‘ತಿಹಾರ್ ಕ್ಲಬ್ಗೆ ಸ್ವಾಗತ ಕೇಜ್ರಿವಾಲ್ ಜೀ’, ಇಂದಿನಿಂದ ನಿಮ್ಮ ಎಲ್ಲ ನಾಟಕ ಬಂದ್ ಎಂದು ಪತ್ರ ಬರೆದ ಸುಕೇಶ್
ಇಡಿ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 200 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ಪತ್ರ ಬರೆದಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೂ ಸುಕೇಶ್ ಚಂದ್ರಶೇಖರ್ಗೂ ಏನು ಸಂಬಂಧ ಎಂಬ ಅನುಮಾನಗಳು ಹುಟುಕೊಂಡಿದೆ. ಜತೆಗೆ ಈ ಪತ್ರದಲ್ಲಿ ಕೇಜ್ರಿವಾಲ್ ಬಗ್ಗೆ ಏನು ಬರೆದಿದ್ದಾರೆ ಎಂಬುದು ಇಲ್ಲಿದೆ.
ದೆಹಲಿ, ಮಾ.23: ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ 6 ದಿನಗಳ ಇಡಿ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ 200 ಕೋಟಿ ರೂಪಾಯಿ ಹಗರಣದ ಮುಖ್ಯ ರುವಾರಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಅವರು ಪತ್ರ ಬರೆದಿದ್ದಾರೆ. ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಗೆಳೆಯ ಎಂದು ಗುರುತಿಸಿಕೊಂಡಿರುವ ಸುಕೇಶ್ ಇದೀಗ ಇಡಿ ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಅವರಿಗೆ ತಿಹಾರ್ ಕ್ಲಬ್ಗೆ ಸ್ವಾಗತ ಎಂದು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಕೇಜ್ರಿವಾಲ್ಗೆ ಐದು ಪುಟಗಳ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ ಅಂಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ (ಮಾ.21) ಯಂದು ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ನಂತರ ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ನಮ್ಮ ಕಸ್ಟಡಿಗೆ ನೀಡಬೇಕು ಎಂದು ಇಡಿ ಹೇಳಿತ್ತು. ಇದಕ್ಕೆ ಸಮ್ಮತಿಸಿದ ಕೋರ್ಟ್ ಇಡಿಗೆ ಅವಕಾಶ ನೀಡಿದೆ. ಇದರ ನಡುವೆ ಸುಕೇಶ್ ಚಂದ್ರಶೇಖರ್ ಅವರ ಪತ್ರ ಭಾರೀ ಸದ್ದು ಮಾಡುತ್ತಿದೆ.
ಸುಕೇಶ್ ಚಂದ್ರಶೇಖರ್ ಬರೆದಿರುವ ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಕಳ್ಳ ಎಂದು ಹೇಳಿದ್ದಾರೆ. ಯಾವಾಗಲೂ ಸತ್ಯ ಗೆಲ್ಲುತ್ತದೆ. ಇದು ಹೊಸ ಭಾರತದ ಶಕ್ತಿ, ಕಾನೂನಿನ ಮುಂದೆ ಯಾರು ಮೇಲಲ್ಲ, ಎಂಬುದಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ. ಅವರ ಪತ್ರ ಹೀಗಿತ್ತು, ” ನನ್ನ ಪ್ರೀತಿಯ ಅರವಿಂದ್ ಕೇಜ್ರಿವಾಲ್ ಜೀ, ತಿಹಾರ್ ಕ್ಲಬ್ಗೆ ಬಾಸ್ ಆಗಿರುವ ನಿಮ್ಮನ್ನು ಸ್ವಾಗತಿಸಲು ಒಂದು ಉತ್ತಮ ಅವಕಾಶವನ್ನು ನೀಡಿದ್ದೀರಾ, ಇಂದಿನಿಂದ ನಿಮ್ಮ ಎಲ್ಲ ನಾಟಕಗಳು ಅಂತ್ಯವಾಗಲಿದೆ. ಮುಂದಿನ ವಾರ ಮಾ.25ಕ್ಕೆ ನನ್ನ ಜನ್ಮದಿನ, ಆ ಸಂಭ್ರಮವನ್ನು ನೀವು ಹೆಚ್ಚಿಸಿದ್ದೀರಾ, ಏಕೆಂದರೆ ನನ್ನ ಜನ್ಮದಿನದಂದು ತಿಹಾರ್ಗೆ ಬಂದಿದ್ದೀರಾ, ಅದು ನನಗೆ ಖುಷಿ, ನನ್ನ ಸಂಭ್ರಮ ಡಬಲ್ ಆಗಿದೆ.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾರ್ಚ್ 28ರವರೆಗೆ ಇಡಿ ಕಸ್ಟಡಿಗೆ
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗುಡುಗಿದ ಸುಕೇಶ್ ಚಂದ್ರಶೇಖರ್, ತಿಹಾರ್ ಕ್ಲಬ್ ನಡೆಸಲು ಮೂವರು ಸಹೋದರರು ಬಂದಿದ್ದಾರೆ. ಮೊದಲನೇಯವರು ಬಿಗ್ಬಾಸ್ ಅರವಿಂದ್ ಕೇಜ್ರಿವಾಲ್, ಎರಡನೇಯದ್ದು ಸಿಇಒ ಮನೀಶ್ ಸಿಸೋಡಿಯಾ ಮೂರನೇಯದ್ದು, ಸಿಇಒ ಸತ್ಯೇಂದರ್ ಜೈನ್ ಎಂದು ಲೇವಡಿ ಮಾಡಿದ್ದಾರೆ. ಕೇಜ್ರಿವಾಲ್ ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲ ಅಕ್ರಮ ಹೊರಬರಲಿದೆ. ಈಗಾಗಲೇ ದೆಹಲಿ ಬಡವರಿಂದ 10 ರೀತಿಯ ಹಗರಣ ಮಾಡಿದ್ದೀರಾ, ಇನ್ನು 4 ನಿಮ್ಮ ಹಗರಣಕ್ಕೆ ನಾನೇ ಸಾಕ್ಷಿ, ಆದರೆ ನಾನು ಅದನ್ನು ಇಲ್ಲಿ ತಿಳಿಸುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Sat, 23 March 24