Wayanad landslides: ಚೂರಲ್​​ಮಲ, ಮುಂಡಕೈನಲ್ಲಿ ಭೂಕುಸಿತ; 300 ದಾಟಿದ ಸಾವಿನ ಸಂಖ್ಯೆ

ಮೇಪ್ಪಾಡಿ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಗುರುತು ಸಿಗದ ಶವಗಳನ್ನು ಜಿಲ್ಲೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ಹೂಳಲಾಗುತ್ತದೆ. ಕಲ್ಪಟ್ಟಾ ನಗರಸಭೆ, ವೈತ್ತಿರಿ, ಮೂಟ್ಟಿಲ್, ಕನ್ಯಾಂಪಟ, ವಿಷ್ಟಮಠ, ತೊಂಡರನಾಡು, ಎಡವಕ ಮತ್ತು ಮುಲ್ಲಂಕೊಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

Wayanad landslides: ಚೂರಲ್​​ಮಲ, ಮುಂಡಕೈನಲ್ಲಿ ಭೂಕುಸಿತ; 300 ದಾಟಿದ ಸಾವಿನ ಸಂಖ್ಯೆ
ವಯನಾಡು ಭೂಕುಸಿತ
Follow us
ರಶ್ಮಿ ಕಲ್ಲಕಟ್ಟ
|

Updated on: Aug 02, 2024 | 8:17 PM

ಮೇಪ್ಪಾಡಿ ಆಗಸ್ಟ್ 02 : ವಯನಾಡಿನ (Wayanad landslide) ಮುಂಡಕೈ, ಚೂರಲ್‌ಮಲವನ್ನು ಹೇಳಹೆಸರಿಲ್ಲದಂತೆ ನಾಶ ಮಾಡಿದ ಭೂಕುಸಿತ ಸಂಭವಿಸಿ ನಾಲ್ಕನೇ ದಿನ ಕಳೆದರೂ, ಎಲ್ಲಿಯಾದರೂ ಜೀವ ಉಳಿದಿದೆಯೇ ಎಂದು ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಅಂತಹ ತಪಾಸಣೆಯ ಸಮಯದಲ್ಲಿ ಮುಂಡಕೈಯಲ್ಲಿ ಬದುಕಿರುವ ಜನರು ಇದ್ದಾರೆ ಎಂಬ ಸಂಕೇತ ರಾಡಾರ್‌ನಲ್ಲಿ ಸಿಕ್ಕಿತು. ಆದರೆ, ಗಂಟೆಗಟ್ಟಲೆ ತಪಾಸಣೆ ನಡೆಸಿದ  ಯಾರೂ ಅಲ್ಲಿ ಬದುಕುಳಿದಿಲ್ಲ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ.  ಮಣ್ಣಿನಡಿಯಲ್ಲಿ ಜೀವ ಇರುವಿಕೆಯನ್ನು ಪರೀಕ್ಷಿಸುವಾಗ ಭರವಸೆಯ ಸಂಕೇತ ಸಿಕ್ಕಿತು. ರಕ್ಷಣಾ ಕಾರ್ಯಕರ್ತರು ಮಣ್ಣಿನಲ್ಲಿ ಅಗೆದು ಮೋರಿ ಒಳಗೆ ಹೋಗಿ ಪರಿಶೀಲಿಸಿದಾಗ ಏನೂ ಸಿಕ್ಕಿಲ್ಲ. ಕಟ್ಟಡವೊಂದರ ಬಳಿಯಿಂದ ಸಿಗ್ನಲ್ ಸಿಕ್ಕಿತು. ಸರ್ಕಾರದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಏಜೆನ್ಸಿಯೊಂದರ ರಾಡಾರ್ ನಲ್ಲಿ ಸಿಗ್ನಲ್ ಸಿಕ್ಕಿದೆ. ಸಿಗ್ನಲ್ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಇತರೆ ಮಣ್ಣು ತೆಗೆಯುವ ಯಂತ್ರಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಆದರೆ ಮೂರನೇ ರಾಡಾರ್ ತಪಾಸಣೆಗೆ ಸಿಗ್ನಲ್ ಸಿಗಲಿಲ್ಲ. ಸದ್ಯಕ್ಕೆ ಅಧಿಕಾರಿಗಳು ತನಿಖೆಯನ್ನು ಸ್ಥಗಿತಗೊಳಿಸಿದ್ದಾರೆ.

ಅದೇ ವೇಳೆ ಮುಂಡಕೈನಲ್ಲಿ ನಾಲ್ವರು ಜೀವಂತವಾಗಿ ಪತ್ತೆಯಾಗಿದ್ದು, ಸೇನೆ ಅವರನ್ನು ರಕ್ಷಿಸಿದೆ.

  • ಅಧಿಕೃತವಾಗಿ ದೃಢಪಡಿಸಿದ ಸಾವುಗಳು – 205
  • ಪುರುಷರು – 84
  • ಮಹಿಳೆಯರು -93
  • ಮಕ್ಕಳು -28
  • ಸಂಬಂಧಿಕರಿಂದ ಗುರುತಿಸಲ್ಪಟ್ಟ ದೇಹಗಳ ಸಂಖ್ಯೆ – 140
  • ಪತ್ತೆಯಾದ ದೇಹದ ಭಾಗಗಳ ಸಂಖ್ಯೆ – 133
  • ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹಗಳ ಸಂಖ್ಯೆ -195
  • ಮರಣೋತ್ತರ ಪರೀಕ್ಷೆಯ ದೇಹದ ಭಾಗಗಳು -133

ಗುರುತಿಸಲಾಗದ ಮೃತದೇಹಕ್ಕೆ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ

ಮೇಪ್ಪಾಡಿ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಗುರುತು ಸಿಗದ ಶವಗಳನ್ನು ಜಿಲ್ಲೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ಹೂಳಲಾಗುತ್ತದೆ. ಕಲ್ಪಟ್ಟಾ ನಗರಸಭೆ, ವೈತ್ತಿರಿ, ಮೂಟ್ಟಿಲ್, ಕನ್ಯಾಂಪಟ, ವಿಷ್ಟಮಠ, ತೊಂಡರನಾಡು, ಎಡವಕ ಮತ್ತು ಮುಲ್ಲಂಕೊಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೆಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ 74 ಅಪರಿಚಿತ ಮೃತದೇಹಗಳನ್ನು ಇಡಲಾಗಿದೆ. ಮೃತ ದೇಹಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಹಸ್ತಾಂತರಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ನೋಂದಣಿ ಇಲಾಖೆಯು ಐಜಿ ಶ್ರೀಧನ್ಯ ಸುರೇಶ್ ಅವರನ್ನು ಮೃತ ದೇಹಗಳ ಸಂರಕ್ಷಣೆ, ವರ್ಗಾವಣೆ ಮತ್ತು ದಹನಕ್ಕೆ ನೋಡಲ್ ಅಧಿಕಾರಿಯಾಗಿ ನೇಮಿಸಿದೆ.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ರಾಡಾರ್ ಸಿಗ್ನಲ್ ಸ್ವೀಕರಿಸಿದರೆ ರಾತ್ರಿಯಲ್ಲಿಯೂ ಕಾರ್ಯಾಚರಣೆ ಮುಂದುವರಿಯುತ್ತದೆ. ತಪಾಸಣೆಯನ್ನು ಕೊನೆಗೊಳಿಸಲು ನಿರ್ಧರಿಸಲಾಯಿತು. ಆದರೆ ಮುಖ್ಯಮಂತ್ರಿ ಕಚೇರಿಯ ಸೂಚನೆಯಂತೆ ತಪಾಸಣೆ ಮುಂದುವರಿಸಲು ನಿರ್ಧರಿಸಲಾಯಿತು. ರಾತ್ರಿಯಾಗಿರುವುದರಿಂದ ಫ್ಲಡ್ ಲೈಟ್ ಸಿದ್ಧತೆ ಮಾಡಿಕೊಳ್ಳಲಾಗುವುದು.

ಇದನ್ನೂ ಓದಿ: Wayanad landslides: ಬೈಲಿ ಸೇತುವೆ ನಿರ್ಮಿಸಿದ ಸೇನಾಪಡೆಯ ಮಹಿಳಾ ಶಕ್ತಿ, ಈಕೆ ಮೇಜರ್ ಸೀತಾ ಶೆಲ್ಕೆ

ಮುಂಡಕೈ ಮತ್ತು ಚೂರಲ್‌ಮಲ ಭಾಗದಲ್ಲಿ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 334ಕ್ಕೆ ತಲುಪಿದೆ. ಶುಕ್ರವಾರ ಮತ್ತೆ 18 ಮೃತದೇಹಗಳು ಪತ್ತೆಯಾಗಿವೆ. ಇನ್ನೂ 280 ಮಂದಿ ಪತ್ತೆಯಾಗಬೇಕಿದೆ ಎಂಬುದು ಅನಧಿಕೃತ ಅಂದಾಜಾಗಿದೆ. ಚಾಲಿಯಾರ್‌ನಿಂದ ಇದುವರೆಗೆ 184 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಶುಕ್ರವಾರ 12 ಮೃತದೇಹಗಳು ಪತ್ತೆಯಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್