
ನವದೆಹಲಿ, ಜೂನ್ 16: ‘‘ಹೆಂಡತಿಯಿಂದ ಇಂದು ನಾನು ಜೀವಂತವಾಗಿದ್ದೇನೆ ಆಕೆಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲ್ದು’’ ಎಂದು ಡಾ. ಉಮಂಗ್ ಪಟೇಲ್ ಹೇಳಿದ್ದಾರೆ. ಉಮಂಗ್ ಪಟೇಲ್ ವೃತ್ತಿಯಲ್ಲಿ ವೈದ್ಯ.ಅವರು ಕಳೆದ ಐದು ವರ್ಷಗಳಿಂದ ಲಂಡನ್ನ ನಾರ್ಥಾಂಪ್ಟನ್ನಲ್ಲಿ ವಾಸವಿದ್ದಾರೆ.
ಉಮಂಗ್ ಅವರ ತಂದೆ ಕೂಡ ವೈದ್ಯರೇ ಆದರೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕಾರಣ ಅನಿವಾರ್ಯವಾಗಿ ಭಾರತಕ್ಕೆ ಮರಳಬೇಕಾಗಿತ್ತು.
ಮೇ 24ರಂದು ಅವರು ಲಂಡನ್ನಿಂದ ತಮ್ಮ ಪತ್ನಿಯೊಂದಿಗೆ ಲಂಡನ್ನಿಂದ ಬಂದಿದ್ದರು. ಜೂನ್ 12ರಂದು ಪತ್ನಿಯನ್ನು ಇಲ್ಲೇ ಬಿಟ್ಟು ಲಂಡನ್ಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದರು. ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಬುಕ್ ಮಾಡಿದ್ದರು. ಅದು ಟೇಕ್ ಆಫ್ ಆದ ತಕ್ಷಣ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿತು, ವಿಮಾನದಲ್ಲಿ 241 ಜನರು ಹಾಗೂ ಉಳಿದವರು ಸೇರಿ 270 ಮಂದಿ ಸಾವನ್ನಪ್ಪಿದ್ದರು.
ಡಾ. ಉಮಂಗ್ ಯುಕೆಯಿಂದ ತಮ್ಮ ಪತ್ನಿ, ಪುತ್ರರು ಹಾಗೂ ಅಜ್ಜಿಯೊಂದಿಗೆ ಬಂದಿದ್ದರು. ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಕೊಯ್ಡಮ್ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆಗೆ ಬಂದಿದ್ದರು.ಜೂನ್ 9ರಂದು ತಮ್ಮ ಪತ್ನಿಯನ್ನು ಅವರ ತಾಯಿಯ ಮನೆಗೆ ಬಿಟ್ಟು ತಾವೊಬ್ಬರೇ ಹೊರಡುವ ನಿರ್ಧಾರ ಮಾಡಿದ್ದರು. ಟಿಕೆಟ್ ಬುಕ್ ಕೂಡ ಆಗಿತ್ತು. ಆದರೆ ಅತ್ತೆಯ ಮನೆಗೆ ಹೋಗುವಷ್ಟರ ಹೊತ್ತಿಗೆ ತೀವ್ರ ಜ್ವರವಿತ್ತು, ನಡೆದಾಡುವುದೂ ಕಷ್ಟವಾಗಿತ್ತು.
ಮತ್ತಷ್ಟು ಓದಿ: ಏರ್ ಇಂಡಿಯಾ ವಿಮಾನ ಬಿದ್ದ ರಭಸಕ್ಕೆ ಅಹಮದಾಬಾದ್ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ಹೀಗಾಗಿ ಜೂನ್ 12ರಂದು ನೀವು ಯುಕೆಗೆ ಹೋಗುವುದು ಬೇಡ ಟಿಕೆಟ್ ಕ್ಯಾನ್ಸಲ್ ಮಾಡಿಬಿಡಿ ಎಂದು ಪತ್ನಿ ತುಂಬಾ ಒತ್ತಾಯ ಮಾಡಿದ್ದರು. ಕೊನೆಗೂ ಉಮಂಗ್ ಅದಕ್ಕೆ ಒಪ್ಪಿ ಅಂದು ಲಂಡನ್ಗೆ ಪ್ರಯಾಣ ಬೆಳೆಸಿರಲಿಲ್ಲ. ಹೀಗಾಗಿ ಅವರು ಜೀವಂತವಾಗಿದ್ದಾರೆ. ತಾನು ಜೂನ್ 12 ರ ಟಿಕೆಟ್ ಅನ್ನು ರದ್ದುಗೊಳಿಸಿ, ಜೂನ್ 15 ಕ್ಕೆ ಇನ್ನೊಂದು ಟಿಕೆಟ್ ಬುಕ್ ಮಾಡಿದ್ದೆ, ಅದಾದ ಬಳಿಕ ವಿಮಾನ ಅಪಘಾತದ ಸುದ್ದಿ ಕೇಳಿದೆ. ದೇವರೇ ಹೆಂಡತಿಯ ರೂಪದಲ್ಲಿ ಬಂದು ನನ್ನನ್ನು ರಕ್ಷಿಸಿದ್ದಾನೆ ಎಂದು ಉಮಂಗ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Mon, 16 June 25