ವಿವೇಕ್ ಒಬೆರಾಯ್​ಗೂ ಡ್ರಗ್ಸ್ ಲಿಂಕ್ ಇದೆ: NCB ಸಮನ್ಸ್ ನೀಡಲಿ- ಗೃಹ ಸಚಿವ

ಮುಂಬೈ: ಸ್ಯಾಂಡಲ್​ವುಡ್​ ಜೊತೆ ಮಾದಕವಸ್ತು ಜಾಲ ತಳುಕು ಹಾಕಿಕೊಂಡಿರುವ ಪ್ರಕರಣದಲ್ಲಿ ಆರೋಪಿ 6 ಆದಿತ್ಯ ಆಳ್ವಾಗಾಗಿ ಆತನ ಭಾವ, ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಬೆಂಗಳೂರು CCB ಪೊಲೀಸರು ನಿನ್ನೆ ಶೋಧ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಇದೀಗ ನಟ ವಿವೇಕ್ ಒಬೆರಾಯ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ವಿವೇಕ್ ವಿರುದ್ಧ ಅನಿಲ್ ದೇಶಮುಖ್ ಗಂಭೀರ ಆರೋಪ ಮಾಡಿದ್ದಾರೆ. ವಿವೇಕ್ ಒಬೆರಾಯ್ ಗೂ ಡ್ರಗ್ಸ್ ಲಿಂಕ್ ಇದೆ. ವಿವೇಕ್ ಒಬೆರಾಯ್-ಸಂದೀಪ್ ಸಿಂಗ್ ಗೂ […]

ವಿವೇಕ್ ಒಬೆರಾಯ್​ಗೂ ಡ್ರಗ್ಸ್ ಲಿಂಕ್ ಇದೆ: NCB ಸಮನ್ಸ್ ನೀಡಲಿ- ಗೃಹ ಸಚಿವ
ಸಾಧು ಶ್ರೀನಾಥ್​

Updated on: Oct 16, 2020 | 6:09 PM

ಮುಂಬೈ: ಸ್ಯಾಂಡಲ್​ವುಡ್​ ಜೊತೆ ಮಾದಕವಸ್ತು ಜಾಲ ತಳುಕು ಹಾಕಿಕೊಂಡಿರುವ ಪ್ರಕರಣದಲ್ಲಿ ಆರೋಪಿ 6 ಆದಿತ್ಯ ಆಳ್ವಾಗಾಗಿ ಆತನ ಭಾವ, ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಬೆಂಗಳೂರು CCB ಪೊಲೀಸರು ನಿನ್ನೆ ಶೋಧ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಇದೀಗ ನಟ ವಿವೇಕ್ ಒಬೆರಾಯ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ವಿವೇಕ್ ವಿರುದ್ಧ ಅನಿಲ್ ದೇಶಮುಖ್ ಗಂಭೀರ ಆರೋಪ ಮಾಡಿದ್ದಾರೆ.

ವಿವೇಕ್ ಒಬೆರಾಯ್ ಗೂ ಡ್ರಗ್ಸ್ ಲಿಂಕ್ ಇದೆ. ವಿವೇಕ್ ಒಬೆರಾಯ್-ಸಂದೀಪ್ ಸಿಂಗ್ ಗೂ ಸಂಬಂಧ ಇದೆ. NCB ಇವಬ್ಬರಿಗೂ ಸಮನ್ಸ್ ನೀಡಿ, ವಿಚಾರಣೆ ನಡೆಸಲಿ ಎಂದು ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ. ಸಂದೀಪ್ ಸಿಂಗ್, ಮೋದಿ ಜೀವನ ಚರಿತ್ರೆ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ವಿವೇಕ್ ಒಬೆರಾಯ್, ಮೋದಿ ಪಾತ್ರದಲ್ಲಿ ಅಭಿನಯಿಸಿದ್ದರು ಎಂಬುದು ಗಮನಾರ್ಹ.

Published On - 5:41 pm, Fri, 16 October 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us