ವಾಟ್ಸಾಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಭಾರತದಿಂದ ಪಾಕಿಸ್ತಾನಕ್ಕೆ ಹೋದ ಮಹಿಳೆ
ವಾಟ್ಸಾಪ್ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಮಹಿಳೆಯೊಬ್ಬಳು ಭಾರತದಿಂದ ಪಾಕಿಸ್ತಾನಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿದೆ. ಇಂಥಾ ಘಟನೆಗಳು ಈಗ ಸಾಮಾನ್ಯವಾಗಿದೆ ಕಳೆದ ವರ್ಷ ಅಂಜು ಎಂಬಾಕೆ ಪಾಕಿಸ್ತಾನದ ವ್ಯಕ್ತಿ ನಸ್ತಲ್ಲಾರನ್ನು ಮದುವೆಯಾಗಿದ್ದರು, ಹಾಗೆಯೇ ಪಾಕಿಸ್ತಾನದ ಸೀಮಾ ಹೈದರ್ ಎಂಬಾಕೆ ತನ್ನ ಮಕ್ಕಳೊಂದಿಗೆ ಭಾರತದಲ್ಲಿರುವ ಸಚಿನ್ ಮೀನಾ ಅವರನ್ನು ಮದುವೆಯಾಗಲು ಇಲ್ಲಿಗೆ ಬಂದಿದ್ದರು.
ಜಮ್ಮು ಮತ್ತು ಕಾಶ್ಮೀರ(Jammu And Kashmir)ದ ಮಹಿಳೆಯೊಬ್ಬರು ತಮಗೆ ವಾಟ್ಸಾಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ತನ್ನ ಒಂದೂವರೆ ವರ್ಷದ ಮಗಳ ಸಮೇತ ಪಾಕಿಸ್ತಾನ(Pakistan)ಕ್ಕೆ ತೆರಳಿದ್ದಾರೆ. ಪೂಂಛ್ ನಿವಾಸಿಯಾಗಿರುವ 22 ವರ್ಷದ ಮಹಿಳೆ ಶಬ್ನಮ್ ಅವರು ಗುಲಾಮ್ ರುಬಾನಿ ಎಂಬುವವರನ್ನು ಮದುವೆಯಾಗಿದ್ದರು. ಅವರು ಈಗ ಇಬ್ಬರು ಹೆಣ್ಣುಮಕ್ಕಳ ತಾಯಿ. 4 ವರ್ಷದ ಹಿರಿಯ ಮಗಳನ್ನು ಅಲ್ಲಿಯೇ ಬಿಟ್ಟು ಒಂದೂವರೆ ವರ್ಷದ ಮಗುವನ್ನು ಮಾತ್ರ ಕರೆದುಕೊಂಡು ಹೋಗಿದ್ದಾಳೆ.
ಮಹಿಳೆಯ ಪತಿ ಭಾನುವಾರ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಮೂವರು ಚಿಕ್ಕಪ್ಪಂದಿರು ಮತ್ತು ಚಿಕ್ಕಮ್ಮ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆಕೆ ಪ್ರಿಯಕರನ ಜತೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
ಕಳೆದ ವರ್ಷ ಮತ್ತೊಂದು ಘಟನೆ ನಡೆದಿತ್ತು ಕಳೆದ ವರ್ಷ ರಾಜಸ್ಥಾನದ ವಿವಾಹಿತ ಮಹಿಳೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಳು. ಎರಡು ಮಕ್ಕಳ ತಾಯಿಯಾದ ಅಂಜು ಜುಲೈ 2023ರಲ್ಲಿ ತನ್ನ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾರನ್ನು ಮದುವೆಯಾಗಲು ಖೈಬರ್ ಪಖ್ತುಂಖ್ವಾಗೆ ಪ್ರಯಾಣ ಬೆಳೆಸಿದ್ದಳು. ಆಕೆ ತನ್ನ ಇಬ್ಬರು ಮಕ್ಕಳನ್ನು ಭಾರತದಲ್ಲೇ ಬಿಟ್ಟು ಹೋಗಿದ್ದಳು, ಆಕೆ ಇಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ರಾಜಸ್ಥಾನದ ಭಿವಾಡಿ ಪ್ರದೇಶದಲ್ಲಿ ವಾಸವಾಗಿದ್ದಳು.
ಮತ್ತಷ್ಟು ಓದಿ: ಪಾಕಿಸ್ತಾನಕ್ಕೆ ಹೋಗಿ ಫೇಸ್ಬುಕ್ ಸ್ನೇಹಿತನನ್ನು ಮದುವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್
ಅಂಜು ಪಾಕಿಸ್ತಾನಕ್ಕೆ ಪ್ರಯಾಣಿಸುವ ಮೊದಲು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಫೇಸ್‌ಬುಕ್‌ನಲ್ಲಿ ನಸ್ರುಲ್ಲಾ ಅವರೊಂದಿಗೆ ಸಂಪರ್ಕದಲ್ಲಿದ್ದರು. ಆಕೆಯ ಭಾರತೀಯ ಪತಿ ಅರವಿಂದ್ ಅವರು ಜೈಪುರಕ್ಕೆ ಹೋಗುವ ನೆಪದಲ್ಲಿ ಮನೆಬಿಟ್ಟು ಹೋಗಿದ್ದರು ಆದರೆ ನಂತರ ಅವರು ಪಾಕಿಸ್ತಾನದಲ್ಲಿದ್ದಾರೆ ಎಂದು ಕುಟುಂಬಕ್ಕೆ ತಿಳಿಯಿತು. ಇಸ್ಲಾಂಗೆ ಮತಾಂತರಗೊಂಡು ನಸ್ರುಲ್ಲಾಳನ್ನು ಮದುವೆಯಾದ ನಂತರ ಅಂಜು ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿದಳು. ಕಳೆದ ವರ್ಷ ನವೆಂಬರ್‌ನಲ್ಲಿ ಮಹಿಳೆ ವಾಘಾ-ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಮರಳಿದ್ದರು.
ಮತ್ತೊಂದು ಘಟನೆ ಸೀಮಾ ಹೈದರ್ ಎಂಬಾಕೆ ತನ್ನ ಮಕ್ಕಳನ್ನು ಕರೆದುಕೊಂಡು ಭಾರತದಲ್ಲಿರುವ ಸಚಿನ್ ಮೀನಾ ಅವರನ್ನು ಮದುವೆಯಾಗಲು ಪಾಕಿಸ್ತಾನದಿಂದ ಬಂದಿದ್ದರು. ಇದೀಗ ಆಕೆಯ ಗರ್ಭಿಣಿಯಾಗಿದ್ದು ಸಚಿನ್ ಮೀನಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:39 am, Thu, 8 February 24