ಬಂಗಾಳದಲ್ಲಿ ಬಂಟಿ-ಬಬ್ಲಿ ಗ್ಯಾಂಗ್ ಹಾವಳಿ; 10 ಕೋಟಿ ರೂ. ನಕಲಿ ನೋಟುಗಳ ಜಾಲ ಪತ್ತೆಯಾಗಿದ್ದು ಹೇಗೆ?

ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿರುವ ಅತಿಥಿ ಗೃಹದಿಂದ ಶನಿವಾರ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿತ್ತು. ಶುಕ್ರವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ದೊಡ್ಡ ಬ್ಯಾಗ್​ಗಳೊಂದಿಗೆ ಅತಿಥಿ ಗೃಹಕ್ಕೆ ಪ್ರವೇಶಿಸಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಸಿರ್ಹತ್ ಪೊಲೀಸ್ ಜಿಲ್ಲೆಯ ತಂಡವು ಸ್ಥಳದ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿತ್ತು.

ಬಂಗಾಳದಲ್ಲಿ ಬಂಟಿ-ಬಬ್ಲಿ ಗ್ಯಾಂಗ್ ಹಾವಳಿ; 10 ಕೋಟಿ ರೂ. ನಕಲಿ ನೋಟುಗಳ ಜಾಲ ಪತ್ತೆಯಾಗಿದ್ದು ಹೇಗೆ?
Fake Note
Updated By: ಸುಷ್ಮಾ ಚಕ್ರೆ

Updated on: Jul 23, 2025 | 4:12 PM

ಕೊಲ್ಕತ್ತಾ, ಜುಲೈ 23: ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಸಂದೇಶಖಾಲಿಯ ಗೋದಾಮೊಂದರಿಂದ ಸುಮಾರು 10 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ವಶಪಡಿಸಿಕೊಳ್ಳಲಾಗಿತ್ತು. ಈ ಘಟನೆಯು ಸಂಚಲನಕಾರಿ ತಿರುವು ಪಡೆದುಕೊಂಡಿತ್ತು. ನಕಲಿ ನೋಟುಗಳು ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಹೊಸ ‘ಬಂಟಿ-ಬಾಬ್ಲಿ’ ಗ್ಯಾಂಗ್ ಕೂಡ ಪ್ಲೇ ನೋಟ್‌ಗಳಲ್ಲಿ ಕಡಿಮೆ ಬಡ್ಡಿದರದ ಸಾಲ ನೀಡುವ ದಂಧೆಯಲ್ಲಿ ಸಕ್ರಿಯವಾಗಿದೆ. ರಾಜ್ಯ ಪೊಲೀಸ್ ಮೂಲಗಳ ಪ್ರಕಾರ, ಸಂದೇಶಖಾಲಿ ಹೋಟೆಲ್‌ನಿಂದ ವಶಪಡಿಸಿಕೊಂಡ ಸಂಪೂರ್ಣ ಹಣದ ಬಂಡಲ್ ಪೂರ್ತಿ ನಕಲಿ ನೋಟುಗಳಾಗಿದ್ದವು. ಅದರಲ್ಲಿ ಮಕ್ಕಳ ಆಟಿಕೆ ನೋಟುಗಳು ಸಹ ಇದ್ದವು. ಎಲ್ಲಾ ನೋಟುಗಳ ಬಂಡಲ್‌ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ‘ಮನೋರಂಜನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆದಿರುವ 7 ಕೋಟಿ ರೂಪಾಯಿ ಮೌಲ್ಯದ ಪ್ಲೇ ನೋಟ್‌ಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಟಿ ಬಾಬ್ಲಿ ಗ್ಯಾಂಗ್ ಈ ನೋಟು ವ್ಯವಹಾರದಲ್ಲಿ ಭಾಗಿಯಾಗಿತ್ತು.

‘ಬಬ್ಲಿ’ ಅಂದರೆ ತೀಸ್ತಾ ಸೇನ್ ಈಗಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರನ್ನು ಬಿರ್ಭೂಮ್‌ನಿಂದ ಬಂಧಿಸಲಾಗಿದೆ. ಬಂಟಿ ಅಂದರೆ ಗ್ಯಾಂಗ್‌ನ ಮುಖ್ಯಸ್ಥ ಅಭಿಷೇಕ್ ತಿವಾರಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ‘ಬಂಟಿ ಬಬ್ಲಿ ಗ್ಯಾಂಗ್’ ಸಾಲ ನೀಡುವ ಹೆಸರಿನಲ್ಲಿ ಬಂಗಾಳದಲ್ಲಿ ಹೊಸ ರೀತಿಯ ವಂಚನೆಯನ್ನು ಸೃಷ್ಟಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ಕೇವಲ ಶೇ. 4ರಷ್ಟು ಬಡ್ಡಿಗೆ 10, 20, 30 ಕೋಟಿಗೂ ಹೆಚ್ಚು ಸಾಲ ನೀಡುವ ಜಾಲವನ್ನು ಅವರು ಸೃಷ್ಟಿಸುತ್ತಿದ್ದರು. ಏಜೆಂಟ್ ಮೂಲಕ ಯಾರೇ ಅವರನ್ನು ಸಂಪರ್ಕಿಸಿದರೂ ಅವರು ಮೊದಲು ವೀಡಿಯೋ ಕರೆಗಳಲ್ಲಿ ಕಾಗದದ ಪೆಟ್ಟಿಗೆಗಳ ಬಂಡಲ್ ಅನ್ನು ತೋರಿಸುತ್ತಿದ್ದರು.

ಇದನ್ನೂ ಓದಿ: ಬಂಗಾಳಿ ವಲಸಿಗರು ರೋಹಿಂಗ್ಯಾಗಳೆಂದು ಸಾಬೀತುಪಡಿಸಿ; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

ಸಾಲ ಪಡೆಯಲು ಯಾವುದೇ ದಾಖಲೆಗಳ ಅಗತ್ಯವಿಲ್ಲದಿದ್ದರೂ, ಅವರು ಸಾಲ ನೀಡುವ ಮೊತ್ತದ ಶೇ. ಒಂದು ಭಾಗದಷ್ಟು ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿತ್ತು. ಈ ವಂಚನೆಯ ನಿಜವಾದ ಉದ್ದೇಶವೆಂದರೆ ಈ ಸಂಸ್ಕರಣಾ ಶುಲ್ಕವನ್ನು ದೋಚಿಕೊಂಡು ನಾಪತ್ತೆಯಾಗುವುದು. ಸಂದೇಶಖಾಲಿಯಿಂದ ಇಬ್ಬರು ಆರೋಪಿಗಳ ಬಂಧನದ ನಂತರ ಅಸನ್ಸೋಲ್‌ನ ಉದ್ಯಮಿಯೊಬ್ಬರು ಪೊಲೀಸರನ್ನು ಸಂಪರ್ಕಿಸಿದರು. ಆರೋಪಿಗಳು 30 ಕೋಟಿ ರೂ.ಗಳ ಆಟಿಕೆ ನೋಟುಗಳನ್ನು ತನಗೆ ನೀಡಿ 2.2 ಲಕ್ಷ ರೂ.ಗಳ ಸಂಸ್ಕರಣಾ ಶುಲ್ಕದೊಂದಿಗೆ ಪರಾರಿಯಾಗಿದ್ದಾರೆ ಎಂದು ಅವರು ದೂರು ನೀಡಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬಡತನದಿಂದ ಬೇಸತ್ತು ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದ ತಾಯಿ

ದೇಬಬ್ರತ ಚಕ್ರವರ್ತಿ ಎಂಬ ಮುದ್ರಣ ಯಂತ್ರದ ಉದ್ಯಮಿ ಈ ಜಾಲದಲ್ಲಿ ಭಾಗಿಯಾಗಿದ್ದಾರೆ. ತೀಸ್ತಾ ಮತ್ತು ಅಭಿಷೇಕ್ ಅವರು ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಸಿನಿಮಾದಲ್ಲಿ ತೋರಿಸಲು ಅವರು ಕೆಲವು ನಕಲಿ ನೋಟುಗಳನ್ನು ಪ್ರಿಂಟ್ ಮಾಡಿಸಬೇಕಾಗಿತ್ತು. ಅದೇ ರೀತಿ, ಅಭಿಷೇಕ್ 7 ಕೋಟಿ 80 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ಮುದ್ರಿಸಿದರು. ಪೊಲೀಸ್ ಮೂಲಗಳ ಪ್ರಕಾರ, ಈ ವರ್ಷದ ಫೆಬ್ರವರಿಯಲ್ಲಿ ಕೋಲ್ಕತ್ತಾ ಪೊಲೀಸರು ಅಭಿಷೇಕ್ ಮತ್ತು ತೀಸ್ತಾ ಅವರನ್ನು ಸೈಬರ್ ವಂಚನೆ ಪ್ರಕರಣದಲ್ಲಿ ಬಂಧಿಸಿದ್ದರು. ಅಲ್ಲಿಂದ ಹೊರಬಂದ ನಂತರ, ಅವರು ಸಾಲ ನೀಡುವ ಹೆಸರಿನಲ್ಲಿ ಜನರನ್ನು ವಂಚಿಸಲು ಪ್ರಾರಂಭಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ