ನಾನು ಹೇಳಿದ್ದೆಲ್ಲ ಸುಳ್ಳು.. ಪ್ರತಿಭಟನಾಕಾರರು ನನಗೆ ಹೊಡೆದು, ಬಲವಂತವಾಗಿ ಹೀಗೆ ಹೇಳಿಸಿದರು.. ಪೊಲೀಸರೆದುರು ಆರೋಪಿ ಉಲ್ಟಾ ಹೇಳಿಕೆ
ನವದೆಹಲಿ: ನಿನ್ನೆ ತಡರಾತ್ರಿ ಮುಖವನ್ನೆಲ್ಲ ಮುಚ್ಚಿಕೊಂಡ ವ್ಯಕ್ತಿಯೋರ್ವನನ್ನು ಕೂರಿಸಿಕೊಂಡು ಸಿಂಘು ಗಡಿಯಲ್ಲಿನ ಪ್ರತಿಭಟನಾ ನಿರತ ರೈತರು ಸುದ್ದಿಗೋಷ್ಠಿ ನಡೆಸಿದ್ದರು. ಜ. 26ರಂದು ಟ್ರ್ಯಾಕ್ಟರ್ ಱಲಿಯ ದಿನ ಈ ವ್ಯಕ್ತಿ ಹಾಗೂ ಇವರೊಂದಿಗೆ ಇನ್ನೂ 9 ಜನರು ಸೇರಿ ಹಿಂಸಾಚಾರ ನಡೆಸುವ ಪಿತೂರಿ ನಡೆಸಿದ್ದರು. ಅಲ್ಲದೆ, ನಾಲ್ವರು ರೈತ ಮುಖಂಡರ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಅವರು ಆರೋಪಿಸಿದ್ದರು. ಹಾಗೇ, ಸಿಕ್ಕಿಬಿದ್ದಿದ್ದಾನೆ ಎನ್ನಲಾದ ವ್ಯಕ್ತಿಯೂ ಸಹ, ನಮಗೆ ಹಿಂಸಾಚಾರ ನಡೆಸುವಂತೆ ಹೇಳಿದ್ದು ಪೊಲೀಸ್. ಹಣಕ್ಕಾಗಿ ಈ ಕೆಲಸ ಮಾಡಲು […]
ನವದೆಹಲಿ: ನಿನ್ನೆ ತಡರಾತ್ರಿ ಮುಖವನ್ನೆಲ್ಲ ಮುಚ್ಚಿಕೊಂಡ ವ್ಯಕ್ತಿಯೋರ್ವನನ್ನು ಕೂರಿಸಿಕೊಂಡು ಸಿಂಘು ಗಡಿಯಲ್ಲಿನ ಪ್ರತಿಭಟನಾ ನಿರತ ರೈತರು ಸುದ್ದಿಗೋಷ್ಠಿ ನಡೆಸಿದ್ದರು. ಜ. 26ರಂದು ಟ್ರ್ಯಾಕ್ಟರ್ ಱಲಿಯ ದಿನ ಈ ವ್ಯಕ್ತಿ ಹಾಗೂ ಇವರೊಂದಿಗೆ ಇನ್ನೂ 9 ಜನರು ಸೇರಿ ಹಿಂಸಾಚಾರ ನಡೆಸುವ ಪಿತೂರಿ ನಡೆಸಿದ್ದರು. ಅಲ್ಲದೆ, ನಾಲ್ವರು ರೈತ ಮುಖಂಡರ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಅವರು ಆರೋಪಿಸಿದ್ದರು.
ಹಾಗೇ, ಸಿಕ್ಕಿಬಿದ್ದಿದ್ದಾನೆ ಎನ್ನಲಾದ ವ್ಯಕ್ತಿಯೂ ಸಹ, ನಮಗೆ ಹಿಂಸಾಚಾರ ನಡೆಸುವಂತೆ ಹೇಳಿದ್ದು ಪೊಲೀಸ್. ಹಣಕ್ಕಾಗಿ ಈ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ. ನಾವ್ಯಾರನ್ನು ಹತ್ಯೆ ಮಾಡಬೇಕೋ, ಆ ರೈತ ಮುಖಂಡರ ಫೋಟೋ ಕೂಡ ಇಟ್ಟುಕೊಂಡಿದ್ದೇವೆ ಎಂದಿದ್ದ. ಅದಾದ ಬಳಿಕ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು.
ಆದರೆ ಈಗ ಆತ ಉಲ್ಟಾ ಹೊಡೆದಿದ್ದಾನೆ. ವ್ಯಕ್ತಿಯನ್ನು ಯೋಗೇಶ್ (19) ಎಂದು ಗುರುತಿಸಲಾಗಿದ್ದು, ಸೋನಿಪತ್ ನಿವಾಸಿಯಾಗಿದ್ದಾನೆ. ಹರ್ಯಾಣ ಪೊಲೀಸರ ಬಳಿ ತಾನು ಹೇಳಿದ್ದೆಲ್ಲ ಸುಳ್ಳು. ನಾವು ಹಿಂಸಾಚಾರ ನಡೆಸಲು ಯಾವುದೇ ಸಂಚು ರೂಪಿಸಿರಲಿಲ್ಲ ಎಂದಿದ್ದಾನೆ. ಅಷ್ಟೇ ಅಲ್ಲ, ರೈತರು ನನ್ನನ್ನು ಅಪಹರಿಸಿ, ಈ ಸುಳ್ಳುಗಳನ್ನು ಬಲವಂತವಾಗಿ ಹೇಳಿಸಿದ್ದಾರೆ ಎಂಬುದನ್ನೂ ತಿಳಿಸಿದ್ದಾನೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವರು ನನ್ನನ್ನು ಮನಬಂದಂತೆ ಥಳಿಸಿದರು. ಮೈ ಕಪ್ಪಾಗುವಷ್ಟು ಹೊಡೆದ ಬಳಿಕ, ಬಲವಂತದಿಂದ ಮದ್ಯ ಕುಡಿಸಿದರು. ನಾವು ನಿನ್ನನ್ನು ಕೊಂದು ಹಾಕಿದರೂ, ಅದು ಹೊರಗಿನ ಯಾರಿಗೂ ಗೊತ್ತಾಗುವುದಿಲ್ಲ ಎಂದು ಬೆದರಿಸಿದರು ಎಂದು ಯೋಗೇಶ್ ಹರ್ಯಾಣ ಪೊಲೀಸರಿಗೆ ಹೇಳಿದ್ದಾಗಿ ವರದಿಯಾಗಿದೆ.
ರೈತ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್, ಬಲದೇವ್ ಸಿಂಗ್ ಸಿರ್ಸಾ, ಕುಲದೀಪ್ ಸಂಧು ಮತ್ತು ಜಗಜೀತ್ ಸಿಂಗ್ರ ಫೋಟೋ ಇದ್ದ ಈತನ ಮೊಬೈಲ್ನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜ. 26ರಂದು 4 ರೈತ ಮುಖಂಡರ ಹತ್ಯೆಗೆ ಸಂಚು.. ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರತಿಭಟನಾ ರೈತರು
Published On - 5:24 pm, Sat, 23 January 21