‘ನಮ್ಮ ಸ್ವಾತಂತ್ರ್ಯ ಹತ್ತಿಕ್ಕುವವರ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತೋಣ’ -ಮಮತಾ ಬ್ಯಾನರ್ಜಿ ಸಲಹೆ

| Updated By: Lakshmi Hegde

Updated on: Aug 15, 2021 | 3:49 PM

75th Independence Day: ಸಿಎಂ ಮಮತಾ ಬ್ಯಾನರ್ಜಿ ಇಂದು 75ನೇ ಸ್ವಾತಂತ್ರ್ಯೋತ್ಸವ (75th Independence Day)ದ ನಿಮಿತ್ತ ಕೋಲ್ಕತ್ತದ ರೆಡ್​ರೋಡ್​​ನಲ್ಲಿ ಧ್ವಜಾರೋಹಣ (Flag Hoisting) ನೆರವೇರಿಸಿ,

‘ನಮ್ಮ ಸ್ವಾತಂತ್ರ್ಯ ಹತ್ತಿಕ್ಕುವವರ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತೋಣ’ -ಮಮತಾ ಬ್ಯಾನರ್ಜಿ ಸಲಹೆ
ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತ: ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಎಲ್ಲ ಶಕ್ತಿಗಳ ವಿರುದ್ಧ ಒಗ್ಗಟ್ಟಾಗಬೇಕು, ನಮ್ಮ ಬಲವಾದ ಧ್ವನಿಯನ್ನು ಎತ್ತಬೇಕು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಇಂದು 75ನೇ ಸ್ವಾತಂತ್ರ್ಯೋತ್ಸವ (75th Independence Day)ದ ನಿಮಿತ್ತ ಕೋಲ್ಕತ್ತದ ರೆಡ್​ರೋಡ್​​ನಲ್ಲಿ ಧ್ವಜಾರೋಹಣ (Flag Hoisting) ನೆರವೇರಿಸಿ, ಹಲವು ಪೊಲೀಸ್ ದಳಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಹಲವು ಪೊಲೀಸ್​ ಸಿಬ್ಬಂದಿಯನ್ನು ಪುರಸ್ಕರಿಸಿದರು ಮತ್ತು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಪ್ರತಿಮೆಗೆ ಗೌರವ ಸಮರ್ಪಿಸಿದರು.

ಧ್ವಜಾರೋಹಣದ ಬಳಿಕ ಮಾತುಗಳನ್ನಾಡದ ಮಮತಾ ಬ್ಯಾನರ್ಜಿ ನಂತರ ಟ್ವೀಟ್ ಮಾಡಿದ್ದಾರೆ. ಈ 75ನೇ ಸ್ವಾತಂತ್ರ್ಯೋತ್ಸವದಂದು ನಾವೆಲ್ಲರೂ ಒಗ್ಗಟ್ಟಾಗೋಣ. ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಶಕ್ತಿಗಳ ವಿರುದ್ಧ ಸಾಮೂಹಿಕವಾಗಿ ಧ್ವನಿ ಎತ್ತೋಣ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿ ಜೀವವನ್ನೇ ತ್ಯಾಗಮಾಡಿದವರನ್ನೆಂದು ಮರೆಯಬಾರದು. ಎಲ್ಲ ಸಹೋದರ-ಸಹೋದರಿಯರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು..ಜೈ ಹಿಂದ್​ ಎಂದು ಟ್ವೀಟ್ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ಪಶ್ಚಿಮಬಂಗಾಳ ಸರ್ಕಾರದ ವಿವಿಧ ಯೋಜನೆಗಳ, ಅಭಿಯಾನಗಳ ಬಗ್ಗೆ ಅರಿವು ಮೂಡಿಸುವ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಎಚ್​.ಕೆ.ದ್ವಿವೇದಿ, ಗೃಹ ಕಾರ್ಯದರ್ಶಿ ಬಿ.ಪಿ.ಗೋಪಾಲಿಕಾ, ಕೋಲ್ಕತ್ತ ಪೊಲೀಸ್​ ಆಯುಕ್ತ ಸೌಮನ್​ ಮಿತ್ರಾ ಇತರರು ಇದ್ದರು.

ಇದನ್ನೂ ಓದಿ: ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್​ ಬಾಸ್​ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?

‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್​’ ಚಿತ್ರದ ಪುನೀತ್ ಪವರ್​ಫುಲ್​​ ಲುಕ್​ ಅನಾವರಣ

Published On - 3:46 pm, Sun, 15 August 21