ಕೊಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಪೂರ್ವ ಮಿಡ್ನಾಪುರ್ ಜಿಲ್ಲೆಯ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವಾಗ ಹಲ್ಲೆ ನಡೆದಿದೆ. ಈ ಹಲ್ಲೆಯಲ್ಲಿ ಅವರ ಬಲಭುಜ, ಮೊಣಕಾಲಿಗೆ ಗಂಭೀರ ಗಾಯಗಳಾಗವೆ ಎಂದು ವೈದ್ಯರು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಮತಾ ಬ್ಯಾನರ್ಜಿ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದು ಎಡ ಮೊಣಕಾಲು, ಪಾದ, ಬಲಭುಜ, ಮೊಣಕೈ ಮತ್ತು ಕುತ್ತಿಗೆಗೆ ಗಾಯಗಳಾಗಿ ಎಂದು ತಪಾಸಣೆಯಲ್ಲಿ ಕಂಡು ಬಂದಿದೆ ಎಂದು ವೈದ್ಯಕೀಯ ವರದಿಯಲ್ಲಿ ಹೇಳಿದೆ. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ 5 ಹಿರಿಯ ವೈದ್ಯರ ತಂಡ ಬ್ಯಾನರ್ಜಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ. 48 ಗಂಟೆಗಳ ಕಾಲ ಬ್ಯಾನರ್ಜಿ ಅವರನ್ನು ನಿಗಾದಲ್ಲಿರಿಸಲಾಗುವುದು. ಹಲ್ಲೆಗೊಳಗಾದ ಬೆನ್ನಲ್ಲೇ ಮಮತಾ ಅವರಿಗೆ ಎದೆ ನೋವು ಮತ್ತು ಉಸಿರಾಟದ ಸಮಸ್ಯೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.
ಏನಿದು ಪ್ರಕರಣ?
ಪಶ್ಜಿಮ ಬಂಗಾಳ ವಿಧಾನಸಭೆ ಚುನಾವಣೆಗೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ನಂತರ ತನ್ನ ಮೇಲೆ ಹಲ್ಲೆ ನಡೆದಿರುವುದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.ಬುಧವಾರ ಸಂಜೆ 6.15ರ ಹೊತ್ತಿಗೆ ಈ ಘಟನೆ ನಡೆದಿತ್ತು. ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ನಂದಿಗ್ರಾಮದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಭದ್ರತಾ ಲೋಪ?
ನಾಲ್ಕೈದು ಮಂದಿ ನನ್ನನ್ನು ತಳ್ಳಿ ಹಾಕಿದರು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಹೊತ್ತಿಲ್ಲಿ ಅಲ್ಲಿ ಸ್ಥಳೀಯ ಪೊಲೀಸರಾಗಲೀ, ಪೊಲೀಸ್ ಅಧಿಕಾರಿಗಳಾಗಲೀ ಇರಲಿಲ್ಲ. ಅಪರಿಚಿತ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ ಬ್ಯಾನರ್ಜಿ. ಬ್ಯಾನರ್ಜಿ ಅವರಿಗೆ ಝೆಡ್ ಪ್ಲಸ್ ಭದ್ರತೆ ಇರುವಾಗ ಈ ಘಟನೆ ಹೇಗೆ ಸಂಭವಿಸಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಪೂರ್ವ ಮಿಡ್ನಾಪುರ ನಗರದಲ್ಲಿ ಮಮತಾ ಬ್ಯಾನರ್ಜಿ ಪ್ರಚಾರ ಕಾರ್ಯಕ್ರಮ ನಡೆಸುವಾಗ ಮಾಧ್ಯಮವರ ದಂಡೇ ಇರುತ್ತಿತ್ತು. ಹೀಗಿರುವಾಗ ಹಲ್ಲೆಯ ನಡೆದಿರುವ ಬಗ್ಗೆ ಯಾವುದೇ ದೃಶ್ಯಗಳು ಇಲ್ಲ. ಗಾಯಗೊಂಡ ಮಮತಾ ಬ್ಯಾನರ್ಜಿ ಅವರನ್ನು ಭದ್ರತಾ ಸಿಬ್ಬಂದಿ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸುವ ಫೋಟೊಗಳು ಇವೆ. ನಾನು ಕಾರಿನೊಳಗಿದ್ದು ಜನರಿಗೆ ನಮಸ್ಕಾರ ಮಾಡುತ್ತಿದ್ದೆ. ದುಷ್ಕರ್ಮಿಗಳು ಬಂದು ನಮ್ಮ ಕಾರಿನ ಬಾಗಿಲಿಗೆ ಗುದ್ದಿದರು. ನನ್ನ ಕಾಲಿಗೆ ಗಾಯವಾಗಿದೆ. ಅವರು ತಂಡಗಳಾಗಿ ಬಂದಿದ್ದರೂ, ನಾಲ್ಕೈದು ಮಂದಿ ಈ ಕೃತ್ಯವೆಸಗಿದ್ದು. ಇದು ಸಂಚು ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ಬಿರುಲಿಯ ಅಂಚಲ್ ಮಾರುಕಟ್ಟೆಯ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯ ದೇವಾಲಯದಲ್ಲಿ ಪ್ರಾರ್ಥಿಸಿ ಅಲ್ಲಿಂದ ತೆರಳುವಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ ಮಮತಾ.
#WATCH:”Not even one Police official was present. 4-5 people intentionally manhandled me in presence of public. No local police present during program not even SP. It was definitely a conspiracy. There were no police officials for 4-5 hrs in such huge public gathering” says WB CM pic.twitter.com/wJ9FbL96nX
— ANI (@ANI) March 10, 2021
ಇದು ಚುನಾವಣಾ ನಾಟಕ ಎಂದ ವಿಪಕ್ಷ
ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆದಿರುವ ಘಟನೆಯನ್ನು ಹಲವಾರು ನಾಯಕರು ಖಂಡಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನ ಕೆಲವು ನಾಯಕರು ಇದನ್ನು ಚುನಾವಣಾ ನಾಟಕ ಎಂದಿದ್ದಾರೆ. ಇದನ್ನು ನಂಬಲು ಅಸಾಧ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ನಂದಿಗ್ರಾಮದಲ್ಲಿ ಬ್ಯಾನರ್ಜಿ ಚುನಾವಣೆಯ ಬಿಸಿ ಅನುಭವಿಸುತ್ತಿದ್ದಾರೆ, ಅದಕ್ಕಾಗಿ ಈ ನಾಟಕ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಜನರ ಅನುಕಂಪಗಳಿಸುವುದಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಹಾಗು ಕೇಂದ್ರ ಸಚಿವ ಪೀಯುಷ್ ಗೋಯಲ್, ನಾನು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಾರೆ. ನೀವೆಲ್ಲರೂ ತುಂಬಾ ಜಾಣರು, ಈ ರೀತಿಯ ಘಟನೆಗಳನ್ನು ನೀವು ವರದಿ ಮಾಡಿರುತ್ತೀರಿ. ನಮ್ಮ ದೀದಿ ಗಲಿಬಿಲಿಗೊಂಡಿದ್ದಾರೆ. ಇದು ಸೋತ ಪಕ್ಷ ಮತ್ತು ಸೋತ ಅಭ್ಯರ್ಥಿಯ ಸಂಕೇತ. ಮಮತಾ ನಂದಿಗ್ರಾಮದಲ್ಲಿ ಪರಾಭವಗೊಳ್ಳುತ್ತಾರೆ ಮತ್ತು ಬಂಗಾಳದಲ್ಲಿ ಬದಲಾವಣೆ ಬರುತ್ತದೆ ಎಂದಿದ್ದಾರೆ.
ಮಮತಾ ಮೇಲೆ ನಡೆದ ದಾಳಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದು, ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ, ಶಿಕ್ಷೆಗೊಳಪಡಿಸಿ ಎಂದು ಒತ್ತಾಯಿಸಿದ್ದಾರೆ,
ವರದಿ ಕೇಳಿದ ಚುನಾವಣಾ ಆಯೋಗ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಆಲಾಪನ್ ಆಲಾಪನ್ ಬಂದೋಧ್ಯಾಯ್ ಗೆ ಚುನಾವಣಾ ಆಯೋಗ ಹೇಳಿದೆ. ಅದೇ ವೇಳೆ ಪೊಲೀಸರ ವಿಶೇಷ ವೀಕ್ಷಕ ವಿವೇಕ್ ದುಬೆ, ವಿಶೇಷ ಪ್ರಧಾನ ವೀಕ್ಷಕ ಅಜಯ್ ನಾಯಕ್ ಅವರಲ್ಲಿಯೂ ವರದಿ ಸಲ್ಲಿಸಲು ಚುನಾವಣಾ ಆಯೋಗ ನಿರ್ದೇಶಿಸಿದೆ.
ಇದನ್ನೂ ಓದಿ: ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪ
ಮಮತಾ ಬ್ಯಾನರ್ಜಿ ತಪ್ಪುತಪ್ಪಾಗಿ ಮಂತ್ರ ಹೇಳಿದ್ದಾರೆ: ರೆಕಾರ್ಡ್ ಹಾಕಿ ತೋರಿಸಿದ ಬಿಜೆಪಿಯ ಸುವೇಂದು ಅಧಿಕಾರಿ
Published On - 11:39 am, Thu, 11 March 21