ಉನ್ನಾವೋ: ಉತ್ತರ ಪ್ರದೇಶದ ಸಮಾರಂಭವೊಂದರಲ್ಲಿ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರಿಗೆ ರೈತರೊಬ್ಬರು ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಶಾಸಕ ಪಂಕಜ್ ಗುಪ್ತಾ ಅವರು ನನ್ನ ಕೆನ್ನೆ ತಟ್ಟಿದರಷ್ಟೇ ಎಂದಿದ್ದಾರೆ. ಆದರೆ, ಆ ವೃದ್ಧ ರೈತ ಶಾಸಕರ ಕಪಾಳಕ್ಕೆ ಹೊಡೆಯುತ್ತಿದ್ದಂತೆ ಪೊಲೀಸರು ಅವರನ್ನು ಗದರಿಸಿ, ವೇದಿಕೆಯಿಂದ ಕೆಳಗೆ ಇಳಿಸಿರುವುದು ಹಾಗೂ ಶಾಸಕ ಆಘಾತದಿಂದ ಅವರತ್ತಲೇ ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ರೈತರೊಬ್ಬರು ಬಿಜೆಪಿ ಶಾಸಕರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಕ್ಷದ ನಾಯಕರು ಭಾರೀ ಮುಜುಗರಕ್ಕೀಡಾಗಿದ್ದಾರೆ. ಅಲ್ಲದೆ, ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ವಿಪಕ್ಷಗಳು ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿವೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಶಾಸಕ ಪಂಕಜ್ ಗುಪ್ತಾ, ಆ ವಿಡಿಯೋದಲ್ಲಿರುವ ವ್ಯಕ್ತಿ ನನ್ನ ‘ಚಾಚಾ (ಚಿಕ್ಕಪ್ಪ)’. ಅವರು ಯಾವಾಗಲೂ ಮಾಡುವಂತೆ ಪ್ರೀತಿಯಿಂದಲೇ ನನ್ನ ಕೆನ್ನೆಯನ್ನು ತಟ್ಟಿದರು” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆ ರೈತನನ್ನು ಕೂರಿಸಿಕೊಂಡೇ ಗುಪ್ತಾ ಸುದ್ದಿಗೋಷ್ಠಿ ನಡೆಸಿದ್ದಾರೆ.
उन्नाव सदर से भाजपा विधायक पंकज गुप्ता को आयोजित जनसभा में किसान नेता ने सार्वजनिक रूप से मंच पर ही थप्पड़ जड़ दिया ,
किसान द्वारा मारा गया ये थप्पड़ भाजपा विधायक को नहीं बल्कि यूपी की भाजपा शासित आदित्यनाथ सरकार की कुनीतियों ,कुशासन और तानाशाही के मुंह पर जड़ा गया थप्पड़ है! pic.twitter.com/PSa3DK214p
— SamajwadiPartyMedia (@MediaCellSP) January 7, 2022
ಶಾಸಕರಿಗೆ ಕಪಾಳಮೋಕ್ಷ ಮಾಡಿದ ರೈತನನ್ನು ಛತ್ರಪಾಲ್ ಎಂದು ಗುರುತಿಸಲಾಗಿದೆ. ವೇದಿಕೆಯ ಮೇಲೆ ಶಾಸಕನಿಗೆ ಹೊಡೆದ ನಂತರ ಪೊಲೀಸರು ಅವನನ್ನು ಕರೆದುಕೊಂಡು ಹೋಗುವುದನ್ನು ವೀಡಿಯೊ ತುಣುಕಿನಲ್ಲಿ ತೋರಿಸಲಾಗಿದೆ. ಮೂಲಗಳ ಪ್ರಕಾರ, ಆ ರೈತ ಕೆಲವು ದಿನಗಳ ಹಿಂದೆ ತಮ್ಮ ಹಸುಗಳು ಕಾಣೆಯಾಗಿವೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಶಾಸಕರ ಕಚೇರಿಗೂ ದೂರು ನೀಡಿದ್ದರು. ಆದರೆ, ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಆ ವೃದ್ಧ ಶಾಸಕರು ಕುಳಿತಿದ್ದ ಸಮಾರಂಭದ ವೇದಿಕೆಯೇರಿ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.
Uttar Pradesh- Farmer leader slapped BJP MLA from Unnao Sadar Pankaj Gupta. This real securitybreach ??. Pura desh ka same mood hai. @PMOIndia @BJP4India @yogi @brinderdhillon @LambaAlka @CHARANJITCHANNI #70000Kursi700Bande pic.twitter.com/bZONyCdkpR
— Manjot Singh (@ManjotPB) January 7, 2022
ಜನವರಿ 5ರಂದು ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರ ಜನ್ಮದಿನದ ಸಂದರ್ಭದಲ್ಲಿ ಎರಬಡಿಯಭರ್ ವೃತ್ತದಲ್ಲಿ ಗುಲಾಬ್ ಸಿಂಗ್ ಲೋಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದೊಂದು ಸಾಮಾನ್ಯ ಸಂಗತಿಯಾಗಿದ್ದು, ವಿರೋಧ ಪಕ್ಷದವರು ಇದಕ್ಕೆ ಬಣ್ಣ ಬಳಿದು ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Viral Video: ಬೀದಿ ಪಾಲಾಗಿ ಫುಟ್ಪಾತ್ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ; ವಿಡಿಯೋ ವೈರಲ್
Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!