ಪ್ರಧಾನಿ ಮೋದಿ ಪರೆಶಾನಿ ಪೇ ಚರ್ಚಾ ಮಾಡುವುದು ಯಾವಾಗ?; ಇಂಧನ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗ್ಗೆ ಎನ್​​ಸಿಪಿ ತರಾಟೆ

| Updated By: ರಶ್ಮಿ ಕಲ್ಲಕಟ್ಟ

Updated on: Apr 01, 2022 | 1:49 PM

ಒತ್ತಡವನ್ನು ಹೋಗಲಾಡಿಸಲು ಅವರೊಂದಿಗೆ ಸಂವಹನ ನಡೆಸಿದ್ದಕ್ಕಾಗಿ ನಾವು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳುತ್ತೇವೆ. ಆದರೆ ವಿದ್ಯಾರ್ಥಿಗಳ ಪೋಷಕರು ಮತ್ತು ಸಾಮಾನ್ಯ ಜನರ ಕಳವಳವನ್ನು ಪರಿಹರಿಸಲು ಅವರು ಯಾವಾಗ 'ಪರೆಶಾನಿ ಪೇ ಚರ್ಚಾ' (ಸಮಸ್ಯೆಗಳ ಬಗ್ಗೆ ಚರ್ಚೆ) ನಡೆಸಲಿದ್ದಾರೆ?

ಪ್ರಧಾನಿ ಮೋದಿ ಪರೆಶಾನಿ ಪೇ ಚರ್ಚಾ ಮಾಡುವುದು ಯಾವಾಗ?; ಇಂಧನ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ  ಬಗ್ಗೆ ಎನ್​​ಸಿಪಿ ತರಾಟೆ
ನರೇಂದ್ರ ಮೋದಿ
Follow us on

ದೆಹಲಿ: ಇಂಧನ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ವನ್ನು(Pariksha Pe Charcha) ಟೀಕಿಸಿದ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, “ವಿದ್ಯಾರ್ಥಿಗಳ ಪೋಷಕರು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ಮೋದಿ ಯಾವಾಗ ‘ಪರೆಶಾನಿ ಪೇ ಚರ್ಚಾ’ (Pareshani Pe Charcha) ಅನ್ನು ಆಯೋಜಿಸುತ್ತಾರೆ ಎಂದು ಕೇಳಿದರು. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಒತ್ತಡವನ್ನು ಹೋಗಲಾಡಿಸಲು ಅವರೊಂದಿಗೆ ಸಂವಹನ ನಡೆಸಿದ್ದಕ್ಕಾಗಿ ನಾವು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳುತ್ತೇವೆ. ಆದರೆ ವಿದ್ಯಾರ್ಥಿಗಳ ಪೋಷಕರು ಮತ್ತು ಸಾಮಾನ್ಯ ಜನರ ಕಳವಳವನ್ನು ಪರಿಹರಿಸಲು ಅವರು ಯಾವಾಗ ‘ಪರೆಶಾನಿ ಪೇ ಚರ್ಚಾ’ (ಸಮಸ್ಯೆಗಳ ಬಗ್ಗೆ ಚರ್ಚೆ) ನಡೆಸಲಿದ್ದಾರೆ? ಅವರು ಹೇಳಿದರು.  “ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಪ್ರತಿದಿನ ಹೆಚ್ಚಾಗುತ್ತಿವೆ, ಆದರೆ ನಿರುದ್ಯೋಗವು ಕಳವಳದ ವಿಷಯವಾಗಿದೆ” ಎಂದು ಎನ್ ಸಿಪಿ ವಕ್ತಾರರು ಒತ್ತಿ ಹೇಳಿದರು. ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಐದನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಮತ್ತು ವಿದೇಶದಲ್ಲಿರುವ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಒಟ್ಟು 12.12 ಲಕ್ಷ ವಿದ್ಯಾರ್ಥಿಗಳು, 2.71 ಲಕ್ಷ ಶಿಕ್ಷಕರು ಮತ್ತು 90,000 ಪೋಷಕರು ಈ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಉತ್ತಮ ಅಂಕಗಳನ್ನು ಗಳಿಸಲು ಶಿಕ್ಷಕರು ಮತ್ತು ಪೋಷಕರ ಒತ್ತಡದವಿದೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಪಾಲಕರು ತಮ್ಮ ಕನಸುಗಳನ್ನು ಮಕ್ಕಳಿಗೆ ಹೇರಬಾರದು. ಅವರ ಭವಿಷ್ಯವನ್ನು ಮುಕ್ತವಾಗಿ ನಿರ್ಧರಿಸಲು ಅವರಿಗೆ ಅವಕಾಶ ನೀಡಬೇಕು,” ಎಂದು ಅವರು ಹೇಳಿದರು.

ಏತನ್ಮಧ್ಯೆ, ಹತ್ತು ದಿನಗಳಲ್ಲಿ ಒಂಬತ್ತನೇ ಬಾರಿ ಇಂಧನ ಬೆಲೆ ಏರಿಕೆಯಾಗಿರುವುದರಿಂದ, ಕಾಂಗ್ರೆಸ್ ತನ್ನ ಪ್ರತಿಭಟನೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದೆ.

ಪಕ್ಷವು ಗುರುವಾರ ಮೆಹಂಗಾಯಿ ಮುಕ್ತ್ ಭಾರತ್ ಅಭಿಯಾನ್ ಎಂಬ ಮೂರ ಹಂತದ ಅಭಿಯಾನವನ್ನು ಪ್ರಾರಂಭಿಸಿತು. ಕೇಂದ್ರದ ವಿರುದ್ಧ ನಡೆಯುವ ಈ ಅಭಿಯಾನ ಏಪ್ರಿಲ್ 7 ರವರೆಗೆ ಮುಂದುವರಿಯುತ್ತದೆ. ಇಂಧನ ಬೆಲೆ ಏರಿಕೆ ವಿರೋಧಿಸಿ ದೆಹಲಿಯ ರಾಜೀವ್ ಚೌಕ್‌ನಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿದ್ದು, ಒಟ್ಟಾರೆಯಾಗಿ ಲೀಟರ್‌ಗೆ ₹ 6.40 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನಾವು ಸಹಾಯ ಮಾಡುತ್ತೇವೆ, ಅನುಮತಿ ಕೊಡಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಸ್ಟಾಲಿನ್​