Viral News: ಕೈದಿಯ ಹೆಂಡತಿ ಗರ್ಭಿಣಿಯಾಗಲೆಂದು ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ 15 ದಿನಗಳ ಪೆರೋಲ್!

| Updated By: ಸುಷ್ಮಾ ಚಕ್ರೆ

Updated on: Apr 15, 2022 | 5:21 PM

ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಂದಲಾಲ್ ಅವರನ್ನು ಅಜ್ಮೀರ್ ಜೈಲಿನಲ್ಲಿ ಇರಿಸಲಾಗಿದೆ. ಆತನ ಹೆಂಡತಿ ತಾನು ತಾಯಿಯಾಗಲು ಬಯಸಿರುವುದಾಗಿ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಆತನಿಗೆ 15 ದಿನಗಳ ಪೆರೋಲ್ ನೀಡಿ ಬಿಡುಗಡೆ ಮಾಡಲು ರಾಜಸ್ಥಾನದ ಭಿಲ್ವಾರಾ ನ್ಯಾಯಾಲಯ​ ಸೂಚಿಸಿದೆ.

Viral News: ಕೈದಿಯ ಹೆಂಡತಿ ಗರ್ಭಿಣಿಯಾಗಲೆಂದು ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ 15 ದಿನಗಳ ಪೆರೋಲ್!
ಸಾಂದರ್ಭಿಕ ಚಿತ್ರ
Follow us on

ಜೋಧ್​ಪುರ: ಜೈಲಿನಲ್ಲಿದ್ದ ಕೈದಿಯ ಹೆಂಡತಿ ತಾಯಿಯಾಗಲು ಬಯಸಿದ್ದರಿಂದ ಜೋಧ್‌ಪುರ ಹೈಕೋರ್ಟ್ ಆ ಕೈದಿಯನ್ನು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಆದೇಶಿಸಿದೆ. ತಾನು ಗರ್ಭಿಣಿಯಾಗಬೇಕೆಂಬ ಕಾರಣಕ್ಕೆ ಮಹಿಳೆಯೊಬ್ಬಳು ಜೈಲಿನಲ್ಲಿರುವ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿ “ಸಂತಾನದ ಹಕ್ಕನ್ನು” ಪ್ರತಿಪಾದಿಸಲು ಹೈಕೋರ್ಟ್‌ ಮೊರೆ ಹೋಗಿದ್ದಳು. ಈ ವಿಚಿತ್ರವಾದ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆ ಗರ್ಭ ಧರಿಸಲು ಅನುಕೂಲವಾಗಲೆಂದು ಆರೋಪಿಯನ್ನು 15 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ಜೋಧ್‌ಪುರ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರ ಪೀಠವು ಆರೋಪಿಯ ಜೈಲುವಾಸದಿಂದ ಕೈದಿಯ ಹೆಂಡತಿಯ ಲೈಂಗಿಕ ಮತ್ತು ಭಾವನಾತ್ಮಕ ಅಗತ್ಯಗಳ ಮೇಲೆ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಲಯವು ಋಗ್ವೇದ ಸೇರಿದಂತೆ ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿದೆ. ಜುದಾಯಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ತತ್ವಗಳನ್ನು ಉಲ್ಲೇಖಿಸಿ 34 ವರ್ಷದ ನಂದಲಾಲ್‌ ಎಂಬ ಕೈದಿಗೆ 15 ದಿನಗಳ ಪೆರೋಲ್ ನೀಡಲು ಆದೇಶಿಸಿದೆ. ಇದರಿಂದ ಆತನ ಪತ್ನಿ ರೇಖಾ ಗರ್ಭಿಣಿಯಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

16 ಸಂಸ್ಕಾರಗಳಲ್ಲಿ ಮಗುವನ್ನು ಹೆರುವುದು ಮಹಿಳೆಯ ಮೊದಲ ಹಕ್ಕು ಎಂದು ನ್ಯಾಯಾಲಯವು ಒತ್ತಿಹೇಳಿದೆ. ವಂಶಾವಳಿಯ ಸಂರಕ್ಷಣೆಯ ಉದ್ದೇಶಕ್ಕಾಗಿ ಸಂತತಿಯನ್ನು ಹೊಂದಿದ್ದು, ಧಾರ್ಮಿಕ ತತ್ವಗಳು, ಭಾರತೀಯ ಸಂಸ್ಕೃತಿ ಮತ್ತು ವಿವಿಧ ನ್ಯಾಯಾಂಗ ಘೋಷಣೆಗಳ ಮೂಲಕ ಗುರುತಿಸಲ್ಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ಅಪರಾಧಿಯು ಬಿಡುಗಡೆಯಾದ ನಂತರ ಶಾಂತಿಯುತವಾಗಿ ಸಮಾಜದ ಮುಖ್ಯವಾಹಿನಿಗೆ ಮರಳಲು ಅವಕಾಶ ನೀಡುವುದು ಪೆರೋಲ್‌ನ ಉದ್ದೇಶವಾಗಿದೆ. ಕೈದಿ ತಪ್ಪು ಮಾಡಿ ಜೈಲು ಸೇರಿದ್ದರೂ ಇದರಿಂದಾಗಿ ಕೈದಿಯ ಹೆಂಡತಿ ಯಾವುದೇ ತಪ್ಪು ಮಾಡದಿದ್ದರೂ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ. ಆಕೆಯ ಲೈಂಗಿಕ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಸಂತಾನವನ್ನು ಪಡೆಯುವ ಆಕೆಯ ಹಕ್ಕಿಗೂ ಚ್ಯುತಿ ಬಂದಿರುವುದರಿಂದ ಕೈದಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರ್ಟ್​ ಹೇಳಿದೆ.

ರಾಜಸ್ಥಾನದ ಭಿಲ್ವಾರಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಂದಲಾಲ್ ಅವರನ್ನು ಅಜ್ಮೀರ್ ಜೈಲಿನಲ್ಲಿ ಇರಿಸಲಾಗಿದೆ. 2021ರಲ್ಲಿ ಅವರಿಗೆ 20 ದಿನಗಳ ಪೆರೋಲ್ ನೀಡಲಾಗಿತ್ತು. ಅವರು ಪೆರೋಲ್ ಅವಧಿಯಲ್ಲಿ ಉತ್ತಮವಾಗಿ ವರ್ತಿಸಿದ್ದಾರೆ ಮತ್ತು ಅವಧಿ ಮುಗಿದಾಗ ಶರಣಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ಇದನ್ನೂ ಓದಿ: Viral Video: ಆಂಧ್ರದ ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್ ಬೆಳಕಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿದ ವೈದ್ಯರು

Shocking News: ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ; ಕಾಸರಗೋಡಿನಲ್ಲೊಂದು ಆಘಾತಕಾರಿ ಘಟನೆ

Published On - 5:19 pm, Fri, 15 April 22