ರಸ್ತೆಯಲ್ಲಿ ಡಿಕ್ಕಿ ಹೊಡೆದು ಬೈಕ್ ಚಾಲಕನನ್ನು ಎಳೆದುಕೊಂಡು ಹೋದ ಫಾರ್ಚುನರ್ ಕಾರು; ಶಾಕಿಂಗ್ ವಿಡಿಯೋ ಇಲ್ಲಿದೆ

Delhi Crime: ಈ ಘಟನೆಯ ದೃಶ್ಯಾವಳಿಗಳಲ್ಲಿ ಸುಧೀರ್ ಜೈನ್ ಅವರ ಫಾರ್ಚೂನರ್ ಕಾರು ಬೈಕಿಗೆ ಡಿಕ್ಕಿ ಹೊಡೆದ ನಂತರ 3-4 ವಾಹನಗಳಿಗೆ ಡಿಕ್ಕಿ ಹೊಡೆದಿರುವುದನ್ನು ಕಾಣಬಹುದು.

ರಸ್ತೆಯಲ್ಲಿ ಡಿಕ್ಕಿ ಹೊಡೆದು ಬೈಕ್ ಚಾಲಕನನ್ನು ಎಳೆದುಕೊಂಡು ಹೋದ ಫಾರ್ಚುನರ್ ಕಾರು; ಶಾಕಿಂಗ್ ವಿಡಿಯೋ ಇಲ್ಲಿದೆ
ದೆಹಲಿಯಲ್ಲಿ ಕಾರು ಅಪಘಾತ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 20, 2022 | 10:34 AM

ನವದೆಹಲಿ: ದೆಹಲಿಯ (Delhi Accident) ಕರೋಲ್‌ ಬಾಗ್‌ ರಸ್ತೆಯಲ್ಲಿ ಸೋಮವಾರ ಸಂಜೆ ವೇಗವಾಗಿ ಬಂದ ಫಾರ್ಚುನರ್ ಕಾರ್  (Fortuner Car) ಒಂದು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು 100 ಮೀಟರ್‌ವರೆಗೆ ಎಳೆದೊಯ್ದ ಆಘಾತಕಾರಿ ಘಟನೆ ನಡೆದಿದೆ. ಈ ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪದಮ್ ಸಿಂಗ್ ಮಾರ್ಗದಲ್ಲಿ ಬೈಕ್ ಅನ್ನು ಎಳೆದುಕೊಂಡು ಹೋಗುವಾಗ ಆ ಕಾರು ಆಟೋ ರಿಕ್ಷಾ ಸೇರಿದಂತೆ 5 ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಎಸ್​ಯುವಿ ಕಾರಿನ ಚಾಲಕನನ್ನು ಸುಧೀರ್ ಜೈನ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಈ ಘಟನೆಯ ದೃಶ್ಯಾವಳಿಗಳಲ್ಲಿ ಸುಧೀರ್ ಜೈನ್ ಅವರ ಫಾರ್ಚೂನರ್ ಕಾರು ಬೈಕಿಗೆ ಡಿಕ್ಕಿ ಹೊಡೆದ ನಂತರ 3-4 ವಾಹನಗಳಿಗೆ ಡಿಕ್ಕಿ ಹೊಡೆದಿರುವುದನ್ನು ಕಾಣಬಹುದು. ಕಾರು ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಬೈಕ್ ಚಾಲಕ ಹಿಮಾಂಶು ಎಂದು ಗುರುತಿಸಲಾಗಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: BIG NEWS: ಅಮಿತ್​ ಶಾ ಭದ್ರತೆಯಲ್ಲಿ ಲೋಪ, ಟಿಆರ್‌ಎಸ್ ಮುಖಂಡನ ಕಾರು ನಿಲ್ಲಿಸಿದ ಬೆಂಗಾವಲು ಪಡೆ

ಸುಧೀರ್ ಜೈನ್ ಕಾರು ಚಾಲನೆ ವೇಳೆ ಮದ್ಯದ ಅಮಲಿನಲ್ಲಿದ್ದರಾ? ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿ ಸುಧೀರ್ ಜೈನ್ 2008-09ರ ಸುಮಾರಿಗೆ ದೆಹಲಿ ಬಿಜೆಪಿಯ ಟ್ರೇಡರ್ಸ್ ಸೆಲ್ ಸದಸ್ಯರಾಗಿದ್ದರು. ನಂತರ ಅವರು ರಾಜಕೀಯವನ್ನು ತೊರೆದರು. ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ