AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Supreme Court: ಅದಾನಿ-ಹಿಂಡನ್ಬರ್ಗ್ ಪ್ರಕರಣ: ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲು

Plea Against SEBI: ಆಗಸ್ಟ್ 14ರಂದೇ ತನಿಖಾ ವರದಿ ಸಲ್ಲಿಸಬೇಕೆಂದು ಸೆಬಿಗೆ ನ್ಯಾಯಾಲಯ ಗಡುವು ಕೊಟ್ಟಿತ್ತು. ಆದರೆ, ಇನ್ನೂ ಕೂಡ ಸೆಬಿ ತನಿಖೆ ಪೂರ್ಣಗೊಂಡಿಲ್ಲ. ಇದು ಗಂಭೀರ ಪ್ರಕರಣವಾದ್ದರಿಂದ ಹೆಚ್ಚು ಸಮಯ ಬೇಕು ಎಂದು ಸೆಬಿ ಹೇಳುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ವಕೀಲ ವಿಶಾಲ್ ತಿವಾರಿ, ಸೆಬಿಯ ಈ ವರ್ತನೆಯು ನ್ಯಾಯಾಂಗ ನಿಂದನೆಯಾಗಿದೆ ಎಂದು ವಾದಿಸಿ, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Supreme Court: ಅದಾನಿ-ಹಿಂಡನ್ಬರ್ಗ್ ಪ್ರಕರಣ: ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲು
ಸರ್ವೋಚ್ಚ ನ್ಯಾಯಾಲಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 19, 2023 | 4:06 PM

Share

ನವದೆಹಲಿ, ನವೆಂಬರ್ 19: ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ (contempt of court) ದೂರು ದಾಖಲಾಗಿದೆ. ಸುಪ್ರೀಂಕೋರ್ಟ್​ನಿಂದ ನಿಗದಿಪಡಿಸಲಾದ ಗಡುವಿನೊಳಗೆ ಸೆಬಿ ತನಿಖೆ ನಡೆಸಲು ವಿಫಲವಾಗಿದೆ. ಇದರೊಂದಿಗೆ ನ್ಯಾಯಾಂಗ ಆದೇಶದ ಉಲ್ಲಂಘನೆಯಾಗಿದೆ. ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ವಕೀಲ ವಿಶಾಲ್ ತಿವಾರಿ ಅವರು ಪಿಐಎಲ್ ಸಲ್ಲಿಸಿದವರು.

ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಕೋರ್ಟ್ ಕಣ್ಗಾವಲಿನಲ್ಲಿ ತನಿಖೆ (court monitored probe) ನಡೆಯಬೇಕೆಂದು ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರ ಪೈಕಿ ವಿಶಾಲ್ ತಿವಾರಿಯೂ ಒಬ್ಬರು. ಇದೀಗ ಅವರು ಸೆಬಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ರಷ್ಟರಲ್ಲಿ ಅಂತಿಮ ದಾಖಲೆ ಸಲ್ಲಿಸುವಂತೆ ಎಲ್ಲರಿಗೂ ಸುಪ್ರೀಂಕೋರ್ಟ್ ಆದೇಶ

ಶಾರ್ಟ್ ಸೆಲ್ಲರ್ ಕಂಪನಿಯಾದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖಾ ವರದಿ ಪ್ರಕಟಿಸಿತ್ತು. ಅದಾನಿ ಗ್ರೂಪ್ ಕಂಪನಿಗಳ ಷೇರುಬೆಲೆ ಕೃತಕವಾಗಿ ಉಬ್ಬುವಂತೆ ಅಕ್ರಮಗಳನ್ನು ಎಸಗಲಾಗಿದೆ ಎಂಬುದೂ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಆ ವರದಿಯಲ್ಲಿ ಹೇಳಲಾಗಿತ್ತು. ಇದನ್ನು ಅದಾನಿ ಗ್ರೂಪ್ ನಿರಾಕರಿಸಿದೆಯಾದರೂ, ಸುಪ್ರೀಕೋರ್ಟ್ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಮೇ 17ರಂದು ತನಿಖೆಯನ್ನು ಸೆಬಿಗೆ ವಹಿಸಿದೆ.

ಆಗಸ್ಟ್ 14ರಂದೇ ತನಿಖಾ ವರದಿ ಸಲ್ಲಿಸಬೇಕೆಂದು ಸೆಬಿಗೆ ನ್ಯಾಯಾಲಯ ಗಡುವು ಕೊಟ್ಟಿತ್ತು. ಆದರೆ, ಇನ್ನೂ ಕೂಡ ಸೆಬಿ ತನಿಖೆ ಪೂರ್ಣಗೊಂಡಿಲ್ಲ. ಇದು ಗಂಭೀರ ಪ್ರಕರಣವಾದ್ದರಿಂದ ಹೆಚ್ಚು ಸಮಯ ಬೇಕು ಎಂದು ಸೆಬಿ ಹೇಳುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ವಕೀಲ ವಿಶಾಲ್ ತಿವಾರಿ, ಸೆಬಿಯ ಈ ವರ್ತನೆಯು ನ್ಯಾಯಾಂಗ ನಿಂದನೆಯಾಗಿದೆ ಎಂದು ವಾದಿಸಿ, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅದಾನಿ ಬಿಸಿನೆಸ್ ಸಾಮ್ರಾಜ್ಯ ವಿಸ್ತರಣೆ; ಬೇರೆ ಬೇರೆ ದೇಶಗಳಲ್ಲಿ ಉದ್ದಿಮೆ ಸ್ಥಾಪನೆಗೆ ಅದಾನಿ ಗ್ರೂಪ್ ಆಲೋಚನೆ

ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಮಾತ್ರವಲ್ಲ, ಓಸಿಸಿಆರ್​ಪಿ (ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್) ಸಂಘಟನೆ ಕೂಡ ಆರೋಪಗಳನ್ನು ಮಾಡಿದೆ. ಈ ಒಸಿಸಿಆರ್​ಪಿ ವರದಿ ಬಗ್ಗೆಯೂ ಸುಪ್ರೀಂ ಕೋರ್ಟ್ ಗಮನ ಹರಿಸಿ ತಜ್ಞರ ಸಮಿತಿಯಿಂದ ತನಿಖೆ ನಡೆಸಿಸಬೇಕು ಎಂದು ವಿಶಾಲ್ ತಿವಾರಿ ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ.

ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ನಲ್ಲಿ ಇನ್ನೂ ಲಿಸ್ಟ್ ಮಾಡಲಾಗಿಲ್ಲ. ಇತ್ತೀಚೆಗೆ ಬಂದ ವರದಿ ಪ್ರಕಾರ ಸೆಬಿಯ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್