ರೈಲ್ವೇ ಟ್ರ್ಯಾಕ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದ ಯುವಕನಿಗೆ ರೈಲು ಡಿಕ್ಕಿ, ತೀವ್ರ ಗಾಯ
ವಾರಂಗಲ್ ಜಿಲ್ಲೆಯ ಸ್ಥಳೀಯ ಕಾಲೇಜಿನಲ್ಲಿ ಓದುತ್ತಿರುವ ಅಕ್ಷಯ್ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ
ತೆಲಂಗಾಣದಲ್ಲಿ (Telangana) ರೈಲ್ವೇ ಟ್ರ್ಯಾಕ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ (Instagram Reel) ಮಾಡಲು ಪ್ರಯತ್ನಿಸುತ್ತಿದ್ದ ಯುವಕನಿಗೆ ರೈಲು ಡಿಕ್ಕಿ ಹೊಡೆದಿದ್ದು ಆತ ತೀವ್ರವಾಗಿ ಗಾಯಗೊಂಡಿದ್ದಾನೆ. 11 ನೇ ತರಗತಿಯ ವಿದ್ಯಾರ್ಥಿಯಾದ ಈತ ಟ್ರ್ಯಾಕ್ ಉದ್ದಕ್ಕೂ ನಡೆದುಕೊಂಡು ಹೋಗಿ ಚಲಿಸುತ್ತಿರುವ ರೈಲನ್ನು ತನ್ನ ಹಿನ್ನೆಲೆಯಾಗಿ ಬಳಸಲು ಪ್ರಯತ್ನಿಸುತ್ತಿದ್ದ. ಆದರೆ ವೇಗವಾಗಿ ಬೀಸಿದ ಗಾಳಿಯಿಂದಾಗಿ ಆತ ಮಾಡುತ್ತಿರುವ ಸ್ಟಂಟ್ ಆತನಿಗೇ ಮುಳುವಾಯಿತು. ವಾರಂಗಲ್ ಜಿಲ್ಲೆಯ ಸ್ಥಳೀಯ ಕಾಲೇಜಿನಲ್ಲಿ ಓದುತ್ತಿರುವ ಅಕ್ಷಯ್ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಹಳಿಯಲ್ಲಿದ್ದ ಅಕ್ಷಯ್‌ನನ್ನು ಗಮನಿಸಿದ ರೈಲ್ವೇ ಸಿಬ್ಬಂದಿ ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರದೃಷ್ಟವಶಾತ್ ರೈಲ್ವೆ ಹಳಿಗಳಂತಹ ಅಪಾಯಕಾರಿ ಪ್ರದೇಶಗಳಲ್ಲಿ Instagram ರೀಲ್‌ಗಳನ್ನು ಮಾಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಯುವಕರು ಮತ್ತು ಯುವತಿಯರನ್ನು ಒಳಗೊಂಡ ಅಪಘಾತಗಳು ದೇಶದಲ್ಲಿ ತುಂಬಾ ಸಾಮಾನ್ಯವಾಗಿದೆ.