Waqf Bill Tabled: ಲೋಕಸಭೆಯಲ್ಲಿ ವಕ್ಫ್​ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆ, ವಿಪಕ್ಷಗಳು ಗರಂ

|

Updated on: Aug 08, 2024 | 2:39 PM

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಹು ನಿರೀಕ್ಷಿತ ವಕ್ಫ್​ ಮಂಡಳಿ ಕಾನೂನು ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ಕಾಂಗ್ರೆಸ್​ ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

Waqf Bill Tabled: ಲೋಕಸಭೆಯಲ್ಲಿ ವಕ್ಫ್​ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆ, ವಿಪಕ್ಷಗಳು ಗರಂ
ಕಿರಣ್​ ರಿಜಿಜು
Follow us on

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಹು ನಿರೀಕ್ಷಿತ ವಕ್ಫ್​ ಮಂಡಳಿ ಕಾನೂನು ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ಕಾಂಗ್ರೆಸ್​ ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ನಾವು ಈ ಮಸೂದೆಯನ್ನು ವಿರೋಧಿಸುತ್ತೇವೆ, ಜನರು ವಕ್ಫ್​ ಮಂಡಳಿಗೆ ಸ್ವಿಚ್ಛೆಯಿಂದ ದಾನವಾಗಿ ನೀಡುತ್ತಿದ್ದಾರೆ. ಧಾರ್ಮಿಕ ಸಂಸ್ಥೆಗಳಿಗೆ ಸ್ಥಿರ ಹಾಗೂ ಚರಾಸ್ಥಿ ನೀಡುವ ಅಧಿಕಾರ ಇದೆ.

ಮುಸ್ಲಿಂಮೇತರರು ಈ ಸಂಸ್ಥೆಯ ಭಾಗವಾಗಿರಲು ಹೇಗೆ ಸಾಧ್ಯ, ಸುಪ್ರೀಂಕೋರ್ಟ್​ ಅಯೋಧ್ಯಾ ಕಮಿಟಿ ರಚನೆ ಮಾಡಿತ್ತು ಬೇರೆ ಧರ್ಮದವರು ಈ ಕಮಿಟಿಯಲ್ಲಿ ಇರಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ವಕ್ಫ್​ ಬೋರ್ಡ್​ನಲ್ಲೂ ಬೇರೆ ಧರ್ಮದವರು ಸದಸ್ಯರಾಗಲು ಆಗುತ್ತದೆಯೇ, ಇದು ಮುಸ್ಲಿಂ ವಿರುದ್ಧವಾಗಿದೆ, ನಾಳೆ ಕ್ರಿಶ್ಚಿಯನ್ ಬಗ್ಗೆ ಮಸೂದೆ ನಾಡಿದ್ದು ಪಾರ್ಸಿ, ಜೈನ ಬಗ್ಗೆ ಮಸೂದೆಯನ್ನು ತರುತ್ತೀರಾ? ಭಾರತ ಸರ್ವಧರ್ಮ ಮತ್ತು ಸಂಸ್ಕೃತಿಗಳ ಭೂಮಿಯಾಗಿದೆ. ಈಗಾಗಲೇ ಜನರು ನಿಮಗೆ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈ ಮಸೂದೆಯಿಂದ ಸಂವಿಧಾನದ ಉಲ್ಲಂಘನೆಯಾಗುತ್ತಿಲ್ಲ ಎಂದು ವಕ್ಫ್ ತಿದ್ದುಪಡಿ ಮಸೂದೆ ಕುರಿತು ಕಿರಣ್ ರಿಜಿಜು ಹೇಳಿದ್ದಾರೆ. ಹಕ್ಕು ಸಿಗದವರಿಗೆ ಹಕ್ಕುಪತ್ರ ನೀಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಧರ್ಮದಲ್ಲಿ ಹಸ್ತಕ್ಷೇಪ ಇಲ್ಲ. ವಿರೋಧ ಪಕ್ಷಗಳ ಎಲ್ಲ ಆತಂಕಗಳು ದೂರವಾಗುತ್ತವೆ. ಈ ಮಸೂದೆಯನ್ನು ಬೆಂಬಲಿಸಿ, ನಿಮಗೆ ಕೋಟಿ ಕೋಟಿ ಜನರ ಆಶೀರ್ವಾದ ಸಿಗುತ್ತದೆ.

ಮತ್ತಷ್ಟು ಓದಿ: ವಕ್ಫ್​ ಕಾಯ್ದೆ ಎಂದರೇನು? ವಕ್ಫ್​ ಮಂಡಳಿ ಯಾರದ್ದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ? ಇಲ್ಲಿದೆ ಮಾಹಿತಿ 

ಸರ್ಕಾರವು ಲೋಕಸಭೆಯ ಸ್ಪೀಕರ್ ಅಧಿಕಾರವನ್ನು ಮೊಟಕುಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಖಿಲೇಶ್​ ಯಾದವ್ ಹೇಳಿದರು. ನಾವು ಮತ್ತು ಇಡೀ ಪ್ರತಿಪಕ್ಷಗಳು ನಿಮ್ಮ ಪರವಾಗಿ ಹೋರಾಡಬೇಕಾಗುತ್ತದೆ. ಈ ಬಗ್ಗೆ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮಸೂದೆಯು ಸಂವಿಧಾನದ 14, 15 ಮತ್ತು 25 ನೇ ವಿಧಿಯ ತತ್ವಗಳನ್ನು ಉಲ್ಲಂಘಿಸುತ್ತದೆ. ಈ ಮಸೂದೆ ತಾರತಮ್ಯ ಮತ್ತು ಅನಿಯಂತ್ರಿತವಾಗಿದೆ. ಈ ಮಸೂದೆಯನ್ನು ತರುವ ಮೂಲಕ ನೀವು (ಕೇಂದ್ರ ಸರ್ಕಾರ) ರಾಷ್ಟ್ರವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿಲ್ಲ ವಿಭಜಿಸುತ್ತಿದ್ದೀರಿ. ನೀವು ಮುಸ್ಲಿಮರ ಶತ್ರು ಎಂಬುದಕ್ಕೆ ಈ ಮಸೂದೆಯೇ ಸಾಕ್ಷಿ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ

Published On - 2:25 pm, Thu, 8 August 24