ದೀದಿ ಓ ದೀದಿ ಎಂದು ಕರೆದ ಮೋದಿಯನ್ನೇಕೆ ಅನರ್ಹ ಮಾಡಿಲ್ಲ?, ಅವರಿಗೇನು ಬೇರೆ ಕಾನೂನು ಇದೆಯೇ?: ಟಿಎಂಸಿ

ದೀದಿ ಓ ದೀದಿ ಎಂದು ಸಿಎಂ ಅವರು ಕರೆದು ಮಹಿಳೆಯರನ್ನು ಅವಮಾನಿಸಿದ ಭಾರತದ ಪ್ರಧಾನಿಯ ಸದಸ್ಯತ್ವವನ್ನು ರದ್ದುಗೊಳಿಸಿಲ್ಲ, ಅವರ ಸದಸ್ಯತ್ವವನ್ನು ಏಕೆ ರದ್ದುಗೊಳಿಸಬಾರದು? ಅವರು ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ದೀದಿ ಓ ದೀದಿ ಎಂದು ಕರೆದ ಮೋದಿಯನ್ನೇಕೆ ಅನರ್ಹ ಮಾಡಿಲ್ಲ?, ಅವರಿಗೇನು ಬೇರೆ ಕಾನೂನು ಇದೆಯೇ?: ಟಿಎಂಸಿ
ಅಭಿಷೇಕ್ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on: Mar 29, 2023 | 7:55 PM

ಕೋಲ್ಕತ್ತಾ: ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC), ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ದೀದಿ ಓ ದೀದಿ ಎಂಬ ಹೇಳಿಕೆ ಟೀಕಿಸಿದ್ದು ಕಾನೂನಿನಲ್ಲಿ ಈ ರೀತಿ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದೆ. ಪ್ರಧಾನಿ ಮೋದಿಯವರ ಉಪನಾಮದ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಗೆ(Rahul Gandhi) ಸೂರತ್ ನ್ಯಾಯಾಲಯದ ತೀರ್ಪನ್ನು ಪೂರ್ವನಿದರ್ಶನವಾಗಿ ತೆಗೆದುಕೊಂಡರೆ, ರಾಜ್ಯದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧವೂ ಮೊಕದ್ದಮೆ ಹೂಡಬೇಕು, ಶಿಕ್ಷೆ ವಿಧಿಸಬೇಕು ಮತ್ತು ಅನರ್ಹಗೊಳಿಸಬೇಕು ಎಂದು ಟಿಎಂಸಿ ಹೇಳಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸಚಿವರ ವಿರುದ್ಧ ಮಾಡಿದ ಹೇಳಿಕೆಗಾಗಿ ಸುವೇಂದು ಅಧಿಕಾರಿ ವಿರುದ್ಧ ಒಂದು ತಿಂಗಳೊಳಗೆ ಪ್ರಕರಣ ದಾಖಲಿಸಬೇಕೆಂದು ಬಯಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ದೀದಿ ಓ ದೀದಿ ಲೇವಡಿ ಕೂಗು ಮೂಲಕ ಪ್ರಧಾನಿ ಮೋದಿ ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದಿದ್ದಾರೆ.

ದೀದಿ ಓ ದೀದಿ ಎಂದು ಸಿಎಂ ಅವರು ಕರೆದು ಮಹಿಳೆಯರನ್ನು ಅವಮಾನಿಸಿದ ಭಾರತದ ಪ್ರಧಾನಿಯ ಸದಸ್ಯತ್ವವನ್ನು ರದ್ದುಗೊಳಿಸಿಲ್ಲ, ಅವರ ಸದಸ್ಯತ್ವವನ್ನು ಏಕೆ ರದ್ದುಗೊಳಿಸಬಾರದು? ಅವರು ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಕಳೆದ ವರ್ಷ ಪರಿಶಿಷ್ಟ ಜಾತಿಗೆ ಸೇರಿದ ತೃಣಮೂಲ ಶಾಸಕರೊಬ್ಬರ ಬಗ್ಗೆ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರ ಹೇಳಿಕೆಯನ್ನು ಬ್ಯಾನರ್ಜಿ ಬಿಜೆಪಿಗೆ ನೆನಪಿಸಿದ್ದಾರೆ.

ಇದನ್ನೂ ಓದಿ:Mamata Banerjee: ರಾಷ್ಟ್ರಗೀತೆಗೆ ಅಗೌರವ ಪ್ರಕರಣ: ಹೈಕೋರ್ಟ್​ನಲ್ಲಿ ಮಮತಾಗಿಲ್ಲ ರಿಲೀಫ್

ನವೆಂಬರ್‌ನಲ್ಲಿ ಟಿಎಂಸಿ ಈ ಬಗ್ಗೆ ವಿಡಿಯೊ ಟ್ವೀಟ್ ಮಾಡಿದ್ದು. ಅದರಲ್ಲಿ ಸುವೇಂದು ಅಧಿಕಾರಿ ತೃಣಮೂಲ ಶಾಸಕ ದೇಬನಾಥ್ ಹನ್ಸ್ಡಾ ಮತ್ತು ಸಚಿವ ಬಿರ್ಬಹಾ ಹನ್ಸ್ಡಾ ಅವರು ತಮ್ಮ ಬೂಟುಗಳ ಕೆಳಗೆ ಉಳಿದಿರುವ ಮಕ್ಕಳು ಎಂದು ಹೇಳಿದ್ದರು.

‘ಮೋದಿ ಓ ಮೋದಿ’ ಒಬಿಸಿ ಭಾವನೆಗಳಿಗೆ ಧಕ್ಕೆ ತಂದರೆ ಮತ್ತು ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆಯಾದರೆ, ವಿರೋಧ ಪಕ್ಷದ ನಾಯಕನಿಗೆ ಯಾಕೆ ಎರಡು ವರ್ಷ ಏಕೆ ಶಿಕ್ಷೆ ವಿಧಿಸಬಾರದು? ಎಂದು ಬ್ಯಾನರ್ಜಿ ಕೇಳಿದ್ದಾರೆ.

ನಿಮಗೇನು ಪ್ರತ್ಯೇಕ ಕಾನೂನು ಇದೆಯೇ? ನಾನು ತೃಣಮೂಲ ಕಾಂಗ್ರೆಸ್ ಆಗಿರುವುದರಿಂದ ಕಾನೂನು ನನಗೆ ಬೇರೆ, ನೀವು ಬಿಜೆಪಿಯೊಂದಿಗೆ ಇರುವುದರಿಂದ ನಿಮಗೆ ಬೇರೆ ಇದೆಯೇ? ನಾನು ನಮ್ಮ ಕಾನೂನು ಘಟಕವನ್ನು ಕೇಳಲು ಬಯಸುತ್ತೇನೆ, ವಿಶೇಷವಾಗಿ ವಕೀಲರಾಗಿರುವವರು ಈ ಸೂರತ್ ಕೋರ್ಟ್ ತೀರ್ಪನ್ನು ಅಸ್ತ್ರವಾಗಿ ಬಳಸಬೇಕೆಂದು ನಾನು ಬಯಸುತ್ತೇನೆ. ಈ ಕುರಿತು ಒಂದು ತಿಂಗಳಲ್ಲಿ ಅರ್ಜಿ ಸಲ್ಲಿಸುವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ