AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಪ್ರಧಾನಿ ಮೋದಿ ಬಳಿ ಹೇಳಿದ್ದೇನು? ಇಲ್ಲಿದೆ ವಿವರ

ಅಹಮದಾಬಾದ್​​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್. ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಇಡೀ ಅಪಘಾತದ ಬಗ್ಗೆ ಮೋದಿ ಬಳಿ ಮಾತನಾಡಿದ್ದಾರೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ಬಂದಿದ್ಹೇಗೆ ಎಂಬ ಬಗ್ಗೆ ಅವರು ಪ್ರಧಾನಿಗೆ ಮಾಹಿತಿ ನೀಡಿದ್ದಾರೆ.

ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಪ್ರಧಾನಿ ಮೋದಿ ಬಳಿ ಹೇಳಿದ್ದೇನು? ಇಲ್ಲಿದೆ ವಿವರ
ಅಹಮದಾಬಾದ್​ನ ಸಿವಿಲ್ ಆಸ್ಪತ್ರೆಯಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
Ganapathi Sharma
|

Updated on:Jun 13, 2025 | 2:12 PM

Share

ಅಹಮದಾಬಾದ್, ಜೂನ್ 13: ಗುಜರಾತ್​ನ ಅಹಮದಾಬಾದ್​ನಲ್ಲಿ ಏರ್ ಇಂಡಿಯಾ ವಿಮಾನ ಗುರುವಾರ ಅಪಘಾತಕ್ಕೀಡಾಗಿ  (Ahmedabad plane crash) ವಿಮಾನದಲ್ಲಿದ್ದ 241 ಜನರು ಮೃತಪಟ್ಟು, ಒಬ್ಬರು ವ್ಯಕ್ತಿ ಪವಾಡಸದೃಶರಾಗಿ ಪಾರಾಗಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್​ನ ಸಿವಿಲ್ ಆಸ್ಪತ್ರೆಯಲ್ಲಿ ಭೇಟಿಯಾದರು. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದ ಭಯಾನಕ ಸಂದರ್ಭದ ಬಗ್ಗೆ ವಿಶ್ವಾಸ್ ಕುಮಾರ್ ಅವರ ಬಳಿಯಿಂದ ಪ್ರಧಾನಿ ಮೋದಿ (Narendra Modi) ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ, ‘ಅಪಘಾತದಲ್ಲಿ ಬದುಕುಳಿದಿರುವುದನ್ನು ನಂಬಲಾಗುತ್ತಿಲ್ಲ’ ಎಂದು ವಿಶ್ವಾಸ್ ಕುಮಾರ್ ಹೇಳಿದರು.

‘ಸಾವಿನ ಸನಿಹದಲ್ಲಿದ್ದಂತೆ ಭಾಸವಾಯಿತು!’

ಅಪಘಾತದ ಸಂದರ್ಭದಲ್ಲಿ ಕೆಲವು ಕ್ಷಣಗಳ ಕಾಲ, ‘ನಾನು ಇನ್ನೇನು ಸಾಯುತ್ತೇನೆ’ ಎಂದು ಅನಿಸಿತು. ಆದರೆ ಕಣ್ಣು ತೆರೆದಾಗ, ಜೀವಂತವಾಗಿದ್ದೇನೆ ಎಂಬುದು ಅರಿವಾಯಿತು. ತಕ್ಷಣವೇ ಸೀಟ್ ಬೆಲ್ಟ್ ತೆರೆದು ಹೊರಬರಲು ಪ್ರಯತ್ನಿಸಿದೆ. ನಂತರ ಹೊರಬಂದೆ. ನನ್ನ ಕಣ್ಣೆದುರೇ ವಿಮಾನದಲ್ಲಿದ್ದ ಏರ್ ಹೋಸ್ಟೆಸ್​​​ಗಗಳು, ಚಿಕ್ಕಮ್ಮ ಮತ್ತು ಚಿಕ್ಕಪ್ಪ ಎಲ್ಲರೂ ಕಣ್ಮರೆಯಾದರು. ನನ್ನೊಂದಿಗೆ ಇದ್ದ ಯಾರೂ ಉಳಿದಿರಲಿಲ್ಲ ಎಂದು ವಿಶ್ವಾಸ್ ಕುಮಾರ್, ಅಪಘಾತದ ಸಂದರ್ಭದ ಭೀಕರತೆಯನ್ನು ಬಿಚ್ಚಿಟ್ಟರು.

‘ಜನರು ಜೀವಂತ ಸುಟ್ಟುಹೋಗುತ್ತಿದ್ದರು’

‘ಜನರು ಜೀವಂತ ಉರಿಯುತ್ತಿರುವುದನ್ನು ನಾನು ನೋಡಿದೆ. ನನ್ನ ಸೀಟು 11-ಎ ಆಗಿತ್ತು. ವಿಮಾನವು ಕಟ್ಟಡದ ನೆಲ ಮಹಡಿಗೆ ಡಿಕ್ಕಿ ಹೊಡೆದು ಆ ಭಾಗದಲ್ಲಿತ್ತು. ಬೆಂಕಿಯಿಂದಾಗಿ ಎಡಗೈ ಸುಟ್ಟುಹೋಗಿತ್ತು. ಅಲ್ಲಿಂದ ಹೊರ ಜಿಗಿದು ಓಡಿ ಹೊರಬಂದೆ. ಎಲ್ಲೆಡೆ ಜನರು ಬಿದ್ದಿದ್ದರು. ನನ್ನನ್ನು ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆತಂದರು’ ಎಂದು ವಿಶ್ವಾಸ್ ಕುಮಾರ್ ತಿಳಿಸಿದರು.

ಇದನ್ನೂ ಓದಿ
Image
ವಿಮಾನ ಪತನದ ಕಾರಣ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ
Image
ವಿಮಾನ ದುರಂತ ಘಟನೆ ಹೃದಯವಿದ್ರಾವಕ: ಅಹಮದಾಬಾದ್ ಭೇಟಿ ಬಳಿಕ ಪ್ರಧಾನಿ ಮೋದಿ
Image
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
Image
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ

ಈ ಅಪಘಾತವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಹೇಗೆ ಬದುಕುಳಿದೆ ಎಂಬುದು ಈಗಲೂ ನನಗೆ ಸರಿಯಾಗಿ ತಿಳಿದಿಲ್ಲ. ಜನರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿನ ಜನರು ತುಂಬಾ ಒಳ್ಳೆಯವರು ಎಂದು ಅವರು ಹೇಳಿದರು.

ಇದನ್ನೂ ಓದಿ:  ಬ್ಲ್ಯಾಕ್ ಬಾಕ್ಸ್ ಸಂಗ್ರಹದಿಂದ ತನಿಖೆಯ ವರೆಗೆ, ವಿಮಾನ ಪತನದ ಕಾರಣ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ

ವಿಶ್ವಾಸ್ ಕುಮಾರ್ ರಮೇಶ್ 40 ವರ್ಷದ ಬ್ರಿಟಿಷ್ ಪ್ರಜೆಯಾಗಿದ್ದು, ಅವರ ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಅವರು ಸಹೋದರ ಅಜಯ್ ಕುಮಾರ್ ರಮೇಶ್ (45) ಅವರೊಂದಿಗೆ ಬ್ರಿಟನ್​​ಗೆ ಹಿಂತಿರುಗುತ್ತಿದ್ದರು. ವಿಶ್ವಾಸ್ ವಿಮಾನದಲ್ಲಿ 11A ನಲ್ಲಿ ಕುಳಿತಿದ್ದರೆ, ಅವರ ಸಹೋದರ ಮತ್ತೊಂದು ಸಾಲಿನಲ್ಲಿ ಕುಳಿತಿದ್ದರು.

ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್​​ನಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಇದುವರೆಗೆ 265 ಜನ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್​ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಮೃತಪಟ್ಟಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:11 pm, Fri, 13 June 25

ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ