Maharashtra: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವಿವಾಹಿತ ಮಹಿಳೆಯನ್ನು ಗೆಣೆಕಾರ 35 ಬಾರಿ ಇರಿದು ಕೊಂದು ದೇಹವನ್ನು ಕಾಡಿನಲ್ಲಿ ಬಿಸಾಡಿದ!
ಥಾಣೆ ಗ್ರಾಮೀಣ ಪೊಲೀಸ್ ಒದಗಿಸಿರುವ ಮಾಹಿತಿಯ ಪ್ರಕಾರ ಡಿಸೆಂಬರ್ 27ರಂದು ದೇಹದ ಮೇಲೆ 35 ಇರಿತದ ಗಾಯಗಳಿದ್ದ ಮಹಿಳೆಯೊಬ್ಬಳ ದೇಹ ಕಲ್ಯಾಣ ಹತ್ತಿರದ ಗೊವೆಲಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ.
T ಮಹಾರಾಷ್ಟ್ರ ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಿ ದೇಹವನ್ನು ನಿರ್ಜನ ಪ್ರದೇಶ, ಕಾಡುಮೇಡುಗಳಲ್ಲಿ (forest area) ಬಿಸಾಡುವ ಪ್ರಕರಣಗಳು ಹೆಚ್ಚುತ್ತಿವೆ ಅಂತ ಹೇಳಿದರೆ ಅತಿಶಯೋಕ್ತಿಯಾಗಲಾರದು. ಮಹಾರಾಷ್ಟ್ರದಿಂದ (Maharashtra) ನಮಗೆ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ತನ್ನನ್ನು ಮದುವೆಯಾಗುವಂತೆ ಒಂದೇಸಮನೆ ಪೀಡಿಸುತ್ತಿದ್ದ ಒಬ್ಬ ವಿವಾಹಿತ ಮಹಿಳೆಯಿಂದ ಬೇಸತ್ತಿದ್ದ ಆಕೆಯ ಗೆಣೆಕಾರ (paramour) ತನ್ನ ಗೆಳೆಯನೊಬ್ಬನ ನೆರವಿನೊಂದಿಗೆ ಕೊಂದು ದೇಹವನ್ನು ಥಾಣೆಯ ಗೊವೆಲಿ ಕಾಡುಪ್ರದೇಶದಲ್ಲಿ ಬಿಸಾಡಿದ್ದಾನೆ. ಪೊಲೀಸರು ಗುರುವಾರ ನೀಡಿರುವ ಹೇಳಿಕೆಯ ಪ್ರಕಾರ ಗೆಣೆಕಾರ ಮತ್ತು ಅವನ ಸ್ನೇಹಿತನನ್ನು ವಶಕ್ಕೆ ಪಡೆಯಲಾಗಿದೆ.
ಕಲ್ಯಾಣ ಹತ್ತಿರದ ಕಾಡಿನಲ್ಲಿ ದೇಹ ಪತ್ತೆ
ಥಾಣೆ ಗ್ರಾಮೀಣ ಪೊಲೀಸ್ ಒದಗಿಸಿರುವ ಮಾಹಿತಿಯ ಪ್ರಕಾರ ಡಿಸೆಂಬರ್ 27ರಂದು ದೇಹದ ಮೇಲೆ 35 ಇರಿತದ ಗಾಯಗಳಿದ್ದ ಮಹಿಳೆಯೊಬ್ಬಳ ದೇಹ ಕಲ್ಯಾಣ ಹತ್ತಿರದ ಗೊವೆಲಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ. ಸ್ಥಳದಲ್ಲಿ ಸಿಕ್ಕ ಆಧಾರ್ ಕಾರ್ಡ್ ಪ್ರಕಾರ ಮೃತ ಮಹಿಳೆಯನ್ನು ಕಲ್ಯಾಣ ತಾಲ್ಲೂಕಿನ ಪೊಲೀಸರು ಅಕೆಯನ್ನು ಬೀಡ್ ನ 27-ವರ್ಷ-ವಯಸ್ಸಿನ ರೂಪಾಲಿ ಜೆ ಎಂದು ಗುರುತಿಸಿದ್ದಾರೆ.
ಇದನ್ನೂ ಓದಿ: Viral Video: ಮಧ್ಯಪ್ರದೇಶದಲ್ಲಿ ಪೊಲೀಸರಿಂದ ಕೊಲೆ ಆರೋಪಿ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ಧ್ವಂಸ
ರೂಪಾಲಿ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಬಳಿಕ ಅಕೆ ಪುಣೆಯ 32-ವರ್ಷ-ವಯಸ್ಸಿನ ವ್ಯಕ್ತಿಯೊಬ್ಬನೊಂದಿಗೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದು ಬೆಳಕಿಗೆ ಬಂದಿದೆ.
ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು!
ಪೊಲೀಸ ಮೂಲಗಳ ಪ್ರಕಾರ ಮಹಿಳೆಯು ತನ್ನನ್ನು ಮದುವೆಯಾಗುವಂತೆ ಪ್ರಿಯಕರನನ್ನು ಪದೇಪದೆ ಒತ್ತಾಯಿಸುತ್ತಿದ್ದಳು. ಆದರೆ ಅವನು ಅವಳ ಮಾತನ್ನು ಕಡೆಗಣಿಸುತ್ತಿದ್ದ. ಅವಳಿಂದ ಬಲವಂತ ಜಾಸ್ತಿಯಾದಾಗ ಬೇಸತ್ತ ಅವನು ರೂಪಾಲಿಯನ್ನು ಕೊನೆಗಾಣಿಸಲು ತನ್ನೊಬ್ಬ ಗೆಳೆಯನ ನೆರವು ಕೋರಿದ.
ಬಳಿಕ ಅವರಿಬ್ಬರು, ಗೊವಿಲಿ ಕಾಡು ಪ್ರದೇಶದಲ್ಲಿ ಚಿನ್ನದ ನಾಣ್ಯಗಳು ಸಿಗುತ್ತಿವೆ ಅಂತ ಅಕೆಗೆ ಹೇಳಿ ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳವನ್ನು ತಲಪಿದ ನಂತರ ಇಬ್ಬರೂ ಸೇರಿ ಹರಿತವಾದ ಆಯುಧಗಳಿಂದ ಅವಳ ದೇಹವನ್ನು 35 ಬಾರಿ ತಿವಿದಿದ್ದಾರೆ. ಅವಳ ದೇಹವನ್ನು ಅದೇ ಸ್ಥಳದಲ್ಲಿ ಬಿಸಾಡಿ ಕೊಲೆಗಡುಕರು ವಾಪಸ್ಸಾಗಿದ್ದಾರೆ, ಎಂದು ಪೊಲೀಸರು ತಿಳಿಸಿದ್ದಾರೆ.
ತಂತ್ರಜ್ಞಾನದ ನೆರವಿನಿಂದ ಹಂತಕರಿಬ್ಬರನ್ನು ಬುಧವಾರ ಬಂಧಿಸಲಾಯಿತೆಂದು ಪೊಲೀಸರು ಹೇಳಿದ್ದಾರೆ.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ