ನವದೆಹಲಿ: ಗುಜರಾತ್ ರಾಜ್ಯದ ಆಪ್ (ಆಮ್ ಆದ್ಮಿ ಪಕ್ಷ) ಯುವ ಘಟಕದ ನಾಯಕ ಯುವರಾಜ್ ಸಿನ್ಹ ಜಡೇಜಾ ಅವರು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಾನ್ಸ್ಟೆಬಲ್ನನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಆಘಾತಕಾರಿ ಘಟನೆ (Shocking News) ನಡೆದಿದೆ. ಈ ಹಿನ್ನೆಲೆಯಲ್ಲಿ ಯುವರಾಜ್ ಸಿನ್ಹ ಜಡೇಜಾ ಅವರನ್ನು ಗಾಂಧಿನಗರದ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಹೀಗಾಗಿ, ಐಪಿಸಿಯ ಸೆಕ್ಷನ್ 307ರ ಅಡಿಯಲ್ಲಿ “ಕೊಲೆ ಯತ್ನ” ಪ್ರಕರಣವನ್ನು ದಾಖಲಿಸಲಾಗಿದೆ.
ಕೆಲವು ಬಿಸಿಬಿಸಿ ಚರ್ಚೆ ನಡೆದ ಬಳಿಕ ಆಪ್ ನಾಯಕ ಯುವರಾಜ್ ಸಿನ್ಹ ಜಡೇಜಾ ಕೆಲವು ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೆಚ್ಚಿನ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ ನಂತರ ಅವರು ಕಾರಿನ ಕಡೆಗೆ ಓಡಿಹೋದರು. ನಂತರ ಅವರು ತಮ್ಮ ಕಾರಿನಲ್ಲಿ ಕುಳಿತು ಆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಕಾನ್‌ಸ್ಟೆಬಲ್ ಅವರಿಗೆ ಸೂಚಿಸಿದಾಗ ಅವರು ತಮ್ಮ ಕಾರನ್ನು ನಿಲ್ಲಿಸಲಿಲ್ಲ. ಬದಲಾಗಿ ಕಾನ್‌ಸ್ಟೆಬಲ್ ಅನ್ನು ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
Gujarat AAP youth wing leader Yuvrajsinh Jadeja held for attacking cops, dragging constable on his car’s bonnet.#AAP #Gujarat #Politics pic.twitter.com/ap5INyGybd
— My Vadodara (@MyVadodara) April 6, 2022
ವೇಗವಾಗಿ ಬಂದ ಕಾರಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಕಾನ್‌ಸ್ಟೆಬಲ್ ಲಕ್ಷ್ಮಣ ವಾಸವ ಬಾನೆಟ್ ಮೇಲೆ ಹಾರಿದ್ದಾನೆ. ಆಗ ಸ್ವಲ್ಪ ದೂರವನ್ನು ಕ್ರಮಿಸಿದ ನಂತರ ಜಡೇಜಾ ತನ್ನ ಕಾರನ್ನು ನಿಲ್ಲಿಸಿದ. ಅಲ್ಲೇ ಬಾನೆಟ್ ಮೇಲಿಂದ ಕಾನ್ಸ್ಟೆಬಲ್ನನ್ನು ಬೀಳಿಸಿ ಮುಂದೆ ಸಾಗಿದ್ದಾರೆ. “ಈ ಇಡೀ ಘಟನೆಯು ಜಡೇಜಾ ಅವರ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಘಟನೆಯಲ್ಲಿ ಕಾನ್‌ಸ್ಟೆಬಲ್ ಸಾವನ್ನಪ್ಪಿರಬಹುದು. ನಾವು ಕ್ಯಾಮೆರಾ ಮತ್ತು ಜಡೇಜಾ ಅವರ ಮೊಬೈಲ್ ಫೋನ್‌ಗಳನ್ನು ಫೋರೆನ್ಸಿಕ್ ವಿಶ್ಲೇಷಣೆಗಾಗಿ ಕಳುಹಿಸಿದ್ದೇವೆ” ಎಂದು ಇನ್ಸ್‌ಪೆಕ್ಟರ್ ಜನರಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ಕೋರದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದ ಅಡಿಯಲ್ಲಿ ಜೈಲಿಗೆ ಕಳುಹಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ ರಾಣಾ ಹೇಳಿದ್ದಾರೆ.
ಇದನ್ನೂ ಓದಿ: Murder: ತಾನು ಕೊಡಿಸಿದ್ದ ಮೊಬೈಲ್ ವಾಪಾಸ್ ಕೊಡದ ಪ್ರೇಯಸಿಯ ಕತ್ತು ಸೀಳಿ ಕೊಂದ ಪ್ರೇಮಿ!
Murder: ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಕೊಂದ 17 ವರ್ಷದ ಮಗಳು!