West Bengal Assembly Elections 2021: 7ನೇ ಹಂತದ ಚುನಾವಣೆಯಲ್ಲಿ ಬಿರುಸಿನ ಮತದಾನ, 11.30ರವರೆಗೆ ಶೇ 37.72 ಮತದಾನ ದಾಖಲು

|

Updated on: Apr 26, 2021 | 12:13 PM

Voter turnout: ಪಶ್ಚಿಮ ಬರ್ಧಮಾನ್, ದಕ್ಷಿಣ ದಿನಜ್​ಪುರ್, ಮಾಲ್ಡಾ ಮತ್ತು ಕೊಲ್ಕತ್ತಾ ಸೇರಿದಂತೆ 34 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು 284 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 86 ಲಕ್ಷಕ್ಕಿಂತಲೂ ಹೆಚ್ಚು ಮತದಾರರು ಈ ಕ್ಷೇತ್ರಗಳಲ್ಲಿದ್ದಾರೆ.

West Bengal Assembly Elections 2021: 7ನೇ ಹಂತದ ಚುನಾವಣೆಯಲ್ಲಿ ಬಿರುಸಿನ ಮತದಾನ, 11.30ರವರೆಗೆ ಶೇ 37.72 ಮತದಾನ ದಾಖಲು
ಪಶ್ಚಿಮ ಬಂಗಾಳದಲ್ಲಿ ಮತದಾನ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಏಳನೇಹಂತದ ಚುನಾವಣೆಗೆ ಮತದಾನ ಪ್ರಕ್ರಿಯೆ ಇಂದು ಬೆಳಗ್ಗೆ ಆರಂಭವಾಗಿದ್ದು 9.30ರ ಹೊತ್ತಿಗೆ ಶೇ17.47 ಮತದಾನವಾಗಿದೆ.  ಬೆಳಗ್ಗೆ 11.30ರ ಹೊತ್ತಿಗೆ ಶೇ 37.72 ಮತದಾನ ದಾಖಲು ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕೊಲ್ಕತ್ತಾದಲ್ಲಿ ಮತದಾನ ಮಾಡಿದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಈ ಬಾರಿ ಟಿಎಂಸಿ ಬಹುಮತದೊಂದಿಗೆ ಗೆದ್ದು ಮಮತಾ ಬ್ಯಾನರ್ಜಿ ಅಧಿಕಾರಕ್ಕೇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬರ್ಧಮಾನ್, ದಕ್ಷಿಣ ದಿನಜ್​ಪುರ್, ಮಾಲ್ಡಾ ಮತ್ತು ಕೊಲ್ಕತ್ತಾ ಸೇರಿದಂತೆ 34 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು 284 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 86 ಲಕ್ಷಕ್ಕಿಂತಲೂ ಹೆಚ್ಚು ಮತದಾರರು ಈ ಕ್ಷೇತ್ರಗಳಲ್ಲಿದ್ದಾರೆ.


ಭಬಾನಿಪುರ್ ವಿಧಾನಸಭಾ ಕ್ಷೇತ್ರದಲ್ಲಿ ಇಂಧನ ಸಚಿವ ಶೋಬನ್ ದೇಬ್ ಚಟ್ಟೋಪಾಧ್ಯಾಯ್ ಅವರು ಸ್ಪರ್ಧಿಸುತ್ತಿದ್ದು, ಮೂರನೇ ಬಾರಿಯೂ ಇಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಟಿಎಂಸಿಗೆ ಇದೆ. ಶೋಬನ್ ದೇಬ್ ಅವರ ವಿರುದ್ಧ ಬಿಜೆಪಿ ಬಂಗಾಳಿ ನಟ ರುದ್ರನೀಲ್ ಘೋಷ್ ಅವರನ್ನು ಕಣಕ್ಕಿಳಿಸಿದೆ.

ಏಳು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಏಳು ಬಾರಿ ಗೆದ್ದಿರುವ ಚಟ್ಟೋಪಾಧ್ಯಾಯ್ ಅವರ ಸ್ವಕ್ಷೇತ್ರವಾಗಿದೆ ಭಬಾನಿಪುರ್. ಸಿನಿಮಾ ನಟ ಆಗಿರುವ ಚಟ್ಟೋಪಾಧ್ಯಾಯ್ ವಿಂಚಿ ದಾ, ಚಾಪ್ಲಿನ್ ಸಿನಿಮಾದಲ್ಲಿ ಅದ್ಭುತ ನಟನೆ ಮಾಡಿದ್ದರು. ಭಬಾನಿಪುರ್ ನಲ್ಲಿರುವ ಬಂಗಾಳಿಗಳಲ್ಲದವರು ಚಟ್ಟೋಪಾಧ್ಯಾಯ್ ಅವರ ಸಿನಿಮಾಗಳನ್ನು ವೀಕ್ಷಿಸದೇ ಇರಬಹುದು, ಆದರೆ ಆ ಪ್ರದೇಶಗಳಲ್ಲಿ ಅವರು ಮಾಡಿದ ಸಾಮಾಜಿಕ ಕಾರ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ.

ಸೋಮವಾರ 12,068 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಈ ಹಂತಕ್ಕೆ ಕನಿಷ್ಠ 796 ಕೇಂದ್ರೀಯ ಪಡೆಗಳನ್ನು ನಿಯೋಜಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಏಳನೇ ಹಂತದ ಮತದಾನವು ಬಂಗಾಳದಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿರುವ ಸಮಯದಲ್ಲಿ ನಡೆಯುತ್ತಿದೆ. ಶನಿವಾರ ರಾಜ್ಯದಲ್ಲಿ 14,281 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು 59 ಸಾವು ದಾಖಲಾಗಿದೆ.


ಬಕ್ತಾರ್ ನಗರ್ ಹೈಸ್ಕೂಲ್​ನಲ್ಲಿರುವ ಮತಗಟ್ಟೆಯಲ್ಲಿ ಟಿಎಂಪಿ ಮತಗಟ್ಟೆ ಏಜೆಂಟ್ ಮಮತಾ ಬ್ಯಾನರ್ಜಿಯವರ ಫೋಟೊ ಇರುವ ಟೋಪಿ ಧರಿಸಿ ಕುಳಿತಿದ್ದಕ್ಕೆ ಅಸನ್​ಸೋಲ್ ದಕ್ಷಿಣ ಚುನಾವಣಾ ಕ್ಷೇತ್ರದ ಬಜೆಪಿ ಅಭ್ಯರ್ಥಿ ಅಗ್ನಿಮಿತ್ರಾ ಪೌಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣಾ ಅಧಿಕಾರಿಗೆ ಆರಾಮವಿರಲಿಲ್ಲವಂತೆ, ಹಾಗಾಗಿ ಅವರು ನೋಡಿಲ್ಲ ಅಂತಿದ್ದಾರೆ. ಇದೆಲ್ಲ ಮಮತಾ ಬ್ಯಾನರ್ಜಿ ಅವರ ತಂತ್ರ. ಅವರ ಸಮಯ ಮುಗಿದಿದೆ. ಈ ಬಗ್ಗೆ ನಾನು ದೂರು ದಾಖಲು ಮಾಡುತ್ತೇನೆ ಎಂದಿದ್ದಾರೆ ಅಗ್ನಿಮಿತ್ರಾ.

(West Bengal Assembly Election 2021 Phase 7 Voting Voter turnout till 9.30 am 17 percent)

ಇದನ್ನೂ ಓದಿ: West Bengal Elections 2021: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ‍್ಯಾಲಿಗಳಿಂದ ಕೊರೊನಾ ಪಾಸಿಟಿವ್ ದರ ಹೆಚ್ಚಳ!

West Bengal Elections 2021: ಉಚಿತ ಕೊವಿಡ್ ಲಸಿಕೆ ನೀಡುವುದಾಗಿ ಬಿಜೆಪಿ ಭರವಸೆ, ಇದು ಜುಮ್ಲಾ ಎಂದ ಟಿಎಂಸಿ

Published On - 10:36 am, Mon, 26 April 21