Mamata Banerjee: ಅನಂತ್ ಅಂಬಾನಿ- ರಾಧಿಕಾ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಮಮತಾ ಬ್ಯಾನರ್ಜಿ

ಮೂಲಗಳ ಪ್ರಕಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ- ರಾಧಿಕಾ ಅವರ ವಿವಾಹ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದು, ಅವರು ಮುಂಬೈಗೆ ಹೋಗುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ದೇಶದ ಹಲವು ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

Mamata Banerjee: ಅನಂತ್ ಅಂಬಾನಿ- ರಾಧಿಕಾ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
|

Updated on: Jul 09, 2024 | 1:05 PM

ಕೋಲ್ಕತ್ತಾ ಜುಲೈ 09: ಕಳೆದ ಕೆಲವು ದಿನಗಳಿಂದ ಮುಕೇಶ್ ಅಂಬಾನಿ (Mukesh Ambani) ಮನೆ ‘ಆಂಟಿಲಿಯಾ’ದಲ್ಲಿ ನಡೆಯುತ್ತಿರುವ ವಿವಾಹ ಸಂಭ್ರಮದ ಫೋಟೋಗಳು ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅಲ್ಲಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ (Anant Ambani )ಮತ್ತು ರಾಧಿಕಾ (Radhika merchant)ಮದುವೆ ಸಮಾರಂಭ ನಡೆಯಲಿದೆ. ಜುಲೈ 12 ರಂದು ಮುಖ್ಯ ವಿವಾಹ ಸಮಾರಂಭದ ಮೊದಲು ಮದುವೆಯ ಪೂರ್ವ ಹಂತವು ನಡೆಯುತ್ತಿದೆ. ಸಂಗೀತ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ತಾರೆಯರು ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಮುಖ್ಯ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದು, ಅವರು ಮುಂಬೈಗೆ ಹೋಗುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ದೇಶದ ಹಲವು ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಮಮತಾ ಯಾವಾಗ ಮುಂಬೈಗೆ ಭೇಟಿ ನೀಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರಿಗೆ ಬೇರೆ ಕಾರ್ಯಕ್ರಮ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ತೃಣಮೂಲ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೆಲ ದಿನಗಳ ಹಿಂದೆ ಮುಂಬೈಗೆ ತೆರಳಿದ್ದರು.

ಲೋಕಸಭೆ ಚುನಾವಣೆ ಬಳಿಕ ಅಭಿಷೇಕ್ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ್ದ ಮಮತಾ ಆದಿತ್ಯ ಠಾಕ್ರೆ ಅವರೊಂದಿಗೂ ಸಭೆ ನಡೆಸಿದರು. ಆದರೆ, ಈ ಬಾರಿ ಮುಂಬೈನಲ್ಲಿ ಮಮತಾ ಬ್ಯಾನರ್ಜಿ ಯಾವುದೇ ರಾಜಕೀಯ ಕಾರ್ಯಕ್ರಮವನ್ನು ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ‘ಸಮರದಿಂದ ಪರಿಹಾರ ಇಲ್ಲ’- ಉಕ್ರೇನ್ ಯುದ್ಧ ನಿಲ್ಲಿಸಲು ಪುಟಿನ್​ಗೆ ಮೋದಿ ಮನವಿ; ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆಗೆ ನಿರ್ಧಾರ

ಮೂಲಗಳ ಪ್ರಕಾರ, ಮುಕೇಶ್ ಅಂಬಾನಿ ಅವರ ಕಿರಿಯ ಮಗನ ಮದುವೆಗೆ ಹಲವಾರು ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಶ್ ಶಿಂಧೆ ಅವರನ್ನು ಅಂಬಾನಿ ಕುಟುಂಬ ಆಹ್ವಾನಿಸಿತ್ತು. ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಖುದ್ದಾಗಿ ಬಂದು ಆಹ್ವಾನಿಸಿದ್ದು, ಅನಂತ್-ರಾಧಿಕಾ ಕೂಡ ಇದ್ದರು. ಜುಲೈ 4 ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಮುಕೇಶ್ ಅಂಬಾನಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!