ಪಂಜಾಬ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (CM Bhagwant Mann) ಮೈದಾನಕ್ಕಿಳಿದು ಆಟಗಾರರ ಗುಂಪಿನೊಂದಿಗೆ ವಾಲಿಬಾಲ್ ಪಂದ್ಯವನ್ನು (volleyball match) ಆಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೋಮವಾರ ಜಲಂಧರ್‌ನ ಗುರು ಗೋವಿಂದ್ ಸಿಂಗ್ ಸ್ಟೇಡಿಯಂನಲ್ಲಿ ‘ಖೇದನ್ ವತನ್ ಪಂಜಾಬ್ ಡಯಾನ್’ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ ಭಗವಂತ್ ಮಾನ್ ಹಳದಿ ಪಟ್ಟೆಗಳಿರುವ ಕಪ್ಪು ಟ್ರ್ಯಾಕ್‌ಸೂಟ್ ಹಾಕಿಕೊಂಡು, ತಲೆಗೆ ಕ್ಯಾಪ್ ತೊಟ್ಟುಕೊಂಡು ವಾಲಿಬಾಲ್ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಖೇತನ್ ವತನ್ ಪಂಜಾಬ್ ಡಯಾನ್ 2 ತಿಂಗಳ ಅವಧಿಯ ಕ್ರೀಡಾಕೂಟವಾಗಿದ್ದು, ಇದರಲ್ಲಿ ವಿವಿಧ ವಯೋಮಾನದ 4 ಲಕ್ಷಕ್ಕೂ ಹೆಚ್ಚು ಆಟಗಾರರು 28 ಕ್ರೀಡಾ ವಿಭಾಗಗಳಲ್ಲಿ ಬ್ಲಾಕ್‌ನಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯ ಮಟ್ಟದ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ ನೀಡಲಾಗುವುದು.
#WATCH | Punjab CM Bhagwant Mann tries his hand at volleyball after inaugurating ‘Khedan Watan Punjab Dian’ sporting event at Guru Gobind Singh Stadium in Jalandhar yesterday pic.twitter.com/WOlD9MNfOw
— ANI (@ANI) August 30, 2022
ಇದನ್ನೂ ಓದಿ: Bhagwant Mann: ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ
2 ತಿಂಗಳ ಕಾಲ ನಡೆಯುವ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ, ಸಿಎಂ ಭಗವಂತ್ ಮಾನ್ ಗುರು ಗೋವಿಂದ್ ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 10ರಿಂದ 15 ನಿಮಿಷಗಳ ಕಾಲ ವಾಲಿಬಾಲ್ ಆಟವನ್ನು ಆಡಿದರು. ಅಲ್ಲಿದ್ದ ಆಟಗಾರರು ಮೈದಾನದಲ್ಲಿ ವಾಲಿಬಾಲ್ ಆಡಿದ ಭಗವಂತ್ ಮಾನ್ ಅವರನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
Mann Sahab on the pitch
?CM @BhagwantMann played volleyball with the young, talented players #KhedanVatanPunjabDiyan pic.twitter.com/TaYio0Hw3p
— AAP Punjab (@AAPPunjab) August 29, 2022