Viral Video: ಮಹಿಳೆಯನ್ನು ರೂಂನಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿದ ಪೊಲೀಸರು; ಯೋಗಿ ಸರ್ಕಾರದ ವಿರುದ್ಧ ಎಸ್​ಪಿ ಆಕ್ರೋಶ

| Updated By: Digi Tech Desk

Updated on: Dec 26, 2022 | 11:51 AM

ಥಳಿತಕ್ಕೊಳಗಾಗಿರುವ ಮಹಿಳೆ ಸಹಾಯಕ್ಕಾಗಿ ಮನವಿ ಮಾಡುವಾಗ ಸುತ್ತಮುತ್ತಲಿನ ಜನರು "ನೀವು ಯಾಕೆ ಬಾಗಿಲು ಹಾಕಿಕೊಂಡಿದ್ದೀರಿ, ನೀವು ಆಕೆಯನ್ನು ಏನು ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸುತ್ತಿರುವ ಧ್ವನಿಯನ್ನು ಕೇಳಬಹುದು.

Viral Video: ಮಹಿಳೆಯನ್ನು ರೂಂನಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿದ ಪೊಲೀಸರು; ಯೋಗಿ ಸರ್ಕಾರದ ವಿರುದ್ಧ ಎಸ್​ಪಿ ಆಕ್ರೋಶ
ಮಹಿಳೆಗೆ ಥಳಿಸುತ್ತಿರುವ ಪೊಲೀಸರು
Image Credit source: India.com
Follow us on

ನವದೆಹಲಿ: ಸಮಾಜವಾದಿ ಪಕ್ಷದ (Samajwadi Party) ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹರಿದಾಡುತ್ತಿರುವ ಭಯಾನಕ ವಿಡಿಯೋ ವೈರಲ್ (Video Viral) ಆಗಿದೆ. ಸುಮಾರು 2 ನಿಮಿಷಗಳ ಅವಧಿಯ ಈ ವಿಡಿಯೋದಲ್ಲಿ ಪೊಲೀಸರು ಮಹಿಳೆಯೊಬ್ಬರನ್ನು ನಿರ್ದಯವಾಗಿ ಥಳಿಸುವ ದೃಶ್ಯವನ್ನು ನೋಡಬಹುದು. ಕಾನ್ಪುರದ (Kanpur) ಕಕ್ವಾನ್ ಪ್ರದೇಶದಲ್ಲಿ ಸಬ್ ಇನ್​ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಯಂತೆ ಕಾಣಿಸುವ ಪೊಲೀಸ್ ಕಾನ್​ಸ್ಟೆಬಲ್ ಒಬ್ಬರು ನೋವಿನಿಂದ ಕೂಗುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುವ
ಮಹಿಳೆಯನ್ನು ಥಳಿಸಿ ದೌರ್ಜನ್ಯ ಎಸಗಿರುವ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಥಳಿತಕ್ಕೊಳಗಾಗಿರುವ ಮಹಿಳೆ ಸಹಾಯಕ್ಕಾಗಿ ಮನವಿ ಮಾಡುವಾಗ ಸುತ್ತಮುತ್ತಲಿನ ಜನರು “ನೀವು ಯಾಕೆ ಬಾಗಿಲು ಹಾಕಿಕೊಂಡಿದ್ದೀರಿ, ನೀವು ಆಕೆಯನ್ನು ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸುತ್ತಿರುವ ಧ್ವನಿಯನ್ನು ಕೇಳಬಹುದು. ಆಗ ಆ ಮಹಿಳೆ “ಇವರು ನನ್ನನ್ನು ಹೊಡೆಯುತ್ತಿದ್ದಾರೆ, ಹಿಂಸಿಸುತ್ತಿದ್ದಾರೆ” ಎಂದು ಕೋಣೆಯ ಒಳಗಿನಿಂದ ಕೂಗುತ್ತಾಳೆ.

ಮಹಿಳೆಯನ್ನು ಕೋಣೆಯಲ್ಲಿ ಕೋಡಿಹಾಕಿರುವ ವೈರಲ್​​ ವಿಡಿಯೋ ಇಲ್ಲಿದೆ

ತಾವು ಮಹಿಳೆಗೆ ಥಳಿಸುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಲಾಗುತ್ತಿದೆ ಎಂದು ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಆ ಜನರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಅಲ್ಲದೆ, ತಮ್ಮ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಕೆಲವೇ ಸೆಕೆಂಡ್​ನ ಪ್ರಮೋಷನಲ್​ ವಿಡಿಯೋಗೆ 15 ಕೋಟಿ ರೂಪಾಯಿ ಚಾರ್ಜ್​ ಮಾಡಿದ ಊರ್ವಶಿ ರೌಟೇಲಾ

ಇದರ ನಡುವೆ, ಈ ಘಟನೆಯ ಬಗ್ಗೆ ಸಮಾಜವಾದಿ ಪಕ್ಷವು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಾನ್ಪುರ ಪೊಲೀಸರ ನಾಚಿಕೆಗೇಡಿನ ಕೃತ್ಯವಿದು ಎಂದು ಎಸ್​ಪಿ ಟ್ವೀಟ್ ಮಾಡಿದೆ. ಪ್ರತಿದಿನ ಯೋಗಿ ಸರ್ಕಾರದ ಪೊಲೀಸರು ನಾಗರಿಕರ ಮೇಲೆ ದೌರ್ಜನ್ಯ ಎಸಗುತ್ತಿರುವ ವೀಡಿಯೊಗಳು ಹೊರಬರುತ್ತಿವೆ. ಆದರೆ ಮುಖ್ಯಮಂತ್ರಿ ಮಾತ್ರ ಈ ಬಗ್ಗೆ ಮೌನವಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷ ಒತ್ತಾಯಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Mon, 26 December 22