ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ಗೆ ಎರಡು ದಿನಗಳ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಇಂದು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು, ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮದಲ್ಲಿ (Sabaramati Ashram) ಸಾಂಪ್ರದಾಯಿಕ ಚರಕವನ್ನು ತಿರುಗಿಸಿ, ಖುಷಿಪಟ್ಟಿದ್ದಾರೆ. ANI ಹಂಚಿಕೊಂಡ ವಿಡಿಯೋದಲ್ಲಿ ಬೋರಿಸ್ ಜಾನ್ಸನ್ ಚರಕದ ಮುಂದೆ ಕುಳಿತಿದ್ದಾರೆ. ಆ ನೂಲುವ ಚಕ್ರವನ್ನು ತಿರುಗಿಸುವುದು ಹೇಗೆಂದು ಇಬ್ಬರು ಮಹಿಳೆಯರು ಬ್ರಿಟನ್ ಪ್ರಧಾನಮಂತ್ರಿಗೆ ಹೇಳಿಕೊಡುತ್ತಿದ್ದಾರೆ.
ಅಹಮದಾಬಾದ್‌ನ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಅತಿಥಿ ಪುಸ್ತಕದಲ್ಲಿ ಬ್ರಿಟನ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಸಂದೇಶವನ್ನು ಬರೆದಿದ್ದಾರೆ. ಜಗತ್ತನ್ನು ಉತ್ತಮವಾಗಿ ಬದಲಾಯಿಸಲು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಸಜ್ಜುಗೊಳಿಸಿದ ಮಹಾತ್ಮ ಗಾಂಧಿಯನ್ನು ಜಾನ್ಸನ್ “ಅಸಾಧಾರಣ ವ್ಯಕ್ತಿ” ಈ ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬರಲು ಮತ್ತು ಜಗತ್ತನ್ನು ಉತ್ತಮವಾಗಿ ಬದಲಾಯಿಸಲು ಅವರು ಹೇಗೆ ಸರಳವಾದ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಸಜ್ಜುಗೊಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಬರೆದಿದ್ದಾರೆ.
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಭಾರತಕ್ಕೆ ಬಂದಿಳಿದ ಬಳಿಕ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ರಷ್ಯಾದ ಪಳೆಯುಳಿಕೆ ಇಂಧನಗಳು ಮತ್ತು ಮಿಲಿಟರಿ ಉಪಕರಣಗಳ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಬೋರಿಸ್ ಜಾನ್ಸನ್ ಭಾರತದಲ್ಲಿ ರಕ್ಷಣೆ ಮತ್ತು ಹಸಿರು ಶಕ್ತಿಯ ಮೇಲೆ ಹೊಸ ಸಹಯೋಗವನ್ನು ನಿರೀಕ್ಷಿಸುತ್ತಿದ್ದಾರೆ.
#WATCH | Prime Minister of the United Kingdom Boris Johnson visits Sabarmati Ashram, tries his hands on ‘charkha’ pic.twitter.com/6RTCpyce3k
— ANI (@ANI) April 21, 2022
ಬ್ರಿಟಿಷ್ ಪ್ರಧಾನಿ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ವಾಣಿಜ್ಯ ಒಪ್ಪಂದಗಳ ರಾಫ್ಟ್ ಅನ್ನು ಘೋಷಿಸುತ್ತಾರೆ ಮತ್ತು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿ “ಹೊಸ ಯುಗ”ವನ್ನು ಶ್ಲಾಘಿಸುತ್ತಾರೆ ಎಂದು ಯುಕೆ ಹೈ ಕಮಿಷನ್ ತಿಳಿಸಿದೆ.
“ಬೋರಿಸ್ ಜಾನ್ಸನ್‌ಗೆ ಉಡುಗೊರೆಯಾಗಿ ನೀಡಿದ ಪುಸ್ತಕಗಳಲ್ಲಿ “ಲಂಡನ್‌ಗೆ ಮಾರ್ಗದರ್ಶಿ” ಒಂದಾಗಿದೆ. ಲಂಡನ್‌ನಲ್ಲಿ ಹೇಗೆ ವಾಸಿಸಬೇಕು ಎಂಬುದರ ಕುರಿತು ಮಹಾತ್ಮ ಗಾಂಧಿಯವರ ಸಲಹೆಗಳನ್ನು ಒಳಗೊಂಡಿರುವ ಅಪ್ರಕಟಿತ ಪುಸ್ತಕ ಇದಾಗಿದೆ. ಇದು ಗಾಂಧಿಯವರು ಬರೆದ ಮೊದಲ ಪುಸ್ತಕವಾಗಿದ್ದು, ಇದುವರೆಗೆ ಪ್ರಕಟವಾಗಲಿಲ್ಲ. ನಾವು ಮಹಾತ್ಮಾ ಗಾಂಧಿಯವರ ಕಲೆಕ್ಟೆಡ್ ವರ್ಕ್ಸ್‌ನಿಂದ ವಿಷಯವನ್ನು ಸಂಗ್ರಹಿಸಿ ಪುಸ್ತಕವನ್ನು ಸಂಗ್ರಹಿಸಿದ್ದೇವೆ ಎಂದು ಆಶ್ರಮದ ವಕ್ತಾರ ವಿರಾಟ್ ಕೊಠಾರಿ ಹೇಳಿದ್ದಾರೆ.
“It is an immense privilege to come to the Ashram of this extraordinary man, and to understand how he mobilised such simple principles of truth and non-violence to change the world for the better”: UK PM Boris Johnson’s message at Gandhi Ashram, Ahmedabad pic.twitter.com/z9Gj6FrB52
— ANI (@ANI) April 21, 2022
ಬೋರಿಸ್ ಜಾನ್ಸನ್ ಇಂದು ಬೆಳಗ್ಗೆ ತಮ್ಮ ಭಾರತ ಭೇಟಿಗಾಗಿ ಮೊದಲು ಅಹಮದಾಬಾದ್‌ಗೆ ಆಗಮಿಸಿದರು. ವಿಮಾನ ನಿಲ್ದಾಣದಿಂದ ನಗರದ ಹೋಟೆಲ್‌ಗೆ ನಾಲ್ಕು ಕಿಮೀ ಮಾರ್ಗದಲ್ಲಿ ಅವರಿಗೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಅವರನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಬ್ರಿಟನ್ ಪ್ರಧಾನಿ ಅವರ ಬೆಂಗಾವಲು ಪಡೆ ಹೋಟೆಲ್‌ಗೆ ತೆರಳುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಮತ್ತು ರಸ್ತೆಯುದ್ದಕ್ಕೂ ಸಾಂಪ್ರದಾಯಿಕ ಗುಜರಾತಿ ನೃತ್ಯಗಳು ಮತ್ತು ಸಂಗೀತವನ್ನು ಪ್ರದರ್ಶಿಸುವ ತಂಡಗಳಿಂದ ಸ್ವಾಗತಿಸಲಾಯಿತು.
ರೋಡ್‌ಶೋ ವಿಮಾನ ನಿಲ್ದಾಣದ ಹೊರಗೆ ಪ್ರಾರಂಭವಾಯಿತು ಮತ್ತು ದಫ್ನಾಲಾ ಮತ್ತು ರಿವರ್‌ಫ್ರಂಟ್ ಮೂಲಕ ಆಶ್ರಮ ರಸ್ತೆಯ ಮೂಲಕ ಸಾಗಿತು. ಏರ್‌ಪೋರ್ಟ್ ಸರ್ಕಲ್‌ನಿಂದ ಆಶ್ರಮ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್‌ವರೆಗೆ ನಾಲ್ಕು ಕಿಮೀ ವ್ಯಾಪ್ತಿಯಲ್ಲಿ ನಿಯಮಿತ ಮಧ್ಯಂತರದಲ್ಲಿ 40 ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಯಿತು. ಅಲ್ಲಿ ತಂಡಗಳು ಬೋರಿಸ್ ಜಾನ್ಸನ್ ಅವರನ್ನು ಸ್ವಾಗತಿಸಲು ಸಾಂಪ್ರದಾಯಿಕ ಭಾರತೀಯ ನೃತ್ಯಗಳನ್ನು ಪ್ರದರ್ಶಿಸಲಾಯಿತು.
ಇದನ್ನೂ ಓದಿ: ಏಪ್ರಿಲ್ 21-22ಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ; ಪ್ರಧಾನಿ ಮೋದಿಯೊಂದಿಗೆ ಮಾತುಕತೆ
ಕ್ರಿಸ್ಮಸ್ ಹೊತ್ತಿಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಎರಡನೇ ಮಗುವಿನ ತಂದೆಯಾಗಲಿದ್ದಾರೆ!
Published On - 3:44 pm, Thu, 21 April 22