ತದೆ. ಇಡೀ ಪ್ರದೇಶವನ್ನು ಸಹ ಸ್ವಚ್ಛಗೊಳಿಸಲಾಗುವುದು ಮತ್ತು ಡಿಸಿಪಿ (ಪೂರ್ವ) ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲಾಗಿದೆ.

ಇದನ್ನೂ ಓದಿ:  ಟ್ವಿಟರ್​​ ವಿರುದ್ಧ ಪೋಕ್ಸೋ, ಐಟಿ ಕಾಯ್ದೆಯಡಿ ದೂರು ದಾಖಲಿಸಿದ ದೆಹಲಿ ಪೊಲೀಸರು; ಎನ್​ಸಿಪಿಸಿಆರ್ ವರದಿ ಆಧರಿಸಿ ದೂರು

ಇದನ್ನೂ ಓದಿ: Delta Plus variant: ಡೆಲ್ಟಾ ಪ್ಲಸ್ ರೂಪಾಂತರಿ ಅಪಾಯಕಾರಿಯೇ? ಹೊಸ ಕೊವಿಡ್ ರೂಪಾಂತರಿ ಬಗ್ಗೆ ತಜ್ಞರು ಹೇಳುವುದೇನು?

(Violation of Social distancing norms Several markets in East Delhi ordered to remain shut till July 5)

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್