ಇಂದು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಇಡೀ ದೇಶ ಕುತೂಹಲದಿಂದ ಕಾಯುತ್ತಿದೆ. ಬೆಳಗ್ಗೆಯಿಂದಲೇ ಸುದ್ದಿ ಮಾಧ್ಯಮಗಳು ಚುನಾವಣಾ ಫಲಿತಾಂಶದ ಸುದ್ದಿಗಳನ್ನು ಬಿತ್ತರಿಸುತ್ತಿವೆ. ರಾಜಕೀಯ ಪಕ್ಷಗಳ ವಕ್ತಾರರು ಡಿಬೇಟ್ಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಒಂದು ಮಹತ್ವದ ನಿರ್ಧಾರ ಮಾಡಿದ್ದು, ನಮ್ಮ ಪಕ್ಷದಿಂದ ಯಾವುದೇ ವಕ್ತಾರನನ್ನೂ ಟಿವಿ ಡಿಬೇಟ್ಗಳಿಗೆ ಕಳಿಸುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ, ಸದ್ಯ ನಮ್ಮ ದೇಶ ಊಹೆಗೂ ನಿಲುಕದ ಬಿಕ್ಕಟ್ಟಿನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂಪೂರ್ಣವಾಗಿ ವೈಫಲ್ಯವಾಗಿದೆ. ಈಗ ನಾವು ಅವುಗಳ ಬಗ್ಗೆ ಚರ್ಚಿಸಬೇಕೇ ಹೊರತು ಚುನಾವಣೆಯ ಸೋಲು ಗೆಲುವುಗಳನ್ನಲ್ಲ ಎಂದು ಹೇಳಿದ್ದಾರೆ.
ನಾವು ಈಗ ಚುನಾವಣಾ ಡಿಬೇಟ್ಗಳಿಗೆ ನಮ್ಮ ಪಕ್ಷದಿಂದ ಯಾವುದೇ ವಕ್ತಾರರನ್ನೂ ಕಳಿಸದೆ ಇರಲು ನಿರ್ಧರಿಸಿದ್ದೇವೆ. ಅದರ ಹೊರತಾಗಿ ಮಾಧ್ಯಮ ಸ್ನೇಹಿತರು ಹೊರಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ. ನಾವು ಈ ಚುನಾವಣೆಯಲ್ಲಿ ಗೆಲ್ಲಬಹುದು.. ಸೋಲಬಹುದು. ಆದರೆ ಈಗ ಜನರು ಆಮ್ಲಜನಕ, ಹಾಸಿಗೆ, ಔಷಧ, ವೆಂಟಿಲೇಟರ್ ಇಲ್ಲದೆ ಪರದಾಡುತ್ತಿದ್ದಾರೆ. ನಾವು ಅವರ ಪರ ನಿಲ್ಲುತ್ತೇವೆ. ಅವರಿಗೆ ಸಹಾಯ ಮಾಡುತ್ತೇವೆ ಎಂದು ಸುರ್ಜೇವಾಲಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರೋಗಿಗಳ ನೆರವಿಗೆ ನಿಂತು, ಅನಾಥ ಶವಗಳಿಗೆ ಮುಕ್ತಿ ಕೊಡುತ್ತಿದ್ದಾರೆ ಹಾವೇರಿಯ ಅಬ್ದುಲ್ ಖಾದರ
ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಊಟಕ್ಕೆ ಹುಡುಕಾಟ, ಹಾಸನದಲ್ಲಿ ಮನಕಲಕುವ ಘಟನೆ