ಬೆಂಗಳೂರು ಜೈಲಿನಲ್ಲಿರುವ ಜಯಲಲಿತಾ ದತ್ತು ಮಗ ಸುಧಾಕರನ್​ ಅವಧಿಗೂ ಮೊದಲೇ ರಿಲೀಸ್?

ಸುಧಾಕರನ್​, ಶಶಿಕಲಾ ಮತ್ತು ಇಳವರಸಿಯನ್ನು ಬೆಂಗಳೂರಿನ ಕೇಂದ್ರ ಕಾರಾಗ್ರಹದಲ್ಲಿ ಇಡಲಾಗಿದೆ. ಈ ಮೂವರ ಶಿಕ್ಷೆ ಅವಧಿ ಜನವರಿ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆದರೆ, ಸುಧಾಕರನ್​ ಈಗ ಒಂದುವರೆ ತಿಂಗಳು ಮೊದಲೇ ಜೈಲಿನಿಂದ ಹೊರ ಬರುತ್ತಿದ್ದಾರೆ.

ಬೆಂಗಳೂರು ಜೈಲಿನಲ್ಲಿರುವ ಜಯಲಲಿತಾ ದತ್ತು ಮಗ ಸುಧಾಕರನ್​ ಅವಧಿಗೂ ಮೊದಲೇ ರಿಲೀಸ್?
ಪರಪ್ಪನ ಅಗ್ರಹಾರ ಜೈಲು
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 18, 2020 | 9:10 PM

ಬೆಂಗಳೂರು: ನಗರದ ಪರಪ್ಪನ ಅಗ್ರಹಾರದಲ್ಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ದತ್ತು ಪುತ್ರ ವಿಎನ್​ ಸುಧಾಕರನ್​ ಅವಧಿಗೂ ಮೊದಲೇ ಜೈಲಿನಿಂದ ಬಿಡುಗಡೆ ಹೊಂದುತ್ತಿದ್ದಾರೆ ಎಂದು ಅವರ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ದತ್ತು ಪುತ್ರ ಸುಧಾಕರನ್, ಜಯಲಲಿತಾ ಆಪ್ತೆ ವಿಕೆ ಶಶಿಕಲಾ ಹಾಗೂ ಅವರ ಅತ್ತಿಗೆ ಇಲವರಸಿಯನ್ನು ಅಪರಾಧಿಗಳು ಎಂದು ಕೋರ್ಟ್​ ತೀರ್ಪು ನೀಡಿ, ನಾಲ್ಕು ವರ್ಷ ಜೈಲು ಶಿಕ್ಷೆ ನೀಡಿತ್ತು.

ಸುಧಾಕರನ್​, ಶಶಿಕಲಾ ಮತ್ತು ಇಲವರಸಿಯನ್ನು ಬೆಂಗಳೂರಿನ ಕೇಂದ್ರ ಕಾರಾಗ್ರಹದಲ್ಲಿ ಇಡಲಾಗಿದೆ. ಈ ಮೂವರ ಶಿಕ್ಷೆ ಅವಧಿ ಜನವರಿ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆದರೆ, ಸುಧಾಕರನ್​ ಈಗ ಒಂದುವರೆ ತಿಂಗಳು ಮೊದಲೇ ಜೈಲಿನಿಂದ ಹೊರ ಬರುತ್ತಿದ್ದಾರೆ.

ವಿಚಾರಣೆ ವೇಳೆ ಸುಧಾಕರನ್​ 92 ದಿನ ಜೈಲಿನಲ್ಲಿ ಕಳೆದಿದ್ದರು. ಹೀಗಾಗಿ ನಾನು ಸ್ಥಳೀಯ ನ್ಯಾಯಾಲಯಕ್ಕೆ ಅವರನ್ನು ಬೇಗ ಬಿಡುಗಡೆ ಮಾಡುವಂತೆ ಕೋರಿದ್ದೆ. ನಾವು ಇಂದು ಅಥವಾ ಸೋಮವಾರ ದಂಡದ ಮೊತ್ತ 10 ಕೋಟಿ ರೂಪಾಯಿ ಕಟ್ಟುತ್ತೇವೆ. ನಂತರ ಸುಧಾಕರನ್​ ರಿಲೀಸ್​ ಆಗಲಿದ್ದಾರೆ. ಸೋಮವಾರದ ಸಂಜೆ ವೇಳೆ ಅವರು ಜೈಲಿನಿಂದ ಹೊರ ಬರುವ ನಿರೀಕ್ಷೆ ಇದೆ ಎಂದು ಸುಧಾಕರನ್​ ಪರ ವಕೀಲರು ಹೇಳಿದ್ದಾರೆ.

ಶಶಿಕಲಾ ಶಿಕ್ಷೆ ಅವಧಿ 2021ರ ಜನವರಿ 27ಕ್ಕೆ ಅಂತ್ಯವಾಗಲಿದೆ. ಶಶಿಕಲಾ ಪರ ವಕೀಲರು ಕೂಡ ಬೇಗ ಬಿಡುಗಡೆ ಮಾಡುವಂತೆ ಗೃಹ ಇಲಾಖೆಗೆ ಮನವಿ ಮಾಡಿದೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳಿರುವಾಗ ಶಶಕಿಲಾ ಜೈಲಿನಿಂದ ಬಿಡುಗಡೆ ಆಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಕಾನೂನಿನ ಪ್ರಕಾರ ಶಶಿಕಲಾ ಮುಂದಿನ 6 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ, ಅವರ ಪ್ರಭಾವ ತಮಿಳುನಾಡಿನಲ್ಲಿ ಇನ್ನೂ ಇದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಹೀಗಾಗಿ, ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ನಾಯಕಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

‘ಈ ಬಾರಿ ಚುನಾವಣಾ ಫೈಟ್​ ರಜನಿ, ಶಶಿಕಲಾ ನಡುವೆ ಇರಲಿದೆ.. ಇದ್ರಿಂದ BJP ಭಾರಿ ಗೊಂದಲಕ್ಕೀಡಾಗಿದೆ’

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ