ಉತ್ತರ ಪ್ರದೇಶ: ಕ್ರಿಕೆಟ್ ಆಡುವಾಗ ಕುಸಿದುಬಿದ್ದು ವ್ಯಕ್ತಿ ಸಾವು
ವ್ಯಕ್ತಿಯೊಬ್ಬ ಕ್ರಿಕೆಟ್(Cricket) ಆಡುವಾಗ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಎಲ್ಐಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 30 ವರ್ಷದ ಅಧಿಕಾರಿ ಮೃತಪಟ್ಟಿದ್ದಾರೆ. ಝಾನ್ಸಿಯ ಸಿಪ್ರಿ ಬಜಾರ್ ಪ್ರದೇಶದ ನಲ್ಗಂಜ್ ನಿವಾಸಿ ರವೀಂದ್ರ ಅಹಿರ್ವಾರ್ ಎಂದು ಗುರುತಿಸಲಾದ ವ್ಯಕ್ತಿ ಪಂದ್ಯದ ಸಮಯದಲ್ಲಿ ಬೌಲಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾದರು, ನೀರು ಕುಡಿದ ನಂತರ ವಾಂತಿ ಮಾಡಿಕೊಂಡರು ಮತ್ತು ಪ್ರಜ್ಞೆ ಕಳೆದುಕೊಂಡರು.

ಝಾನ್ಸಿ, ನವೆಂಬರ್ 06: ವ್ಯಕ್ತಿಯೊಬ್ಬ ಕ್ರಿಕೆಟ್(Cricket) ಆಡುವಾಗ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಎಲ್ಐಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 30 ವರ್ಷದ ಅಧಿಕಾರಿ ಮೃತಪಟ್ಟಿದ್ದಾರೆ. ಝಾನ್ಸಿಯ ಸಿಪ್ರಿ ಬಜಾರ್ ಪ್ರದೇಶದ ನಲ್ಗಂಜ್ ನಿವಾಸಿ ರವೀಂದ್ರ ಅಹಿರ್ವಾರ್ ಎಂದು ಗುರುತಿಸಲಾದ ವ್ಯಕ್ತಿ ಪಂದ್ಯದ ಸಮಯದಲ್ಲಿ ಬೌಲಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾದರು, ನೀರು ಕುಡಿದ ನಂತರ ವಾಂತಿ ಮಾಡಿಕೊಂಡರು ಮತ್ತು ಪ್ರಜ್ಞೆ ಕಳೆದುಕೊಂಡರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘಟನೆ ಝಾನ್ಸಿಯ ಸರ್ಕಾರಿ ಅಂತರ ಕಾಲೇಜು (ಜಿಐಸಿ) ಮೈದಾನದಲ್ಲಿ ನಡೆದಿದ್ದು, ಅಲ್ಲಿ ರವೀಂದ್ರ ಹಲವು ವಾರಗಳ ನಂತರ ಆಟವಾಡಲು ಹೋಗಿದ್ದರು. ಅವರ ತಂಡದ ಸದಸ್ಯರು ಅವರನ್ನು ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ರವೀಂದ್ರ ಆರೋಗ್ಯವಾಗಿಯೇ ಇದ್ದರು, ಬೆಳಗ್ಗೆ ಬೇಗ ಎಚ್ಚರವಾಗಿತ್ತು ಎಂದು ತಂದೆಯೊಂದಿಗೆ ಚಹಾ ಸೇವಿಸಿದ್ದರು. ಬಳಿಕ ಅವರು ಕ್ರಿಕೆಟ್ ಆಡಲು ಜಿಐಸಿ ಮೈದಾನಕ್ಕೆ ಹೋದರು. ಸುಮಾರು ಒಂದು ಗಂಟೆಯ ನಂತರ, ಅವರ ಆರೋಗ್ಯ ಹದಗೆಟ್ಟಿದೆ ಎಂದು ಅರಿವಾಗಿತ್ತು.
ಮತ್ತಷ್ಟು ಓದಿ: ರಾಜ್ಯದಲ್ಲಿ ಮುಂದುವರಿದ ಹೃದಯಾಘಾತದ ಸಾವಿನ ಸರಣಿ, ಇಂದು ಒಂದೇ ದಿನ ಹಾರ್ಟ್ ಅಟ್ಯಾಕ್ ಗೆ 6 ಮಂದಿ ಬಲಿ!
ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೂವರು ಸಹೋದರರಲ್ಲಿ ಎರಡನೆಯವರಾದ ರವೀಂದ್ರ ಎರಡು ವರ್ಷಗಳ ಹಿಂದೆ ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇರಿದ್ದರು ಮತ್ತು ಅವರ ಕುಟುಂಬದ ಪ್ರಕಾರ, ಅವರ ಕೆಲಸ ಮತ್ತು ಕ್ರಿಕೆಟ್ ಎರಡರ ಬಗ್ಗೆಯೂ ಅವರಿಗೆ ಅಪಾರ ಒಲವು ಇತ್ತು.
ನೀರು ಕುಡಿಯಲು ನಿಲ್ಲಿಸಿದಾಗ ಅವರು ಕೆಲವು ಓವರ್ ಬೌಲಿಂಗ್ ಮುಗಿಸಿದ್ದರು ಎಂದು ಮೈದಾನದಲ್ಲಿದ್ದ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ನೀರು ಕುಡಿದ ಕೂಡಲೇ ಅವರು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು ಮತ್ತು ಮೈದಾನದಲ್ಲಿ ಕುಸಿದು ಬಿದ್ದರು. ದೇಹದಲ್ಲಿ ನೀರಿನ ಕೊರತೆಯಿಂಟಾಗಿ ಹೀಗೆ ಆಗಿರಬಹುದು ಎಂದು ಎಲ್ಲರೂ ಅಂದುಕೊಂಡರು ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯಿಸದಿದ್ದಾಗ ಭಯಗೊಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ. ಸಚಿನ್ ಮಹೋರ್ ಮಾತನಾಡಿ, ಸಂಭವನೀಯ ಹೃದಯ ಸ್ತಂಭನವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತಿವೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕವೇ ನಿಖರವಾದ ಕಾರಣತಿಳಿದುರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




