AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಗೆ ಅನಾರೋಗ್ಯ, 10 ಕಿ.ಮೀ ಹೆಗಲ ಮೇಲೆ ಹೊತ್ತು ನಡೆದ ಪತಿ, ಆದರೂ ಉಳೀಲಿಲ್ಲ ಪ್ರಾಣ

ಪತ್ನಿಗೆ ಅನಾರೋಗ್ಯ ಆಸ್ಪತ್ರೆಗೆ ಸೇರಿಸಬೇಕು ಸಹಾಯ ಮಾಡಿ ಎಂದು ಪತಿ ಅಂಗಲಾಚಿದರೂ ರಸ್ತೆ ಸರಿ ಇಲ್ಲದ ಕಾರಣ ಆ್ಯಂಬುಲೆನ್ಸ್​, ಆಟೋರಿಕ್ಷಾವಾಗಲಿ ಬರಲು ಒಪ್ಪಲಿಲ್ಲ, ಕೊನೆಗೆ ಪತಿ ತನ್ನ ಪತ್ನಿಯನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದು ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಅಷ್ಟೊತ್ತಿಗಾಗಿ ಮಹಿಳೆ ಉಸಿರು ಚೆಲ್ಲಿದ್ದಳು.

ಪತ್ನಿಗೆ ಅನಾರೋಗ್ಯ, 10 ಕಿ.ಮೀ ಹೆಗಲ ಮೇಲೆ ಹೊತ್ತು ನಡೆದ ಪತಿ, ಆದರೂ ಉಳೀಲಿಲ್ಲ ಪ್ರಾಣ
ಮಹಿಳೆ ಸಾವು
ನಯನಾ ರಾಜೀವ್
|

Updated on: Nov 20, 2023 | 8:03 AM

Share

ಪತ್ನಿಗೆ ಅನಾರೋಗ್ಯ ಆಸ್ಪತ್ರೆಗೆ ಸೇರಿಸಬೇಕು ಸಹಾಯ ಮಾಡಿ ಎಂದು ಪತಿ ಅಂಗಲಾಚಿದರೂ ರಸ್ತೆ ಸರಿ ಇಲ್ಲದ ಕಾರಣ ಆ್ಯಂಬುಲೆನ್ಸ್​, ಆಟೋರಿಕ್ಷಾವಾಗಲಿ ಬರಲು ಒಪ್ಪಲಿಲ್ಲ, ಕೊನೆಗೆ ಪತಿ ತನ್ನ ಪತ್ನಿಯನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದು ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಅಷ್ಟೊತ್ತಿಗಾಗಿ ಮಹಿಳೆ ಉಸಿರು ಚೆಲ್ಲಿದ್ದಳು.

ಕೋಲ್ಕತ್ತಾದ ಮಾಲ್ಡಾ ಸದರ್ ಉಪವಿಭಾಗ ವ್ಯಾಪ್ತಿಯ ಬಾಮಂಗೋಳದ ಮಾಲ್ದಂಗ ಗ್ರಾಮದಲ್ಲಿ ಘಟನೆ ನಡೆದಿದೆ. ಮಾಮೋನಿ ಎಂಬಾಕೆ ಬುಧವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು, ಕಡಿಮೆಯಾಗದ ಕಾರಣ ಕಾರ್ತಿಕ್ ಅವರನ್ನು ಶುಕ್ರವಾರ ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿದ್ದ.

ಅವರ ಮನೆಗೆ ತೆರಳುವ ರಸ್ತೆ ಸರಿ ಇಲ್ಲದ ಕಾರಣ ಆಂಬ್ಯುಲೆನ್ಸ್​, ಆಟೋಗಳು ಬರಲು ನಿರಾಕರಿಸಿದ ಕಾರಣ ಸ್ನೇಹಿತರ ಸಹಾಯದಿಂದ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಹೋಗಬೇಕಾಯಿತು. ಈ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ: ಕೆಎಸ್​ಆರ್​​ಟಿಸಿ ಬಸ್​​ನಲ್ಲಿಯೇ ಹೆರಿಗೆ, ಮಹಿಳಾ ಕಂಡಕ್ಟರ್ ಸಮಯ ಪ್ರಜ್ಞೆಗೆ ಶ್ಲಾಘನೆ

ಶನಿವಾರ ಗ್ರಾಮಕ್ಕೆ ಆಗಮಿಸಿದ ಬಿಡಿಒ ರಾಜು ಕುಂದು ಸ್ಥಳೀಯರ ಆಕ್ರೋಶಕ್ಕೆ ಗುರಿಯಾದರು, ಘಟನೆಗೆ ನಿವಾಸಿಗಳು ಪಂಚಾಯತ್ ಮತ್ತು ಆಡಳಿತವನ್ನು ಹೊಣೆಗಾರರನ್ನಾಗಿಸಿದರು. ನೂರಾರು ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ರಸ್ತೆ ದುರಸ್ತಿಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ದುರಂತಕ್ಕೆ ಕಾರಣ ಎಂದು ಬಿಜೆಪಿ ನಾಯಕಿ ಬೀನಾ ಸರ್ಕಾರ್ ಕೀರ್ತಾನಿಯಾ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ, ತೆಲಂಗಾಣದ ತುಳಸಿಪೇಟ್ ಗ್ರಾಮದಲ್ಲಿ ರಸ್ತೆ ಸರಿ ಇಲ್ಲದ ಕಾರಣ ಜತೆಗೆ ಇಂಧನ ಕೊರತೆ ಕಾರಣ ಹೇಳಿ ಆಂಬುಲೆನ್ಸ್​ ಬರಲು ನಿರಾಕರಿಸಿತ್ತು , ಬಳಿಕ ಆಕೆಗೆ ರಸ್ತೆಯಲ್ಲೇ ಹೆರಿಗೆಯಾಗಿತ್ತು. ಮೂರು ಗಂಟೆಗಳ ನಂತರ ಮತ್ತೊಂದು ಆಂಬ್ಯುಲೆನ್ಸ್ ಆಗಮಿಸಿ, ತಾಯಿ ಮತ್ತು ಮಗುವನ್ನು ಪೆಂಬಿ ಪ್ರಾಥಮಿಕ ಆಸ್ಪತ್ರೆಗೆ ಸಾಗಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ