What India Thinks Today: ಬಿಜೆಪಿ 370, ಎನ್‌ಡಿಎ 400 ಹೇಗಿದೆ ಚಾಣಕ್ಯನ ಪ್ಲ್ಯಾನ್​​? ಟಿವಿ9 ವೇದಿಕೆಯಲ್ಲಿ ಅಮಿತ್​​​ ಶಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 25, 2024 | 12:26 PM

Amit Shah: ಟಿವಿ9 ವೇದಿಕೆಯಲ್ಲಿ ಮೋದಿ ಸರ್ಕಾರದ ಸಾಧನೆಗಳ ಬಗ್ಗೆಯೂ ಅಮಿತ್ ಶಾ ಚರ್ಚೆ ನಡೆಸಬಹುದು. ಬಿಜೆಪಿ ಸರ್ಕಾರದ ಜನಕಲ್ಯಾಣ ಯೋಜನೆಗಳಿಂದ ಜನಸಾಮಾನ್ಯರಿಗೆ ಎಷ್ಟು ಲಾಭವಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಬಿಜೆಪಿಯ ಸಿದ್ಧತೆಗಳ ಬಗ್ಗೆಯೂ ಇಲ್ಲಿ ಚರ್ಚಿಸಬಹುದು.

What India Thinks Today: ಬಿಜೆಪಿ 370, ಎನ್‌ಡಿಎ 400 ಹೇಗಿದೆ ಚಾಣಕ್ಯನ ಪ್ಲ್ಯಾನ್​​? ಟಿವಿ9 ವೇದಿಕೆಯಲ್ಲಿ ಅಮಿತ್​​​ ಶಾ
Follow us on

ನೆಟ್‌ವರ್ಕ್ ಟಿವಿ 9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಎಂಬ ಎರಡನೇ ಆವೃತ್ತಿಯ ಕಾರ್ಯಕ್ರಮಗಳನ್ನು ನಡೆಸಲು ಸಿದ್ದವಾಗಿದೆ. ಇಂದಿನಿಂದ 3 ದಿನಗಳ (25,26,27) ಕಾಲ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ವಿಜ್ಞಾನ ಕ್ಷೇತ್ರದ ಸಾಧಕರು, ಆರ್ಥಿಕ ಕ್ಷೇತ್ರದ ಸಾಧಕರು, ಕ್ರೀಡಾ ಕ್ಷೇತ್ರದ ಸಾಧಕರು, ರಾಜಕಾರಣಿಗಳು, ಕಲೆ-ಸಾಹಿತ್ಯ ಕ್ಷೇತ್ರದ ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದ ದೇಶದ ಗೃಹಸಚಿವ ಅಮಿತ್​​​​​ ಶಾ ಕೂಡ ಭಾಗವಹಿಸಲಿದ್ದಾರೆ. ಇವರು ಫೆಬ್ರವರಿ 27ರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

‘ಬ್ಯಾಕ್ ಸ್ಟೇಜ್ ಹೀರೋ’ ಎಂಬ ವಿಚಾರದ ಬಗ್ಗೆ ಅಮಿತ್​​​ ಶಾ ಸಂವಾದ ನಡೆಸಲಿದ್ದಾರೆ. ಜತೆಗೆ ಲೋಕಸಭೆ ಚುನಾವಣೆಗೆ ಬಿಜೆಪಿ ಯಾವೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂಬ ಬಗ್ಗೆ ಕೂಡ ಮಾತನಾಡಲಿದ್ದಾರೆ. ಈ ವೇದಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ 35 ಕ್ಕೂ ಹೆಚ್ಚು ಸ್ಥಾನಗಳ ಗೆಲುವಿನ ಬಗ್ಗೆ ಅಮಿತ್ ಶಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.

ಬಿಜೆಪಿಯ ಚಾಣಕ್ಯ ಎಂದು ಕರೆಯುವ ಶಾ, ಈ ಚುನಾವಣೆಯಲ್ಲಿಯೂ ಪಕ್ಷದ ಗೆಲುವಿಗೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ಬಗ್ಗೆ ವಾಟ್ ಇಂಡಿಯಾ ಥಿಂಕ್ಸ್ ಟುಡೇ ವೇದಿಕೆಯಲ್ಲಿ ತಿಳಿಸಬಹುದು. ಪ್ರಧಾನಿ ಮೋದಿ ಅವರು ಸಂಸತ್​​ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅನೇಕ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 370 ಮತ್ತು ಎನ್‌ಡಿಎಗೆ 400 ಸ್ಥಾನಗಳು ಬರಲಿದೆ ಎಂದು ಹೇಳಿದ್ದಾರೆ. ಹಾಗಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜೊತೆಗೆ ಸ್ವತಃ ಅಮಿತ್ ಶಾ ಕೂಡ ದಕ್ಷಿಣಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ : ಫೆಬ್ರವರಿ 26 ರಂದು ಪ್ರಧಾನಿ ಮೋದಿ ಮಾತು, 3 ದಿನಗಳ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಇದೀಗ ಟಿವಿ9 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸರ್ಕಾರದ ಸಾಧನೆ ಹಾಗೂ ವಿಕಸಿತ್​​ ಭಾರತ್​ 2047 ಯೋಜನೆಗಳೇನು ಎಂಬ ಬಗ್ಗೆ ಚರ್ಚಿಸಬಹುದು. ಬಿಜೆಪಿ ಸರ್ಕಾರದ ಜನಕಲ್ಯಾಣ ಯೋಜನೆಗಳಿಂದ ಜನಸಾಮಾನ್ಯರು ಎಷ್ಟರಮಟ್ಟಿಗೆ ಪ್ರಯೋಜನ ಪಡೆದಿದ್ದಾರೆ ಎನ್ನುವುದನ್ನೂ ಕೂಡ ಈ ವೇದಿಕೆಯಲ್ಲಿ ಹೇಳಬಹುದು. ರಾಜ್ಯಮಟ್ಟದಲ್ಲಿ ಬಿಜೆಪಿಯ ಸಿದ್ಧತೆಗಳು ಹೇಗಿದೆ. ಅದರಲ್ಲೂ ಈ ಬಾರಿ ಲೋಕಸಭೆಯಲ್ಲಿ ಹೆಚ್ಚು ಸ್ಥಾನವನ್ನು ಉತ್ತರಪ್ರದೇಶದಲ್ಲಿ ಪಡೆಯಲು ಯಾವೆಲ್ಲ ಯೋಜನೆಗಳು ಮಾಡಿದೆ ಎಂಬ ಬಗ್ಗೆಯೂ ಶಾ ಇಲ್ಲಿ ಮಾತನಾಡಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:00 pm, Sun, 25 February 24