What India Thinks Today: ಬುಲೆಟ್ ಟ್ರೈನ್, 5G ಮತ್ತು ಸೆಮಿಕಂಡಕ್ಟರ್ಗಳ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?
ಬುಲೆಟ್ ರೈಲು, 5ಜಿ ನೆಟ್‌ವರ್ಕ್ ನಂತರ 6ಜಿ ನೆಟ್‌ವರ್ಕ್ ಹಾಗೂ ದೇಶದಲ್ಲಿ ಸೆಮಿಕಂಡಕ್ಟ್ಗಳ ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಳಕು ಚೆಲ್ಲಿದರು. ಟಿವಿ9 ನೆಟ್‌ವರ್ಕ್ ಆಯೋಜಿಸಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಸಮ್ಮೇಳನದ ಎರಡನೇ ದಿನವಾದ ಇಂದು, ಹಲವು ವಿಷಯಗಳ ಕುರಿತು ಸಚಿವರು ಮಾತನಾಡಿದರು.
ಬುಲೆಟ್ ರೈಲು, 5ಜಿ ನೆಟ್‌ವರ್ಕ್ ನಂತರ 6ಜಿ ನೆಟ್‌ವರ್ಕ್ ಹಾಗೂ ದೇಶದಲ್ಲಿ ಸೆಮಿಕಂಡಕ್ಟ್ಗಳ ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಳಕು ಚೆಲ್ಲಿದರು. ಟಿವಿ9 ನೆಟ್‌ವರ್ಕ್ ಆಯೋಜಿಸಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಸಮ್ಮೇಳನದ ಎರಡನೇ ದಿನವಾದ ಇಂದು, ಹಲವು ವಿಷಯಗಳ ಕುರಿತು ಸಚಿವರು ಮಾತನಾಡಿದರು.
2026 ರ ವೇಳೆಗೆ ಓಡಲಿದೆ ಮೊದಲ ಬುಲೆಟ್ ರೈಲು ಬುಲೆಟ್ ರೈಲಿನ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ, 2026 ರಲ್ಲಿ ನಾವು ಭಾರತದಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಸಿಗಬಹುದು. ಸರ್ಕಾರ ಅನುಮತಿ ನೀಡಿದ ದಿನ ಮಹಾರಾಷ್ಟ್ರದಲ್ಲೂ ಕಾಮಗಾರಿ ಆರಂಭವಾಗಬೇಕು ಎಂಬುದು ಮಹಾರಾಷ್ಟ್ರದ ಜನರ ಬಯಕೆಯಾಗಿದೆ ಎಂದರು.
ದೇಶದ 20-25 ನಗರಗಳಲ್ಲಿ 5ಜಿ ಸೇವೆ ಆರಂಭ ಈ ವರ್ಷದ ಅಂತ್ಯದ ವೇಳೆಗೆ ದೇಶದ 20 ರಿಂದ 25 ನಗರಗಳಲ್ಲಿ 5ಜಿ ನೆಟ್‌ವರ್ಕ್ ಆರಂಭಿಸಲಾಗುವುದು. ಈ ವಿಷಯದಲ್ಲೂ ನಾವು ವಿಶ್ವದಲ್ಲೇ ಮುಂದೆ ಇರುತ್ತೇವೆ ಎಂದು ಹೇಳಿದ್ದಾರೆ. ವಿಶ್ವದ ದೇಶಗಳಿಗಿಂತ 10 ಪಟ್ಟು ಕಡಿಮೆ ದರದಲ್ಲಿ ಭಾರತದ ಜನರಿಗೆ 5G ನೆಟ್‌ವರ್ಕ್ ಸಿಗಲಿದೆ ಎಂದು ಹೇಳಿದರು.
ಶೀಘ್ರದಲ್ಲೇ ಭಾರತ್ ಸೆಮಿಕಂಡಕ್ಟರ್ ತಯಾರಿಸಲಾಗುವುದು ಮತ್ತು ಇದರ ಒಪ್ಪಂದವನ್ನು ಶೀಘ್ರದಲ್ಲೇ ಮಾಡಲಾಗುತ್ತದೆ. ಮೊದಲ ಒಪ್ಪಂದ ಮತ್ತು ಕಾರ್ಖಾನೆ ಸೆಟಪ್ 2022 ರ ಅಂತ್ಯದ ವೇಳೆಗೆ ಸಿದ್ಧವಾಗಲಿದೆ.
ಎಲೆಕ್ಟ್ರಾನಿಕ್ಸ್ ಉದ್ಯಮದ ಗಾತ್ರವನ್ನು ಮೂರು-ನಾಲ್ಕು ಪಟ್ಟು ಹೆಚ್ಚಿಸುತ್ತದೆ. ಮುಂದಿನ 4-5 ವರ್ಷಗಳಲ್ಲಿ ಈ ವಲಯದಲ್ಲಿಯೇ 1 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ. ಇದರೊಂದಿಗೆ ಎಲೆಕ್ಟ್ರಾನಿಕ್ಸ್ ಬೆಲೆಯೂ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದರು.
ರೈಲ್ವೆ ಕಾನೂನುಗಳನ್ನು ಬಿಗಿಗೊಳಿಸಬೇಕು ಅಗ್ನಿಪಥ ಯೋಜನೆ ವಿರೋಧಿಸಿ ಯುವಕರು ರೈಲ್ವೇ ಆಸ್ತಿಗೆ ಹಾನಿ ಮಾಡಿದ ವಿಷಯವನ್ನು ಪ್ರಸ್ತಾಪಿಸಿದ ಅವರು, ನಾವು ರೈಲ್ವೇ ಕಾನೂನುಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಯಾವುದೇ ವಿಚಾರದಲ್ಲಾದರೂ ಸರ್ಕಾರ ನಿಮ್ಮ ಮನವಿಯನ್ನು ಕೇಳಲು ಸಿದ್ಧವಿದೆ. ಆದರೆ ಇದರ ಬದಲು ಆದರೆ ನೀವು ರೈಲ್ವೆ ಆಸ್ತಿಯನ್ನು ಹಾನಿ ಮಾಡಬೇಡಿ ಮತ್ತು ಹಿಂಸಾಚಾರದಲ್ಲಿ ಪಾಲ್ಗೊಳ್ಳಬೇಡಿ ಎಂದು ನಾನು ಜನರಿಗೆ ಮನವಿ ಮಾಡುತ್ತೇನೆ ಎಂದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:22 pm, Sat, 18 June 22