AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದ್ದ ವಜ್ರವನ್ನು ಮೆಟ್ಟಿಲುಗಳ ಕೆಳಗಿನ ಸ್ವಿಚ್‌ಬೋರ್ಡ್‌ನಲ್ಲಿ ಬಚ್ಚಿಟ್ಟ ಕಳ್ಳರು; 21 ವರ್ಷದ ನಂತರ ಪತ್ತೆ

ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟದ ನಂತರ, ವಜ್ರವನ್ನು ಅದರ ನಿಜವಾದ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಕಳೆದ ವಾರ ವಜ್ರವನ್ನು ಅದರ ಮಾಲೀಕರಿಗೆ ಹಸ್ತಾಂತರಿಸುವಾಗ, ನ್ಯಾಯಾಧೀಶರು ಕ್ಲಾಸಿಕ್ ಸಿನಿಮಾ 'ಜಾಯ್ ಬಾಬಾ ಫೆಲುನಾಥ್' ಗೆ ಹೋಲಿಸಿದ್ದಾರೆ. ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಸಿನಿಮಾ 'ಜಾಯ್ ಬಾಬಾ ಫೇಲುನಾಥ್'. ಇದರಲ್ಲಿ ದುರ್ಗಾ ವಿಗ್ರಹದ ಸಿಂಹದ ಬಾಯಿಯೊಳಗೆ ಸುಮಾರು ಮೂರು ಇಂಚು ಎತ್ತರದ ವಿಗ್ರಹವನ್ನು ಕಳ್ಳ ಬಚ್ಚಿಟ್ಟಿದ್ದ.

ಕದ್ದ ವಜ್ರವನ್ನು ಮೆಟ್ಟಿಲುಗಳ ಕೆಳಗಿನ ಸ್ವಿಚ್‌ಬೋರ್ಡ್‌ನಲ್ಲಿ ಬಚ್ಚಿಟ್ಟ ಕಳ್ಳರು; 21 ವರ್ಷದ ನಂತರ ಪತ್ತೆ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Aug 14, 2023 | 2:32 PM

Share

ಕೊಲ್ಕತ್ತಾ ಆಗಸ್ಚ್ 14: 32 ಕ್ಯಾರೆಟ್ ಗೋಲ್ಕೊಂಡಾ ವಜ್ರದ (Diamond) ಕಳ್ಳತನದ ವಿಚಿತ್ರ ಕಥೆಯೊಂದು ಕೋಲ್ಕತ್ತಾದಲ್ಲಿ (kolkata) ಬೆಳಕಿಗೆ ಬಂದಿದೆ. ನ್ಯಾಯಾಲಯದಲ್ಲಿ ಸುದೀರ್ಘ ಕಾನೂನು ಹೋರಾಟಕ್ಕೆ ಕಾರಣವಾದ ವಜ್ರದ ಕಳ್ಳತನವು ಕಳೆದ ವಾರ ಕೋಲ್ಕತ್ತಾ ನ್ಯಾಯಾಲಯದಲ್ಲಿ ಕೊನೆಗೊಂಡಿತು. ಅಪರಾಧ, ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಬೇಹುಗಾರಿಕೆ ಎಲ್ಲವೂ ಈ ಪ್ರಕರಣದಲ್ಲಿ ಸೇರಿವೆ. ಬಂದೂಕು ತೋರಿಸಿ ದರೋಡೆ ನಡೆದಿದ್ದು ಕಳ್ಳರು ವಜ್ರವನ್ನು ಕದ್ದೊಯ್ದಿದ್ದರು. ಪೊಲೀಸರು ಇದಕ್ಕಾಗಿ ಹುಡುಕಾಟ ನಡೆಸಿದರೂ ಅದನ್ನು ಪತ್ತೆ ಹಚ್ಚಲು ಆಗಲಿಲ್ಲ. ಆದರೆ ಕೊನೆಗೇ ಅದು ಮೆಟ್ಟಿಲುಗಳ ಕೆಳಗಿನ ಸ್ವಿಚ್‌ಬೋರ್ಡ್‌ನಲ್ಲಿ ಪತ್ತೆಯಾಗಿದೆ.

ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟದ ನಂತರ, ವಜ್ರವನ್ನು ಅದರ ನಿಜವಾದ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಕಳೆದ ವಾರ ವಜ್ರವನ್ನು ಅದರ ಮಾಲೀಕರಿಗೆ ಹಸ್ತಾಂತರಿಸುವಾಗ, ನ್ಯಾಯಾಧೀಶರು ಅದನ್ನು ಕ್ಲಾಸಿಕ್ ಸಿನಿಮಾ ‘ಜಾಯ್ ಬಾಬಾ ಫೆಲುನಾಥ್’ ಗೆ ಹೋಲಿಸಿದ್ದಾರೆ.

ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಸಿನಿಮಾ ‘ಜಾಯ್ ಬಾಬಾ ಫೇಲುನಾಥ್’. ಇದರಲ್ಲಿ ದುರ್ಗಾ ವಿಗ್ರಹದ ಸಿಂಹದ ಬಾಯಿಯೊಳಗೆ ಸುಮಾರು ಮೂರು ಇಂಚು ಎತ್ತರದ ವಿಗ್ರಹವನ್ನು ಕಳ್ಳ ಬಚ್ಚಿಟ್ಟಿದ್ದ.

ಕೊನೆಗೆ ಫೆಲುದಾ ತನ್ನ ತಾರ್ಕಿಕ ಬುದ್ಧಿಮತ್ತೆಯಿಂದ ವಿಗ್ರಹವನ್ನು ಕಂಡು ಹಿಡಿಯುತ್ತಾನೆ. ಈ ಚಿತ್ರ ಸತ್ಯಜಿತ್ ರೇ ಅವರ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿದೆ. ಇಲ್ಲಿ ಸದ್ಯ ಸುಮಾರು 15 ಕೋಟಿ ಮೌಲ್ಯದ ವಜ್ರವನ್ನು ಕಳ್ಳರು ಮೆಟ್ಟಿಲಿನ ಕೆಳಗೆ ಸ್ವಿಚ್ ಬೋರ್ಡ್ ಒಳಗೆ ಬಚ್ಚಿಟ್ಟಿದ್ದರು.

2002ರಲ್ಲಿ ಗನ್ ಪಾಯಿಂಟ್‌ನಲ್ಲಿ ವಜ್ರವನ್ನು ಕಳವು ಮಾಡಲಾಗಿತ್ತು

2002ರಲ್ಲಿ ವಜ್ರದ ಮಾಲೀಕ ದಕ್ಷಿಣ ಕೋಲ್ಕತ್ತಾದ ನಿವಾಸಿ ಪ್ರಣಬ್ ಕುಮಾರ್ ರಾಯ್ ವಜ್ರದ ಮೌಲ್ಯಮಾಪಕನನ್ನು ಹುಡುಕುತ್ತಿದ್ದರು. ಅದೇ ವರ್ಷ ಜೂನ್‌ನಲ್ಲಿ ವಜ್ರದ ದಲ್ಲಾಳಿ ಇಂದ್ರಜಿತ್ ತಾಪ್ದಾರ್ ಮೌಲ್ಯಮಾಪಕನೊಂದಿಗೆ ಪ್ರಣಬ್ ಕುಮಾರ್ ರಾಯ್ ಅವರ ಮನೆಗೆ ಬಂದರು. ಆ ವೇಳೆ ವೌಲ್ಯಮಾಪಕನಾಗಿ ಬಂದ ವ್ಯಕ್ತಿ ಪಿಸ್ತೂಲ್ ತೋರಿಸಿ ವಜ್ರ ಲೂಟಿ ಮಾಡಿದ್ದಾನೆ.

ಇದನ್ನೂ ಓದಿ: Hair Donation: ಕೊರೊನಾ ನಂತರ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ: TTD ಆದಾಯದ ಮೊತ್ತ ಎಷ್ಟು ಗೊತ್ತಾ?

ವಜ್ರಗಳನ್ನು ತೆಗೆದುಕೊಂಡ ನಂತರ ರಾಯ್ ತಾಪ್ದಾರ್ ಅವರೊಂದಿಗೆ ಜಗಳವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಅಲ್ಲೇ ನಿಂತಿದ್ದ ಮತ್ತೊಬ್ಬ ವ್ಯಕ್ತಿ ಆತನ ಮೇಲೆ ಹಾರಿ ಜಗಳ ಆರಂಭಿಸಿದ. ಬಳಿಕ ರಾಯರ ಬಳಿ ಇದ್ದ ವಜ್ರದೊಂದಿಗೆ ಇಬ್ಬರೂ ಪರಾರಿಯಾಗಿದ್ದಾರೆ.

ಮೀಟರ್ ಬಾಕ್ಸ್ ನ ಸ್ವಿಚ್ ಬೋರ್ಡ್ ಬಚ್ಚಿಡಲಾಗಿತ್ತು

ವಿಷಯ ಪೊಲೀಸರ ಮೊರೆ ಹೋದಾಗ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. ನಂತರ ಪೊಲೀಸರು ತಾಪ್ದಾರ್​​ಗಾಗಿ ಹುಡುಕಾಟ ನಡೆಸಿದರು. ಪೊಲೀಸರಿಗೆ ತಾಪ್ದಾರ್ ಸಿಕ್ಕಿದರೂ ವಜ್ರ ಪತ್ತೆಯಾಗಲಿಲ್ಲ.ಪೊಲೀಸರು ವಜ್ರಕ್ಕಾಗಿ ಹುಡುಕಾಟವನ್ನು ಮುಂದುವರೆಸಿದ್ದು ಕೊನೆಗೊಂದು ದಿನಮೆಟ್ಟಿಲ ಕೆಳಗಿರುವ ಮೀಟರ್ ಬಾಕ್ಸ್ ಬಳಿ ಸ್ವಿಚ್ ಬೋರ್ಡ್ ನೊಳಗೆ ಬಚ್ಚಿಟ್ಟಿದ್ದ ವಜ್ರ ಪತ್ತೆಯಾಗಿದೆ. ಪ್ರತಿ ಬಾರಿ ಹುಡುಕಾಟಕ್ಕೆ ಹೋಗುವಾಗ ಪೊಲೀಸರು ಆ ಸ್ಥಳವನ್ನು ಹಾದು ಹೋಗಿದ್ದರು, ಆದರೆ ಯಾರೂ ಅಲ್ಲಿಗೆ ಕದ್ದ ಮಾಲು ಅಲ್ಲಿದೆ ಎಂಬ ಸಂದೇಹವೇ ಬರಲಿಲ್ಲ. ಇದೀಗ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ