ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತ(Heart Attack)ದಿಂದ ಮೃತಪಟ್ಟಿರುವ ಘಟನೆ ಇಂದೋರ್ನಲ್ಲಿ ನಡೆದಿದೆ. ಹೋಟೆಲ್ ಮಾಲೀಕರಾದ ಪ್ರದೀಪ್ ರಘುವಂಶಿ ಮೃತರು. ಜಿಮ್ನಲ್ಲಿ ಕಸರತ್ತು ಮಾಡುತ್ತಿರುವ ವೇಳೆ ಏಕಾಏಕಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ರಘುವಂಶಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ.
ಜಿಮ್ನಲ್ಲಿ ವರ್ಕ್ಔಟ್ ಮಾಡುವ ಮೊದಲು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು, ಅದರಲ್ಲೂ ವಯಸ್ಸಾಗಿರುವವರು ಖಂಡಿತವಾಗಿಯೂ ತಪಾಸಣೆಗೆ ಒಳಗಾಗಬೇಕು ಇಂದಿನ ದಿನಗಳಲ್ಲಿ ಎಲ್ಲರೂ ಜಿಮ್ಗೆ ಹೋಗಲು ಆರಂಭಿಸಿದ್ದಾರೆ.
ಆದರೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಪ್ರೋಟೀನ್ ತೆಗೆದುಕೊಳ್ಳಬಾರದು ಎಂದು ವೈದ್ಯರು ತಿಳಿಸಿದ್ದಾರೆ.
ಜಿಮ್ಗೆ ಹೋಗುವ ಮೊದಲು ಅವರ ಸಾಮರ್ಥ್ಯವನ್ನು ಪರೀಕ್ಷಿಸಬೇಕು, ಬೇರೆಯವರ ಮಾತು ಕೇಳಿ ಹೋಗುತ್ತಾರೆ, ಇದರಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
जिम में वर्कआउट के दौरान हार्ट अटैक के मामले देशभर में बढ़ते जा रहे है, ऐसा ही एक मामला इंदौर से सामना आया है। यहां एक होटल संचालक की जिम में हार्ट अटैक से मौत हो गई, कैमरे में कैद हुआ शॉकिंग मंजर।#Indore #latestnews #lucknowkibaat32 pic.twitter.com/oXOj4LHDyO
— लखनऊ की बात (@Lucknowkibaat32) January 5, 2023
ಪ್ರದೀಪ್ ರಘುವಂಶಿ ನಮ್ಮ ಹಳೆಯ ಕ್ಲೈಂಟ್ ಆಗಿದ್ದು, ಅವರು ಪ್ರತಿದಿನ ಜಿಮ್ಗೆ ಬರುತ್ತಿದ್ದರು. ಅವರು ಇದ್ದಕ್ಕಿಂದ್ದಂತೆ ಹೃದಯಾಘಾತಕ್ಕೆ ಒಳಗಾದರು. ಮೂರು ನಿಮಿಷಗಳಲ್ಲಿ ಎಲ್ಲವೂ ಮುಗಿದುಹೋಯಿತು ಎಂದು ತರಬೇತುದಾರರು ಹೇಳಿದ್ದಾರೆ.
ಮತ್ತಷ್ಟು ಓದಿ: Heart Attack and Cardiac Arrest : ಹೃದಯಾಘಾತ ಹಾಗೂ ಹೃದಯಸ್ತಂಭನ ನಡುವಿನ ವ್ಯತ್ಯಾಸವೇನು?
ಆಪ್ತ ಸ್ನೇಹಿತರ ಪ್ರಕಾರ, ಅವರ ಮಗ ಕೆಲವು ದಿನಗಳ ನಂತರ ಮದುವೆಯಾಗುವವರಿದ್ದರು. ರಘುವಂಶಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಆಪ್ತರಲ್ಲಿ ಒಬ್ಬರು.
ಸ್ಕೀಮ್ ನಂ.78ರ ಗೋಲ್ಡ್ ಜಿಮ್ ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್ ವೃಂದಾವನ ಮಾಲೀಕ ಪ್ರದೀಪ್ ರಘುವಂಶಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 55 ವರ್ಷದ ಪ್ರದೀಪ್ ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ.
ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದ ಪುನೀತ್ ರಾಜ್ಕುಮಾರ್ ಕೂಡ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Fri, 6 January 23