ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ: ರಾಹುಲ್ ಗಾಂಧಿ

|

Updated on: Feb 26, 2023 | 3:07 PM

Rahul Gandhi ಗೌತಮ್ ಅದಾನಿಯನ್ನು ಟೀಕಿಸಿದ ರಾಹುಲ್, ಪ್ರಧಾನಿ ಮೋದಿಯವರೊಂದಿಗೆ ಇವರಿಗೆ ಏನು ಸಂಬಂಧವಿದೆ ?. ಸರ್ಕಾರ ಮತ್ತು ಅದರ ಮಂತ್ರಿಗಳು ಆ ಉದ್ಯಮಿಯ ರಕ್ಷಣೆಗೆ ಬರುತ್ತಿರುವುದು ಯಾಕೆ ಎಂದು ಕಾಂಗ್ರೆಸ್‌ನ ರಾಯ್‌ಪುರದ ಸರ್ವಸದಸ್ಯರ ಅಧಿವೇಶನದಲ್ಲಿ ಹೇಳಿದ್ದಾರೆ.

ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ಬಿಜೆಪಿ ನಾಯಕರು ಸಂಸತ್ತಿನಲ್ಲಿ ಕೋಟ್ಯಾಧಿಪತಿಯ ರಕ್ಷಣೆಗೆ ಏಕೆ ಬಂದರು ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು “ಗೌತಮ್ ಅದಾನಿ(Gautam Adani) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಒಂದೇ” ಎಂದು ಆರೋಪಿಸಿದ್ದಾರೆ. ಗೌತಮ್ ಅದಾನಿಯನ್ನು ಟೀಕಿಸಿದ ರಾಹುಲ್, ಪ್ರಧಾನಿ ಮೋದಿಯವರೊಂದಿಗೆ ಇವರಿಗೆ ಏನು ಸಂಬಂಧವಿದೆ ?. ಸರ್ಕಾರ ಮತ್ತು ಅದರ ಮಂತ್ರಿಗಳು ಆ ಉದ್ಯಮಿಯ ರಕ್ಷಣೆಗೆ ಬರುತ್ತಿರುವುದು ಯಾಕೆ ಎಂದು ಕಾಂಗ್ರೆಸ್‌ನ ರಾಯ್‌ಪುರದ ಸರ್ವಸದಸ್ಯರ ಅಧಿವೇಶನದಲ್ಲಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಅದಾನಿ ಬಗ್ಗೆ ಯಾರೂ ಪ್ರಶ್ನೆಗಳನ್ನು ಕೇಳುವಂತಿಲ್ಲ… ಸತ್ಯ ಹೊರಬರುವವರೆಗೂ ನಾವು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ ಎಂದು ಗಾಂಧಿ ಹೇಳಿದರು.

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ, ಅಮೆರಿಕ ಮೂಲದ ಹಿಂಡೆನ್‌ಬರ್ಗ್, ಕೈಗಾರಿಕೋದ್ಯಮಿ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸದ ಕಾರಣ ಮೋದಿ ಅವರು ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಗಾಂಧಿ ಆರೋಪಿಸಿದರು. ಅವರು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲಿಲ್ಲ ಎಂದು ಅವರು ಹೇಳಿದರು.


“ನನಗೆ ತೃಪ್ತಿ ಇಲ್ಲ, ಆದರೆ ಇದು ಸತ್ಯವನ್ನು ಬಹಿರಂಗಪಡಿಸುತ್ತದೆ. ವಿಚಾರಣೆಯ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ, ಅವರು ಸ್ನೇಹಿತರಲ್ಲದಿದ್ದರೆ, ಅವರು ತನಿಖೆಗೆ ಒಪ್ಪಬೇಕಾಗಿತ್ತು, ರಕ್ಷಣಾ ಕ್ಷೇತ್ರದ ಶೆಲ್ ಕಂಪನಿಗಳು ಮತ್ತು ಬೇನಾಮಿ ಹಣದ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಆದರೆ ಪ್ರಧಾನ ಮಂತ್ರಿ ಅದರ ಬಗ್ಗೆ ಏನನ್ನೂ ಹೇಳಲಿಲ್ಲ.ಪ್ರಧಾನಿ ಅವರನ್ನು ರಕ್ಷಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ, ”ಎಂದು ಗಾಂಧಿಯವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯಕ್ಕೆ ಪ್ರಧಾನಿಯವರ ಉತ್ತರದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಕರ್ನಾಟಕದ ಲಾಲಿಹಾಡಿಗೆ ಮನಸೋತ ಮೋದಿ, ಮನ್ ಕೀ ಬಾತ್​​ನಲ್ಲಿ ಮೆಚ್ಚಿದ ಮಂಜುನಾಥ್​ ಯಾರು? ಇಲ್ಲಿದೆ ಮಾಹಿತಿ

ಭಾರತ್ ಜೋಡೋ ಯಾತ್ರೆಯಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ನಾನು ನನ್ನ ರಾಷ್ಟ್ರಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದೇನೆ. ಯಾತ್ರೆಯಲ್ಲಿ ನನಗೆ ಮತ್ತು ಪಕ್ಷಕ್ಕೆ ಸಾವಿರಾರು ಮಂದಿ ಸಂಪರ್ಕ ಹೊಂದಿದ್ದರು. ನಾನು ರೈತರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದೇನೆ ಮತ್ತು ಅವರ ನೋವನ್ನು ಅರಿತುಕೊಂಡಿದ್ದೇನೆ ಎಂದು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ 85 ನೇ ಅಧಿವೇಶನದಲ್ಲಿ ಹೇಳಿದ್ದಾರೆ.
52 ವರ್ಷಗಳು ಕಳೆದಿವೆ, ಮತ್ತು ನನಗೆ ಇನ್ನೂ ಮನೆ ಇಲ್ಲ, ಆದರೆ ಕಾಶ್ಮೀರವನ್ನು ತಲುಪಿದಾಗ ಅದು ಮನೆಯಂತೆ ಭಾಸವಾಯಿತು. ಎಲ್ಲ ಜಾತಿ, ವಯೋಮಾನದವರಿಗೂ ಮನೆಎಂಬ ಭಾವನೆ ಮೂಡಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಯಾತ್ರೆಯ ಸಮಯದಲ್ಲಿ ಜನರು ನನ್ನೊಂದಿಗೆ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತಿರಲಿಲ್ಲ, ಆದರೆ ನಾನು ಕಾಶ್ಮೀರವನ್ನು ತಲುಪಿದಾಗ ಎಲ್ಲವೂ ಬದಲಾಯಿತು ಎಂದಿದ್ದಾರೆ ರಾಹುಲ್ ಗಾಂಧಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ