Viral Video: ಬೀದಿಯಲ್ಲೇ ನಿಂತು ವಯಸ್ಸಾದ ಅಪ್ಪನಿಗೆ ಕೋಲಿನಿಂದ ಬಾರಿಸಿದ ಮಗ; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Sep 20, 2022 | 1:14 PM

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ತಂದೆ ಮತ್ತು ಮಗ ಜಗಳವಾಡುತ್ತಿರುವುದನ್ನು ನೋಡಬಹುದು. ಆಗ ಇದ್ದಕ್ಕಿದ್ದಂತೆ ಮಗ ಬೀದಿಯಲ್ಲಿ ಬಿದ್ದಿದ್ದ ಕೋಲನ್ನು ತೆಗೆದುಕೊಂಡು ಅಪ್ಪನಿಗೆ ಹೊಡೆಯಲು ಪ್ರಾರಂಭಿಸುತ್ತಾನೆ.

Viral Video: ಬೀದಿಯಲ್ಲೇ ನಿಂತು ವಯಸ್ಸಾದ ಅಪ್ಪನಿಗೆ ಕೋಲಿನಿಂದ ಬಾರಿಸಿದ ಮಗ; ವಿಡಿಯೋ ವೈರಲ್
ಅಪ್ಪನನ್ನು ಥಳಿಸುತ್ತಿರುವ ಮಗ
Follow us on

ಜೋಧ್​ಪುರ: ಹೆತ್ತವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ, ಹಿಂಸೆ ನೀಡುವ, ಮನೆಯಿಂದ ಹೊರಗೆ ಹಾಕುವ, ಕೊಲೆ ಮಾಡುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ರಾಜಸ್ಥಾನದ ಜೋಧ್​ಪುರದಲ್ಲಿ (Jodhpur) ಒಬ್ಬ ವ್ಯಕ್ತಿ ತನ್ನ ವಯಸ್ಸಾದ ತಂದೆಗೆ ರಸ್ತೆಯ ಫುಟ್​ಪಾತ್ (Footpath) ಮೇಲೆ ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ (Video Viral) ಆಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ತಂದೆ ಮತ್ತು ಮಗ ಯಾವುದೋ ವಿಷಯದ ಬಗ್ಗೆ ಜಗಳವಾಡುತ್ತಿರುವುದನ್ನು ನೋಡಬಹುದು. ಆಗ ಇದ್ದಕ್ಕಿದ್ದಂತೆ ಬಿಳಿ ಟೀ ಶರ್ಟ್‌ನಲ್ಲಿರುವ ಮಗ ಬೀದಿಯಲ್ಲಿ ಬಿದ್ದಿದ್ದ ಕೋಲನ್ನು ತೆಗೆದುಕೊಂಡು ಅಪ್ಪನಿಗೆ ಹೊಡೆಯಲು ಪ್ರಾರಂಭಿಸುತ್ತಾನೆ. ವಯಸ್ಸಾಗಿರುವ ಅವನ ತಂದೆ ಜೋರಾಗಿ ಕೂಗುತ್ತಿದ್ದರೂ ಆತ ಹೊಡೆಯುವುದನ್ನು ನಿಲ್ಲಿಸುವುದಿಲ್ಲ. ಸ್ವಲ್ಪ ಹೊತ್ತು ಥಳಿಸಿದ ನಂತರ ಆತ ಕೋಪದಿಂದ ಕೋಲನ್ನು ಎಸೆಯುತ್ತಾನೆ.

ಇದನ್ನೂ ಓದಿ: ರಸ್ತೆಯಲ್ಲಿ ಡಿಕ್ಕಿ ಹೊಡೆದು ಬೈಕ್ ಚಾಲಕನನ್ನು ಎಳೆದುಕೊಂಡು ಹೋದ ಫಾರ್ಚುನರ್ ಕಾರು; ಶಾಕಿಂಗ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಕಾಣುವ ಕೆಲವು ನೆರೆಹೊರೆಯವರು ದೂರದಿಂದಲೇ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೂ ಅವನು ಅವರ ಮಾತನ್ನು ಕೇಳದೆ ಮತ್ತೆ ತನ್ನ ತಂದೆಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸುತ್ತಾನೆ. ಅವರಿಬ್ಬರ ನಡುವಿನ ವಾಗ್ವಾದ ಮುಂದುವರೆದಾಗ ಅವನು ತನ್ನ ತಂದೆಗೆ ಕಪಾಳಮೋಕ್ಷ ಮಾಡಿ, ಹೊಡೆಯಲು ಪ್ರಾರಂಭಿಸುತ್ತಾನೆ.

ಈ ವಿಡಿಯೋದಲ್ಲಿರುವ ವ್ಯಕ್ತಿ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ಈ ಘಟನೆ ನಡೆದ 1 ದಿನದ ಮೊದಲು ಕೂಡ ಆ ವ್ಯಕ್ತಿ ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ