ಕ್ರಿಸ್ಮಸ್ ಹೊತ್ತಿಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಎರಡನೇ ಮಗುವಿನ ತಂದೆಯಾಗಲಿದ್ದಾರೆ!

ಕ್ರಿಸ್ಮಸ್ ಹೊತ್ತಿಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಎರಡನೇ ಮಗುವಿನ ತಂದೆಯಾಗಲಿದ್ದಾರೆ!
ಬೊರಿಸ್ ಜಾನ್ಸನ್ ದಂಪತಿ ತಮ್ಮ ಮೊದಲ ಮಗುವಿನೊಂದಿಗೆ

ಕೇರಿ ಅವರು ಸಾಮಾಜಿಕ ಜಾಲತಾಣದ ಌಪ್ ಇನಸ್ಟಾದಲ್ಲಿ ಎರಡನೇ ತಾಯಿಯ ಮಗುವಿನ ತಾಯಿಯಾಗುತ್ತಿರುವುದು ಬಹಳ ಸಂತೋಷವನ್ನುಂಟು  ಮಾಡಿದೆ ಅಂತ ಹೇಳಿರುವರೆಂದು ಅವರ ಸ್ನೇಹಿತೆಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವರ್ಷಾರಂಭದಲ್ಲಿ ತನಗೆ ಗರ್ಭಪಾತವಾಗಿರುವ ವಿಷಯವನ್ನೂ ಕೇರಿ ಹೇಳಿಕೊಂಡಿದ್ದಾರೆ.

TV9kannada Web Team

| Edited By: Arun Belly

Aug 01, 2021 | 1:45 AM

ಬ್ರಿಟಿಷ್ ಮಾಧ್ಯಮಗಳನ್ನು ನಂಬುವುದಾದರೆ, ಅಲ್ಲಿನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಮತ್ತು ಅವರ ಪತ್ನಿ ಕೇರಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೇರಿ ಗರ್ಭಿಣಿಯಾಗಿರುವರೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನಿಮಗೆ ನೆನಪಿರಿಬಹುದು, ಕಳೆದ ಏಪ್ರಿಲ್ನಲ್ಲಿ ಜಾನ್ಸನ್ ದಂಪತಿಗಳಿಗೆ ಒಂದು ಗಂಡು ಮಗುವಾಗಿತ್ತು. ಈ ಮಗುವಿಗೆ ಅವರು ವಿಲ್ಫ್ರೆಡ್ ಎಂದು ನಾಮಕರಣ ಮಾಡಿದ್ದಾರೆ.

ಕೇರಿ ಅವರು ಸಾಮಾಜಿಕ ಜಾಲತಾಣದ ಌಪ್ ಇನಸ್ಟಾದಲ್ಲಿ ಎರಡನೇ ತಾಯಿಯ ಮಗುವಿನ ತಾಯಿಯಾಗುತ್ತಿರುವುದು ಬಹಳ ಸಂತೋಷವನ್ನುಂಟು  ಮಾಡಿದೆ ಅಂತ ಹೇಳಿರುವರೆಂದು ಅವರ ಸ್ನೇಹಿತೆಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವರ್ಷಾರಂಭದಲ್ಲಿ ತನಗೆ ಗರ್ಭಪಾತವಾಗಿರುವ ವಿಷಯವನ್ನೂ ಕೇರಿ ಹೇಳಿಕೊಂಡಿದ್ದಾರೆ.

‘ಗರ್ಭಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದು ಅನೇಕ ಜನರಿಗೆ ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಮ್ನಂಥ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್​ಗಳಲ್ಲಿ ಸಕ್ರಿಯರಾಗಿರುವವರಿಗೆ ನಿಜವಾಗಿಯೂ ಕಷ್ಟವಾಗಬಹುದು, ಯಾಕೆಂದರೆ ಅವರಿಗೆ ಎಲ್ಲವೂ ಚೆನ್ನಾಗಿ ನಡೆಯುತ್ತಿರುವಂತೆ ಕಾಣುತ್ತದೆ” ಎಂದು ಕೇರಿ ಹೇಳಿದ್ದಾರೆ.

‘ಬೇರೆಯವರೂ ತಮಗಾದ ತೊಂದರೆ ಬಗ್ಗೆ ಹೇಳಿಕೊಂಡಾಗ ನನಗೆ ಕೊಂಚ ನಿರಾಳವೆನಿಸುತ್ತದೆ. ಹಾಗಾಗಿ ಚಿಕ್ಕದಾಗಿ ನನ್ನ ಅನುಭವವನ್ನು ಹೇಳಿಕೊಂಡರೆ ಬೇರೆಯವರಿಗೆ ಅದು ಸಹಾಯವಾಗಬಹುದೆನ್ನುವ ನಿರೀಕ್ಷೆ ನನ್ನದು,’ ಎಂದು ಕೇರಿ ಹೇಳಿದ್ದಾರೆ.

57 ವರ್ಷ ವಯಸ್ಸಿನ ಪ್ರಧಾನ ಮಂತ್ರಿ ಜಾನ್ಸನ್ ಅವರಿಗೆ ಕೇರಿ ಮೂರನೇ ಹೆಂಡತಿ. ಇವರಿಬ್ಬರು ಈ ವರ್ಷದ ಮೇ ತಿಂಗಳಲ್ಲಿ ಮದುವೆಯಾದರು. ತಮ್ಮ ಮೊದಲ ವೈವಾಹಿಕ ಸಂಬಂಧಗಳಿಂದ ಎಷ್ಟು ಮಕ್ಕಳು ಹುಟ್ಟಿವೆ ಅನ್ನೋದನ್ನು ಜಾನ್ಸನ್ ಅವರು ಯಾವತ್ತೂ ಬಹಿರಂಗಪಡಿಸಿಲ್ಲ. ವೃತ್ತಿಯಲ್ಲಿ ವಕೀಲೆಯಾಗಿರುವ ಅವರ ಎರಡನೇ ಪತ್ನಿ ಮರೀನಾ ವೀಲರ್ ಅವರೊಂದಿಗೆ  ಜಾನ್ಸನ್ ಅವರಿಗೆ 4 ಮಕ್ಕಳಿವೆ!

ಬ್ರಿಟನ್​ನಲ್ಲಿ ಮಕ್ಕಳನ್ನು ಹುಟ್ಟಿಸುವುದಕ್ಕೆ ಯಾವುದೇ ನಿರ್ಬಂಧ ಇದ್ದಂತಿಲ್ಲ. ಮಾಧ್ಯಮಗಳಿಗೆ ಗೊತ್ತಾಗಿರುವ ಪ್ರಕಾರ ಜಾನ್ಸನ್ ಅವರಿಗೆ ಕೇರಿಯಲ್ಲಿ ಹುಟ್ಟಲಿರುವುದು ಎರಡನೇ ಮಗು. ಅಂದರೆ ಅಧಿಕೃತವಾಗಿ ಅವರಿಗೆ ಆರು ಮಕ್ಕಳು ಅಂತಾಯಿತು. ಮೊದಲ ಹೆಂಡತಿಗೆ ಅವರು ಎಷ್ಟು ಮಕ್ಕಳನ್ನು ಕರುಣಿಸಿದ್ದಾರೆ ಅಂತ ಮಾಧ್ಯಮಗಳಿಗೆ ಗೊತ್ತಿಲ್ಲ.

ಪುಣ್ಯಕ್ಕೆ ಅವರು ಇಂಗ್ಲೆಂಡ್ನಲ್ಲಿ ಹುಟ್ಟಿದ್ಧಾರೆ. ಅವರೇನಾದರೂ ಚೀನಾದಲ್ಲೋ ಅಥವಾ ನಮ್ಮ ಉತ್ತರ ಪ್ರದೇಶದಲ್ಲೋ ಹುಟಿದ್ದರೆ ಬಹಳ ಕಷ್ಟವಾಗುತಿತ್ತು. ಆಂಗ್ಲರ ನಾಡಿನಲ್ಲಿ ಹುಟ್ಟಿದ್ದಕ್ಕೆ ಅವರು ಪ್ರಧಾನ ಮಂತ್ರಿಗಳಾಗಿದ್ದಾರೆ. ಚೀನಾ ಇಲ್ಲವೇ ಯುಪಿಯಲ್ಲಿ ಜನಿಸಿದ್ದರೆ, ಪ್ರಧಾನ ಮಂತ್ರಿ ಆಗುವ ಮಾತು ಹಾಗಿರಲಿ, ಪಡಿತರ ಕಾರ್ಡು ಮತ್ತು ವೋಟರ್ ಐಡಿಯನ್ನು ಸರ್ಕಾರಗಳಿಗೆ ವಾಪಸ್ಸು ಕೊಟ್ಟು ವೋಟು ಮಾಡುವ ಹಕ್ಕನ್ನೂ ಕಳೆದುಕೊಂಡಿರುತ್ತಿದ್ದರು!

ಅಂದಹಾಗೆ, ಜಾನ್ಸನ್ ಮೂರನೇ ಪತ್ನಿ ಕೇರಿಗೆ ಈಗ 33 ಪ್ರಾಯ. ಡಿಸೆಂಬರ್​ನಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Population control: ಹೆಚ್ಚು ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ ಕಡಿಮೆ ಮಕ್ಕಳ ಹೊಂದಿದವರಿಗೆ ಮಾತ್ರವೇ ಸರ್ಕಾರಿ ಸೌಲಭ್ಯ ಪ್ರಾಪ್ತಿ!

Follow us on

Related Stories

Most Read Stories

Click on your DTH Provider to Add TV9 Kannada