‘ಅಸಾದುದ್ದೀನ್ ಓವೈಸಿಗೆಲ್ಲ ಹೆದರುವುದಿಲ್ಲ..ತೆಲಂಗಾಣ ವಿಮೋಚನಾ ದಿನ ಆಚರಣೆ ಖಂಡಿತ ಮಾಡುತ್ತೇವೆ’-ಅಮಿತ್ ಶಾ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಈ ಹೈದರಾಬಾದ್ ನಿಜಾಮರ ಆಡಳಿತದಿಂದ ಮುಕ್ತವಾಗಿರಲಿಲ್ಲ. 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಕರ್ನಾಟಕ ವಿಮೋಚನೆ ಗೊಂಡಿದೆ. ಈ ಬಾರಿ ಅದರ 73ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.
ದೆಹಲಿ: 2024ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಗೆಲುವು ಸಾಧಿಸಿ, ಸರ್ಕಾರ ರಚನೆ ಮಾಡುತ್ತದೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಖಂಡಿತ ಬಿಜೆಪಿ ತೆಲಂಗಾಣದಲ್ಲಿ ಪ್ರಬಲ ರಾಜಕೀಯ ಸ್ಪರ್ಧಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ. ಹೈದರಾಬದ್ ವಿಮೋಚನಾ ದಿನ ( Hyderabad Liberation Day)ದ ನಿಮಿತ್ತ ನಿರ್ಮಲ್ ಟೌನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಸೆಪ್ಟೆಂಬರ್ 17ನ್ನು ತೆಲಂಗಾಣ ದಿನವನ್ನಾಗಿ ಘೋಷಣೆ ಮಾಡುವ ಪ್ರತಿಜ್ಞೆ ಮಾಡಿದ್ದರು. ಆದರೆ ಅದನ್ನೀಗ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಅಸಾದುದ್ದೀನ್ ಓವೈಸಿ ಪಕ್ಷ ಎಐಎಂಐಎಂವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್ ಶಾ, ಎಐಎಂಐಎಂ ಪಕ್ಷ ಇಲ್ಲಿನ ಆಡಳಿತ ಪಕ್ಷ ಟಿಆರ್ಎಸ್ ಜತೆಯಾಗಿ ಕೆಲಸ ಮಾಡುತ್ತಿದೆ. ನಮ್ಮ ಬಿಜೆಪಿಗೆ ಎಐಎಂಐಎಂ ಬಗ್ಗೆ ಯಾವುದೇ ಹೆದರಿಕೆಯೂ ಇಲ್ಲ. ಟಿಆರ್ಎಸ್ ಮತ್ತು ಎಐಎಂಐಎಂ ಜತೆಯಾಗಿದ್ದರೆ ನಮಗೇನೂ ಬಾಧಿಸುವುದಿಲ್ಲ. ಎಐಎಂಐಎಂ ಪಕ್ಷಕ್ಕೆ ಕೌಂಟರ್ ಕೊಡಲು ಕಾಂಗ್ರೆಸ್ಗೆ ಸಾಧ್ಯವಿಲ್ಲ. ಆ ಕೆಲಸವನ್ನು ನಾವು ಮಾತ್ರ ಮಾಡಲು ಸಾಧ್ಯ ಎಂದು ಹೇಳಿದರು. ವಿಮೋಚನಾ ದಿನವನ್ನು ಆಚರಿಸದ ಸಿಎಂ ಚಂದ್ರಶೇಖರ್ ನಡೆಗೆ ಬೇಸರ ವ್ಯಕ್ತಪಡಿಸಿದ ಅವರು, ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಯಾಕೆ ಹೆದರುತ್ತಿದ್ದಾರೆ ಎಂಬುದು ಪ್ರಶ್ನೆ. ಆ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ, ಅವರಿಗೊಂದು ಮಾನ್ಯತೆ ಕೊಡುವ ಕೆಲಸವನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ. ಆದರೆ ನಮಗೆ ಬಿಜೆಪಿಯವರಿಗೆ ಭಯವಿಲ್ಲ. ನಾವು ಖಂಡಿತ ಈ ಲಿಬರೇಶನ್ ದಿನವನ್ನು ಆಚರಿಸುತ್ತೇವೆ ಎಂದು ಗೃಹ ಸಚಿವ ಖಡಾಖಂಡಿತವಾಗಿ ತಿಳಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಈ ಹೈದರಾಬಾದ್ ನಿಜಾಮರ ಆಡಳಿತದಿಂದ ಮುಕ್ತವಾಗಿರಲಿಲ್ಲ. 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಕರ್ನಾಟಕ ವಿಮೋಚನೆ ಗೊಂಡಿದೆ. ಈ ಬಾರಿ ಅದರ 73ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು ಈ ನಿಮಿತ್ತ ಅಮಿತ್ ಶಾ ಹೈದರಾಬಾದ್ಗೆ ಭೇಟಿ ನೀಡುತ್ತಿದ್ದರು. ಹಾಗೇ, ಹೈದರಾಬಾದ್ ವಿಮೋಚನಾ ದಿನವನ್ನು ತೆಲಂಗಾಣ ವಿಮೋಚನಾ ದಿನ ಎಂದು ಬದಲಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಲೇ ಬಂದಿದ್ದು, ನಿನ್ನೆಯ ಭಾಷಣದಲ್ಲೂ ಅಮಿತ್ ಶಾ ಅದನ್ನೇ ಪುನರುಚ್ಚರಿಸಿದ್ದಾರೆ. ಬರುವ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ, ಸೆ.17ನ್ನು ತೆಲಂಗಾಣ ವಿಮೋಚನಾ ದಿನವೆಂದು ಘೋಷಿಸುತ್ತೇವೆ ಮತ್ತು ಧೈರ್ಯದಿಂದ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಒಡೆದ ಕುಟುಂಬ: 20 ದಿನ ಹಿಂದೆ ಮಗಳು ಕೈ ಕೊಯ್ದುಕೊಂಡಾಗ ‘ಸಾಯೋದಾದ್ರೆ ಎಲ್ಲಾ ಒಟ್ಟಿಗೆ ಸಾಯೋಣ’ ಎಂದಿದ್ದಳಂತೆ ಮಹಾತಾಯಿ ಭಾರತಿ!
IPL 2021: ಆರ್ಸಿಬಿ ಪ್ಲೇ ಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?: ಇಲ್ಲಿದೆ ನೋಡಿ ಲೆಕ್ಕಾಚಾರ
(We are not scared of AIMIM and Asaduddin Owaisi Says Home Minister Amit Shah)
Published On - 11:35 am, Sat, 18 September 21