AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wayanad landslides: ಬೈಲಿ ಸೇತುವೆ ನಿರ್ಮಿಸಿದ ಸೇನಾಪಡೆಯ ಮಹಿಳಾ ಶಕ್ತಿ, ಈಕೆ ಮೇಜರ್ ಸೀತಾ ಶೆಲ್ಕೆ

2012ರಲ್ಲಿ ಸೇನೆಗೆ ಸೇರಿದ್ದ ಮೇಜರ್ ಸೀತಾ ಶೆಲ್ಕೆ ಮಹಾರಾಷ್ಟ್ರದ ಅಹ್ಮದ್‌ನಗರದವರು. ಚೆನ್ನೈ OTA ಯಿಂದ ತರಬೇತಿ ಪೂರ್ಣಗೊಳಿಸಿದ್ದ ಇವರು ಅಹ್ಮದ್ ನಗರದ ಪ್ರವಾರ ಗ್ರಾಮೀಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಾಕೆ. ಸೇನಾ ಸೇವೆಯನ್ನು ತನ್ನ ಜೀವನದ ಗುರಿಯಾಗಿ ಮಾಡಿಕೊಂಡಿದ್ದ ಸೀತಾಗೆ ಮೊದಲೆರಡು ಪ್ರಯತ್ನಗಳಲ್ಲಿ ಸೇನೆಯಲ್ಲಿ ಸ್ಥಾನ ಸಿಗಲಿಲ್ಲ.

Wayanad landslides: ಬೈಲಿ ಸೇತುವೆ ನಿರ್ಮಿಸಿದ ಸೇನಾಪಡೆಯ ಮಹಿಳಾ ಶಕ್ತಿ, ಈಕೆ ಮೇಜರ್ ಸೀತಾ ಶೆಲ್ಕೆ
ಮೇಜರ್ ಸೀತಾ ಶೆಲ್ಕೆ
ರಶ್ಮಿ ಕಲ್ಲಕಟ್ಟ
|

Updated on:Aug 02, 2024 | 7:26 PM

Share

ಕಲ್ಪಟ್ಟಾ ಆಗಸ್ಟ್ 02: ಭೂಕುಸಿತದಿಂದಾಗಿ (Wayanad landslide) ಸಂಪರ್ಕ ಕಡಿದುಕೊಂಡಿತ್ತು ವಯನಾಡಿನ ಚೂರಲ್​​ಮಲ- ಮುಂಡಕೈ ಪ್ರದೇಶ. ರಕ್ಷಣಾ ಕಾರ್ಯಾಚರಣೆಗಳಿಗಾಗಿ ಭಾರತೀಯ ಸೇನೆ ಇಲ್ಲಿ ಒಂದು ದಿನದೊಳಗೆ ಬೈಲಿ ಸೇತುವೆಯನ್ನು (Bailey Bridge) ನಿರ್ಮಿಸಿ ಸಂಪರ್ಕ ವ್ಯವಸ್ಥೆಯನ್ನು ಸುಗಮಗೊಳಿಸಿತು. ಭಾರತೀಯ ಸೇನೆಯ ಯೋಧರು ಸಮರೋಪಾದಿಯಲ್ಲಿ ಈ ಸೇತುವೆಯನ್ನು ನಿರ್ಮಿಸಿ ಹೊರಗೆ ಬಂದಾಗ ಊರಿನ ಜನರು ಚಪ್ಪಾಳೆ ತಟ್ಟಿ ಅವರನ್ನು ಸ್ವಾಗತಿಸಿದ್ದರು. ಸೇತುವೆ ನಿರ್ಮಾಣ ಕಾರ್ಯದ ಫೋಟೊ, ವಿಡಿಯೊಗಳು ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಬೈಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ನೇತೃತ್ವ ವಹಿಸಿದ ಸೇನಾಧಿಕಾರಿಗಳಲ್ಲಿ ಒಬ್ಬರು ಮಹಿಳೆ ಇದ್ದರು. ಆಕೆಯ ಹೆಸರು ಮೇಜರ್ ಸೀತಾ ಅಶೋಕ್ ಶೆಲ್ಕೆ(Major Sita Shelke).

ವಯನಾಡಿನ ಜನರು ಯಾವತ್ತಿಗೂ ಈ ಹೆಸರನ್ನು ಮರೆಯುವುದಿಲ್ಲ. ಚೂರಲ್​​ಮಲ ಮತ್ತು ಮುಂಡಕೈಗೆ ಸಂಪರ್ಕ ಕಲ್ಪಿಸುವ ಸೇತುವೆಯ ನಿರ್ಮಾಣವು ರಕ್ಷಣಾ ಕಾರ್ಯಾಚರಣೆಯಲ್ಲಿ ತುಂಬಾ ನಿರ್ಣಾಯಕವಾಗಿತ್ತು. ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರಗೆ ತರಲು, ಬದುಕಿರುವವರನ್ನು ಕಾಪಾಡಲು ಆ ಸೇತುವೆಯ ಅಗತ್ಯವಿತ್ತು. ಅಂಥಾ ಸೇತುವೆಯ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಅಧಿಕಾರಿಗಳಲ್ಲಿ ಮೇಜರ್ ಸೀತಾ ಶೆಲ್ಕೆ ಕೂಡಾ ಒಬ್ಬರು.

ಗುಡ್ಡ ಕುಸಿದು ಮುಂಡಕೈಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋದ ನಂತರ ಅಲ್ಲಿಗೆ ವಾಹನಗಳು ಮತ್ತು ಸಲಕರಣೆಗಳನ್ನು ತರುವುದು ಅಸಾಧ್ಯವಾಯಿತು. ಹಾಗಾಗಿ ಸೇನೆಯು ಎರಡು ಬದಿಗಳನ್ನು ಸಂಪರ್ಕಿಸಲು ಬೈಲಿ ಸೇತುವೆಯನ್ನು ನಿರ್ಮಿಸಲು ಮುಂದಾಯಿತು. ರಕ್ಷಣಾ ಭದ್ರತಾ ಪಡೆಗಳ (ಡಿಎಸ್‌ಸಿ) ಕ್ಯಾಪ್ಟನ್ ಪುರಾನ್ ಸಿಂಗ್ ನಥಾವತ್ ಕಾರ್ಯಾಚರಣೆಯನ್ನು ಸಂಯೋಜಿಸಿದರು.

ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನ (MEG) ಬೆಂಗಳೂರಿನ ಏಕೈಕ ಮಹಿಳಾ ಇಂಜಿನಿಯರ್ ಮೇಜರ್ ಸೀತಾ ಶೆಲ್ಕೆ ಸೇರಿದಂತೆ ಅಧಿಕಾರಿಗಳು ಸೇತುವೆ ನಿರ್ಮಾಣ ತಂಡವನ್ನು ಮುನ್ನಡೆಸಿದರು. ಮೇಜರ್ ಶೆಲ್ಕೆ ಅವರ ನಾಯಕತ್ವ ಮತ್ತು ಸಂಕಲ್ಪ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಶಕ್ತಿಯನ್ನು ನೀಡಿತು. ಹೀಗಾಗಿಯೇ ಅವರು ಈ ವಿಪತ್ತು ಭೂಮಿಯಲ್ಲಿ ಮಾನವನ ಉಳಿವಿನ ಮತ್ತು ಪ್ರತಿಕೂಲತೆಯನ್ನು ಸಂಕಲ್ಪದಿಂದ ಜಯಿಸುವ ಮಹಿಳಾ ಶಕ್ತಿಯ ಸಂಕೇತವಾಗಿದ್ದಾರೆ.

2012ರಲ್ಲಿ ಸೇನೆಗೆ ಸೇರಿದ್ದ ಮೇಜರ್ ಸೀತಾ ಶೆಲ್ಕೆ ಮಹಾರಾಷ್ಟ್ರದ ಅಹ್ಮದ್‌ನಗರದವರು. ಚೆನ್ನೈ OTA ಯಿಂದ ತರಬೇತಿ ಪೂರ್ಣಗೊಳಿಸಿದ್ದ ಇವರು ಅಹ್ಮದ್ ನಗರದ ಪ್ರವಾರ ಗ್ರಾಮೀಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಾಕೆ. ಸೇನಾ ಸೇವೆಯನ್ನು ತನ್ನ ಜೀವನದ ಗುರಿಯಾಗಿ ಮಾಡಿಕೊಂಡಿದ್ದ ಸೀತಾಗೆ ಮೊದಲೆರಡು ಪ್ರಯತ್ನಗಳಲ್ಲಿ ಸೇನೆಯಲ್ಲಿ ಸ್ಥಾನ ಸಿಗಲಿಲ್ಲ. ಮೂರನೇ ಪ್ರಯತ್ನದಲ್ಲಿ ಗುರಿ ತಲುಪಿದ ಸೀತಾ ಶೆಲ್ಕೆ ಇಂದು ಭಾರತೀಯ ಸೇನೆಯಲ್ಲಿ ಮಹಿಳಾ ಶಕ್ತಿಯ ಪ್ರತೀಕ.

ಮಾತೃಭೂಮಿ ನ್ಯೂಸ್ ಜತೆ ಮಾತನಾಡಿದ ಮೇಜರ್ ಸೀತಾ ಶೆಲ್ಕೆ, ಇತಿಮಿತಿ ಹಾಗೂ ಸಂಕಷ್ಟಗಳನ್ನು ಮೆಟ್ಟಿನಿಂತು ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸೇತುವೆ ನಿರ್ಮಾಣಕ್ಕೆ ಇಲ್ಲಿನ ಸೀಮಿತ ಸ್ಥಳಾವಕಾಶವೇ ಪ್ರಮುಖ ಸವಾಲಾಗಿತ್ತು. ಟ್ರಾಫಿಕ್ ಜಾಮ್ ನಿಂದಾಗಿ ಸೇತುವೆಯ ಭಾಗಗಳೊಂದಿಗೆ ಬಂದ ವಾಹನಗಳು ಈ ಭಾಗಕ್ಕೆ ಬರಲು ಪರದಾಡುವಂತಾಗಿತ್ತು. ನಿರಂತರ ಮಳೆಯಿಂದಾಗಿ ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಯಿತು. ಸೇನೆಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಿದ ಜನರು, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ ಅವರು.

ಭೂಕುಸಿತದಿಂದ ನಲುಗಿ ಹೋಗಿದ್ದ ಮುಂಡಕೈಯಲ್ಲಿ ಅವಶೇಷಗಳನ್ನು ಮರಳಿ ಪಡೆಯುವಲ್ಲಿ ರಕ್ಷಣಾ ಕಾರ್ಯಕರ್ತರು ಬಹಳಷ್ಟು ಸವಾಲುಗಳನ್ನ ಎದುರಿಸಿದರು. ಎರಡು ದಿನಗಳ ಪ್ರವಾಹದಲ್ಲಿ ಅನೇಕ ಮನೆಗಳ ಮೇಲ್ಛಾವಣಿ ಸೇರಿದಂತೆ ಮಣ್ಣು ಮತ್ತು ಕಲ್ಲುಗಳು ಇಲ್ಲಿ ಸಂಗ್ರಹವಾಗಿದೆ. ಮನೆಯೊಳಗೆ ಸಿಲುಕಿದವರನ್ನು ಹೊರಗೆ ತರಲು ಕಾಂಕ್ರೀಟ್ ಕೆಡವಬೇಕಿತ್ತು. ಬೆಳಗ್ಗಿನಿಂದ ತಮ್ಮ ಪ್ರೀತಿಪಾತ್ರರಿಗಾಗಿ ಹಲವಾರು ಮಂದಿ ಕಾದು ಕುಳಿತಿದ್ದರು. ಕಾಂಕ್ರೀಟ್ ಕಟ್ಟರ್ ಸೇರಿದಂತೆ ಉಪಕರಣಗಳನ್ನು ತಾತ್ಕಾಲಿಕ ಸೇತುವೆಯ ಮೂಲಕ ತಲುಪಿಸಲು ಸಾಧ್ಯವಾಗಲಿಲ್ಲ. ಆದರೆ ಸೇತುವೆಯ ನಿರ್ಮಾಣ ಪೂರ್ಣಗೊಂಡ ನಂತರ, ರಕ್ಷಣಾ ಕಾರ್ಯಕರ್ತರು ಮತ್ತು ಯಂತ್ರಗಳು ಈ ಪ್ರದೇಶವನ್ನು ತಲುಪಲು ಸಾಧ್ಯವಾಯಿತು. ಬುಧವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಸೇತುವೆ ಕಾಮಗಾರಿ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಮಹಾಮಳೆ, ಉಕ್ಕಿ ಹರಿಯುತ್ತಿರುವ ನದಿ ಸವಾಲು ಸೃಷ್ಟಿಸಿದಾಗಲೂ ಸೈನಿಕರ ದೃಢ ಸಂಕಲ್ಪ ಪ್ರಯತ್ನ ಗುರಿ ಮುಟ್ಟುವಂತೆ ಮಾಡಿತು.

ಇದನ್ನೂ ಓದಿ: ವಯನಾಡ್ ಸಂತ್ರಸ್ತರ ಕಹಾನಿ: ನಮಗೇನೂ ಮಾಡಬೇಡಪ್ಪ ಎಂದೆ; ಆ ರಾತ್ರಿಯಿಡೀ ಬೆಟ್ಟದಲ್ಲಿ ನಮಗೆ ಕಾವಲಾಗಿ ನಿಂತಿತ್ತು ಕಾಡಾನೆ

ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (MEG) ಗೆ ಮದ್ರಾಸ್ ಸಾಪ್ಪರ್ಸ್ ಎಂಬ ಅಡ್ಡಹೆಸರು ಕೂಡ ಇದೆ. ವಿಶೇಷ ತರಬೇತಿಯನ್ನು ಪಡೆದ ಇವರು ಸೈನ್ಯಕ್ಕೆ ದಾರಿಯನ್ನು ಸಿದ್ಧಪಡಿಸಲು, ಸೇತುವೆಗಳನ್ನು ನಿರ್ಮಿಸಲು, ನೆಲಬಾಂಬ್​​​ಗಳನ್ನು ಪತ್ತೆಹಚ್ಚಲು ಮತ್ತು ನಿಷ್ಕ್ರಿಯಗೊಳಿಸಲು ಯುದ್ಧದ ಮುಂಭಾಗಕ್ಕೆ ಬಂದವರಲ್ಲಿ ಮೊದಲಿಗರಾಗಿದ್ದಾರೆ. ಇವರು ಪ್ರಾಕೃತಿಕ ವಿಕೋಪಗಳು ಎದುರಾದಾಗಲೂ ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತಾರೆ. ಈ ಹಿಂದೆಯೂ ಕೇರಳದಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾಪಡೆ ಭಾಗಿಯಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Fri, 2 August 24

ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ
ಸಕಲ ಸರ್ಕಾರಿ ಗೌರವದೊಂದಿಗೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ
ಸಕಲ ಸರ್ಕಾರಿ ಗೌರವದೊಂದಿಗೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ