22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಸನ್ಯಾಸಿಯಾಗಿ ಬಂದು ತಾಯಿ ಎದುರು ಭಿಕ್ಷೆ ಬೇಡಿದ
ಎರಡು ದಶಕಗಳ ಹಿಂದೆ ನಾಪತ್ತೆಯಾಗಿದ್ದ ಮಗ ವಾಪಸ್ಸಾಗಿದ್ದಾನೆ, ಆದರೆ ಆತನ ವೇಷ ನೋಡಿ ಪೋಷಕರ ಕಣ್ಣಂಚಲ್ಲಿ ಹನಿಗಳು ಮೂಡಿವೆ, ಆತ ಸನ್ಯಾಸಿಯಾಗಿದ್ದು ಊರಿಂದ ಊರಿಗೆ ತೆರಳಿ ಭಿಕ್ಷೆ ಬೇಡುತ್ತಿದ್ದಾರೆ. ತಾಯಿ ಒಂದೆಡೆ ಅಳುತ್ತಿದ್ದಾರೆ ಮಗ ಭಜನೆ ಹಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಈಗ ತಾಯಿ ಎದುರು ಸನ್ಯಾಸಿ(Monk)ಯಾಗಿ ಬಂದು ನಿಂತಿರುವ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸನ್ಯಾಸಿಯಂತೆ ವೇಷ ಧರಿಸಿ, ಸಾರಂಗಿ ಎಂಬ ಸಾಂಪ್ರದಾಯಿಕ ಸಂಗೀತ ವಾದ್ಯವನ್ನು ನುಡಿಸುತ್ತಾ, ಹಾಡುತ್ತಾ ತನ್ನ ತಾಯಿಯನ್ನು ಬೇಡಿಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ತಾಯಿಯೊಬ್ಬಳು ತನ್ನ ಬಹುದಿನಗಳಿಂದ ಬೇರ್ಪಟ್ಟ ಮಗ ಮರಳಿ ಬಂದು ಭಿಕ್ಷೆ ಬೇಡುತ್ತಾ ಹಾಡುತ್ತಿರುವುದನ್ನು ಕಂಡು ಮನನೊಂದು ಅಳುತ್ತಿರುವ ದೃಶ್ಯವಿದೆ. ರತಿಪಾಲ್ ಸಿಂಗ್ ಅವರ ಮಗ ಪಿಂಗು 2002 ರಲ್ಲಿ ತನ್ನ 11 ನೇ ವಯಸ್ಸಿನಲ್ಲಿ ಯಾವುದೋ ವಿಚಾರಕ್ಕೆ ತಂದೆಯೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ.
ಕೋಪದಿಂದಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕುಟುಂಬದಿಂದ ದೂರವಾಗಿ ಊರಿಂದ ಊರಿಗೆ ಅಲೆದಾಡುತ್ತಾ ಕಾಲ ಕಳೆಯುತ್ತಿದ್ದ. ಇದೀಗ ಆತ ಸನ್ಯಾಸಿಯಾಗಿ ಊರಿಗೆ ಮರಳಿದ್ದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇಹದ ಮೇಲಿನ ಗಾಯದಿಂದ ಅವರು ತನ್ನ ಮಗ ಎಂದು ಗುರುತಿಸಿದರು.
ಸನ್ಯಾಸಿ ಹಾಡು
Delhi Boy: 22 साल से लापता बेटा साधु बनकर लौटा, अपने लाल को देख आंसू नहीं रोक पाई मां Delhi Boy, Who Went Missing 22 Years Ago, Returns To Mother As A Monk#Amethi #Delhi #Sanyasi #Monk #Sahadra #viral #ViralVideo #Maa #pinku #Amethiviralvideo #BBC #viral2024 #ViralVideos pic.twitter.com/qx0xyX08dH
— Abhishek Singh (@A_abhi16) February 7, 2024
ಪಿಂಗು ತನ್ನ ಭಿಕ್ಷೆ ಪಡೆದು ಊರುನಿಂದ ಹೊರಟಿದ್ದಾನೆ, ಮತ್ತೆ ಕುಟುಂಬದಿಂದ ದೂರವಾಗಿದ್ದಾನೆ. ಆತ ಈಗ ಸನ್ಯಾಸಿ ಒಂದೊಮ್ಮೆ ಸನ್ಯಾಸತ್ವ ತೊರೆದು ಮತ್ತೆ ಮೊದಲಿನಂತಾಗಬೇಕು ಎಂದರೆ 11 ಲಕ್ಷ ರೂ. ಪಾವತಿಸಬೇಕು, ಆದರೆ ತನ್ನ ಬಳಿ 100 ರೂಪಾಯಿಯೂ ಇಲ್ಲ ಎಂದು ತಂದೆ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 am, Thu, 8 February 24