AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಘಾಟನೆಗೊಂಡು ಕೆಲ ಗಂಟೆಗಳಲ್ಲೇ ಕುಸಿಯಿತೇ ವೈಜಾಗ್​ನ ತೇಲುವ ಸೇತುವೆ, ಸರ್ಕಾರ ಹೇಳಿದ್ದೇನು?

ಉದ್ಘಾಟನೆಗೊಂಡು ಸ್ವಲ್ಪ ಗಂಟೆಗಳಲ್ಲೇ ವೈಜಾಗ್​ನ ತೇಲುವ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ ಎನ್ನುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ವಿಚಾರ ಕುರಿತು ಆಂಧ್ರಪ್ರದೇಶ ಸರ್ಕಾರ ನೀಡಿರುವ ಸ್ಪಷ್ಟನೆ ಇಲ್ಲಿದೆ.

ಉದ್ಘಾಟನೆಗೊಂಡು ಕೆಲ ಗಂಟೆಗಳಲ್ಲೇ ಕುಸಿಯಿತೇ ವೈಜಾಗ್​ನ ತೇಲುವ ಸೇತುವೆ, ಸರ್ಕಾರ ಹೇಳಿದ್ದೇನು?
ಸೇತುವೆ
ನಯನಾ ರಾಜೀವ್
|

Updated on: Feb 28, 2024 | 9:20 AM

Share
ಉದ್ಘಾಟನೆಗೊಂಡು ಕೆಲವೇ ಗಂಟೆಗಳಲ್ಲಿ ವೈಜಾಗ್​ನ ತೇಲುವ ಸೇತುವೆ( Floating Bridge) ಕುಸಿದಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದೆ. ಆದರೆ ಇದಕ್ಕೆ ಆಂಧ್ರಪ್ರದೇಶ ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ಇದು ಅಣಕು ಡ್ರಿಲ್​ನ ಭಾಗ ಅಷ್ಟೇ, ಸೇತುವೆಗೆ ಏನೂ ಆಗಿಲ್ಲ ಎಂದಿದ್ದಾರೆ.
ಫೆಬ್ರವರಿ 25 ರಂದು ಸೇತುವೆಯ ಉದ್ಘಾಟನೆ ನಡೆದಿತ್ತು. ರ್‌ಕೆ ಬೀಚ್‌ನಲ್ಲಿ ಭಾನುವಾರ ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ವೈವಿ ಸುಬ್ಬಾ ರೆಡ್ಡಿ ಅವರು ತೇಲುವ ಸೇತುವೆಯನ್ನು ಉದ್ಘಾಟನೆ ಮಾಡಿದ್ದರು.
24 ಗಂಟೆಗಳಲ್ಲಿ ಸೇತುವೆ ಒಂದು ಭಾಗ ಮುರಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿರೋಧ ಪಕ್ಷವಾದ ಟಿಡಿಪಿ ಪಕ್ಷವು ಟೀಕಿಸಿತ್ತು. ದು ವೈಎಸ್‌ಆರ್‌ಸಿಪಿ ಸರ್ಕಾರಕ್ಕೆ ದೊಡ್ಡ ಮುಜುಗರವನ್ನು ಉಂಟುಮಾಡಿತ್ತು. ಉಬ್ಬರವಿಳಿತದ ಕಾರಣ, ಸೇತುವೆಯ ಟಿ ಆಕಾರದ ವೀಕ್ಷಣಾ ಸ್ಥಳವನ್ನು ಬೇರ್ಪಡಿಸಿ ಅದರ ಸ್ಥಿರತೆಯನ್ನು ಪರೀಕ್ಷಿಸಲು ದೂರ ಇರಿಸಲಾಗಿದೆ.
ಆದರೆ ಕೆಲವರು ಸೇತುವೆ ಮತ್ತು ಬೇರ್ಪಟ್ಟ ವೀಕ್ಷಣಾ ಸ್ಥಳದ ನಡುವಿನ ಅಂತರದ ಚಿತ್ರಗಳನ್ನು ಕ್ಲಿಕ್ ಮಾಡಿ ತೇಲುವ ಸೇತುವೆ ಮುರಿದಿದೆ ಎಂದು ಆರೋಪಿಸಿದ್ದಾರೆ ಎಂದರು. ಅಣಕು ಡ್ರಿಲ್‌ನ ಭಾಗವಾಗಿ ಸೇತುವೆಯನ್ನು ಬೇರ್ಪಡಿಸಲಾಗಿದೆ, ಬಲವಾದ ಅಲೆಗಳು ಬಂದ ಸಮಯದಲ್ಲಿ ಅಂತಹ ಪ್ರತ್ಯೇಕತೆಯು ಸಾಮಾನ್ಯ ತಾಂತ್ರಿಕ ಪ್ರಕ್ರಿಯೆಯಾಗಿದೆ.
ಅಣಕು ಡ್ರಿಲ್‌ಗಳ ಭಾಗವಾಗಿ ಅಗತ್ಯವಿರುವಾಗ ಭವಿಷ್ಯದಲ್ಲಿಯೂ ಇದೇ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಸೋಮವಾರದಿಂದ ಸೇತುವೆಯ ಮೇಲೆ ಪ್ರವಾಸಿಗರನ್ನು ಅನುಮತಿಸಲು ಸರ್ಕಾರ ಬಯಸಿದ್ದರೂ, ಹವಾಮಾನದಲ್ಲಿನ ಬದಲಾವಣೆ ಮತ್ತು ಬಲವಾದ ಅಲೆ ಇದ್ದ ಕಾರಣ ಅವಕಾಶ ನೀಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏತನ್ಮಧ್ಯೆ, ಕೈಗಾರಿಕಾ ಸಚಿವ ಜಿ ಅಮರನಾಥ್ ಅವರು ಟಿಡಿಪಿ ತೇಲುವ ಸೇತುವೆಯ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ